ಜಮಖಂಡಿ:ಸೆ.19:ಪದವಿಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ದಿ.17:09:2025 ರಂದು ಮುಧೋಳ ನಗರದಲ್ಲಿ ಜರುಗಿದ ಜಿಲ್ಲಾ ಮಟ್ಟದ ಫುಟ್‍ಬಾಲ್ ಪಂದ್ಯಾಟದಲ್ಲಿ ಜಮಖಂಡಿ ಬಾಲಕರ ಸರಕಾರಿ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಗೆಲವು ಸಾದಿಸಿ ಸತತವಾಗಿ ಮೂರನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದೆ ಎಂದು ಕಾಲೇಜಿನ ಕ್ರೀಡಾ ವ್ಯವಸ್ಥಾಪಕ ಅಶೋಕ ರಾಮದುರ್ಗ ತಿಳಿಸಿದರು.
ಹಳೆ ವಿದ್ಯಾರ್ಥಿ ಸಂಘದ ಅದ್ಯಕ್ಷ ಪ್ರದೀಪ ಮೆಟಗುಡ್ಡ ಮಾತನಾಡಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಮುಧೋಳ ನಗರದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪುಟಬಾಲ ಪದ್ಯಾವಳಿಯಲ್ಲಿ ಭಾಗಿಯಾಗಿ ವಿಜಯಶಾಲಿಯಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ತುಂಬ ಕುಸಿ ವಿಷಯ ಅವರಿಗೆ ಅಭಿನಂದಿಸಿ ಶುಭ ಹಾರೈಸಿದರು.
ಪ್ರಾಚಾರ್ಯರ ಎಸ್.ಎಸ್.ಬಿರಾದಾರ, ತರಬೇತಿದಾರ ಕರಿಯಪ್ಪ ಪೂಜಾರಿ, ಪರಶುರಾಮ ಜಿಟ್ಟಿ,ರಾಕೇಶ ಗುರವ ಇನ್ನಿತರರು ಇದ್ದರು
























