ಕಲಬುರಗಿ,ಸೆ.23: ನಗರದ ಗಂಜ್ ಬಸ್ ನಿಲ್ದಾಣದಲ್ಲಿ ಬಸ್ ಹತ್ತುತ್ತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‍ನಲ್ಲಿದ್ದ 3.80 ರೂ.ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಚಿಂಚೋಳಿ ತಾಲ್ಲೂಕಿನ ರಾಣಾಪುರ ತಾಂಡಾ ನಿವಾಸಿ ಸೀಮಾ ಶಾಮರಾವ್ ರಾಠೋಡ ಎಂಬುವವರು ಚಿನ್ನಾಭರಣ ಕಳೆದುಕೊಂಡವರು.
ಬಸ್ ಹತ್ತುತ್ತಿದ್ದವೇಳೆ ವ್ಯಾನಿಟಿ ಬ್ಯಾಗ್‍ನಲ್ಲಿದ್ದ 38 ಗ್ರಾಂ ಬಂಗಾರದ ವಿವಿಧ ಆಭರಣಗಳನ್ನು ಕದಿಯಲಾಗಿದೆ ಎಂದು ಸೀಮಾ ದೂರಿನಲ್ಲಿ ತಿಳಿಸಿದ್ದಾರೆ.
ಕಲಬುರಗಿ ಚೌಕ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.























