Home ಜಿಲ್ಲೆ ಕಲಬುರಗಿ ದಣಿದವರ ದಾಹ ನೀಗಿಸಲು ಡಾ.ಫಾರುಕ್ ಮಣ್ಣೂರ ಮಹತ್ವದ ಸೇವೆ

ದಣಿದವರ ದಾಹ ನೀಗಿಸಲು ಡಾ.ಫಾರುಕ್ ಮಣ್ಣೂರ ಮಹತ್ವದ ಸೇವೆ

ಶಹಾಬಾದ್: ಏ.20:ಬೇಸಿಗೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಶಹಾಬಾದ ನಗರಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಸಾಮಾಜ ಸೇವಕ ಡಾ. ಫಾರೂಕ್ ಮಣೂರ ಅವರು ಶಹಬಾದ ಪಟ್ಟಣದ ನಾಲ್ಕು ಕಡೆಗಳಲ್ಲಿ ಜನ ದಟ್ಟಣೆ ಇರುವ ಪ್ರದೇಶದಲ್ಲಿ ತಂಪಾದ ಶುದ್ಧ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಿದ್ದಾರೆ.

ನೂತನ ಶುದ್ಧ ತಂಪು ಕುಡಿಯುವ ನೀರಿನ ಕೇಂದ್ರಗಳನ್ನು ಇಂದು ಶಹಾಬಾದ್ ಬಸ್ ನಿಲ್ದಾಣ, ಹಳೆ ಶಹಾಬಾದ್, ರಾಮ್ ಸರ್ಕಲ್ ಹಾಗೂ ಬೆಂಡಿ ಬಜಾರ್ ಪ್ರದೇಶಗಳಲ್ಲಿ ಡಾ. ಫಾರೂಕ್ ಮಣ್ಣೂರ ಉದ್ಘಾಟಿಸಿದ್ದರು.

ಈ ಸಂದರ್ಭದಲ್ಲಿ ಡಾ. ಫಾರುಕ್ ಮಣ್ಣೂರ ಮಾತನಾಡಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದ್ದು, ನೀರು ಸರಬರಾಜಿಗಾಗಿ ಪ್ರತ್ಯೇಕ ವಾಹನ ವ್ಯವಸ್ಥೆ ಹಾಗೂ ನೀರಿನ ಕ್ಯಾನ್ಗಳನ್ನು ನಿರ್ವಹಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬೇಸಿಗೆಯ ತಾಪಮಾನದಿಂದ ಬಳಲುತ್ತಿರುವ ಸಾರ್ವಜನಿಕರು, ಕಾರ್ಮಿಕರು, ಆಟೋ ಚಾಲಕರು , ರೈತರು, ಕೂಲಿಕಾರ್ಮಿಕರು, ರಸ್ತೆ ಬದಿ ವ್ಯಾಪಾರಿಗಳು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೇಸಿಗೆ ಮುಗಿಯುವವರೆಗೆ ಈ ಸೇವೆಯನ್ನು ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.

ನ್ಯಾಯವಾದಿ ಶರಣಬಸಪ್ಪ ಖೇಣಿ, ಅವರು ಮಾತನಾಡಿ ಡಾ. ಫಾರುಕ್ ಮಣ್ಣೂರ ಅವರು ಜಿಲ್ಲೆಯ 750 ಕ್ಷಯ ರೋಗಿಗಳಿಗೆ ದತ್ತು ಪಡೆದು ಪೌಷ್ಠಿಕ ಆಹರ ವಿತರಣೆ ಮಾಡಿದ್ದಾರೆ, ಕಲಬುರಗಿ ನಗರಾದ್ಯಂತ ಕಳೆದ 1 ವರ್ಷದಿಂದ ನಿರಂತರವಾಗಿ ಉಚಿತವಾಗಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಪೂರೈಸುತ್ತಿದ್ದಾರೆ, ಮಧುಮೇಹ ಮುಕ್ತ ಕಲಬುರಗಿ ಉದ್ದೇಶದಿಂದ ಉಚಿತವಾಗಿ ಮಧೂಮೇಹ ತಪಾಸಣೆ ಅಭೀಯಾನ ಹಮ್ಮಿಕೊಂಡಿದ್ದಾರೆ , ಕಲಬುರಗಿ ಜಿಲ್ಲೆಯ ಸುಮಾರು 360 ಬಡ ಹೇಣ್ಣುಮಕ್ಕಳಿಗೆ ಸುಕನ್ಯ ಸಮೃದ್ದಿ ಯೋಜನೆ ಅಡಿಯಲ್ಲಿ ದತ್ತು ಪಡೆದು 18 ವರ್ಷಗಳ ವರೆಗೆ ಅವರ ಹಣದ ಕಂತ್ತನ್ನು ಅವರು ಪಾವತಿಸುತ್ತಿದ್ದಾರೆಸೇರಿಂದತೆ ಅನೇಕ ಸಮಾಜಿಕ ಕಾರ್ಯ ಅವರು ಮಾಡಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದ್ದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಡಾ. ಫಾರೂಕ್ ಮಣೂರ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕಲಬುರಗಿ ಡಿವೈಎಸ್ಪಿ ಲೋಕಾಯುಕ್ತ ಬಸವರಾಜ ಯಲಿಗಾರ, ವಾಜೀದ್ ಜಮಾದಾರ್, ಮಾಜಿ ಸಿಎಂಸಿ ಅಧ್ಯಕ್ಷ ರಫೀಕ್ ಕಾರೋಬಾರಿ, ಸಿ.ಎಂ.ಸಿ ಕೌನ್ಸಿಲರ್ ಎಸ್. ಕುಮಾರ್ , ಜಹೀರ್ ಅಹ್ಮದ್, ಹರೀಶ್ ಕಾರ್ಣಿಕ್, ಹರ್ಷಾ ಮಾಲಕ, ಹಾಗೂ ರಾಜೇಶ್ ಯನಗುಂಟಿಕರ್ .ಅಮೀರ ನಿಂಬಾಳಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು


ಬಿಸಿಲಿನ ತೀವ್ರತೆ ಹೆಚ್ಚಿದರಿಂದ ದಿನದೊಳಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸಬೇಕು. ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನೇರ ಬಿಸಿಲಿನಲ್ಲಿ ಹೆಚ್ಚು ಕಾಲ ಇರುವುದನ್ನು ತಪ್ಪಿಸಬೇಕು. ಹಗುರವಾದ ಮತ್ತು ಹತ್ತಿಯ ಬಟ್ಟೆಗಳನ್ನು ಧರಿಸುವುದು ಸೂಕ್ತ. ಹೊರಗೆ ಹೋಗುವಾಗ ತಲೆ ಮುಚ್ಚಿಕೊಳ್ಳುವುದು, ನೆರಳಿನ ಸ್ಥಳದಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮವಾಗಿದೆ. ತೀವ್ರ ತಲೆನೋವು, ತಲೆ ಸುತ್ತುವುದು, ವಾಂತಿ, ಮೂರ್ಚೆ ಅಥವಾ ಬೆವರು ಕಡಿಮೆಯಾಗುವುದು ಇತ್ಯಾದಿ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸಮೀಪದಲ್ಲಿರುವ ವೈದ್ಯಕೀಯ ನೆರವು ಪಡೆಯುವುದು ಅಗತ್ಯ

ಡಾ. ಫಾರುಕ್ ಮಣ್ಣೂರ
ಮುಖ್ಯಸ್ಥರು ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಕಲಬುರಗಿ