
ಗದಗ,ಮಾ18: ಜಿಲ್ಲೆಯಲ್ಲಿ ಎಲ್‍ಪಿಜಿ (ಅಡುಗೆ ಅನಿಲ) ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗುವ ವಿಳಂಬ, ಹೆಚ್ಚುವರಿ ಹಣ ವಸೂಲಿ, ಬುಕ್ಕಿಂಗ್ ಮಾಡಿದ ಬಳಿಕ ಸಮಯಕ್ಕೆ ಸಿಲಿಂಡರ್ ದೊರೆಯದಿರುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಗದಗ ಜಿಲ್ಲಾಡಳಿತವು ವಿಶೇಷ ದೂರವಾಣಿ ಸಂಪರ್ಕ ವ್ಯವಸ್ಥೆ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ತಿಳಿಸಿದ್ದಾರೆ.
ಜಿಲ್ಲಾಡಳಿತದಲ್ಲಿ ನಡೆದ ಅಡುಗೆ ಅನಿಲ ಸಮರ್ಪಕ ಸರಬರಾಜು ಕುರಿತು ಗ್ಯಾಸ್ ವಿತರಣಾ ಎಜನ್ಸಿಗಳ ಮಾಲೀಕರೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಅಗತ್ಯ ಸೂಚನೆಗಳನ್ನು ನೀಡಿದರು.
ಜಿಲ್ಲೆಯ ಎಲ್ಲ ಎಲ್‍ಪಿಜಿ ಗ್ರಾಹಕರು ತಮ್ಮ ಸಮಸ್ಯೆಗಳನ್ನು ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿ ತ್ವರಿತ ಪರಿಹಾರ ಪಡೆಯಬಹುದು ಎಂದು ಹೇಳಿದರು.
ಸರ್ಕಾರದ ನಿಯಮಾನುಸಾರ ಎಲ್‍ಪಿಜಿ ಸಿಲಿಂಡರ್ ಪೂರೈಕೆ ಐiquiಜಿieಜ Peಣಡಿoಟeum ಉಚಿs (ಖeguಟಚಿಣioಟಿ oಜಿ Suಠಿಠಿಟಥಿ ಚಿಟಿಜ ಆisಣಡಿibuಣioಟಿ) ಔಡಿಜeಡಿ 2000 ಅನ್ವಯ ನಡೆಯಬೇಕು. ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ ಜಿಲ್ಲಾಡಳಿತದಿಂದ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ವಿವಿಧ ತಾಲೂಕು ಹಾಗೂ ನಗರ ಪ್ರದೇಶಗಳ ಗ್ರಾಹಕರು ತಮ್ಮ ಸಮಸ್ಯೆಗಳ ಕುರಿತು ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಗದಗ ಜಿಲ್ಲೆಯ ಉಪನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 08372-239443 ಆಗಿದೆ. ಗದಗ ನಗರ ಪ್ರದೇಶದ ಗ್ರಾಹಕರು ಸಹಾಯಕ ನಿರ್ದೇಶಕರು (ಆಹಾರ) ಅವರನ್ನು 9481241607 ಅಥವಾ 9972956834 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.
ಗದಗ ಗ್ರಾಮೀಣ ಪ್ರದೇಶದ ಗ್ರಾಹಕರು ಆಹಾರ ನಿರೀಕ್ಷಕರಾದ 9916763033 ಅಥವಾ 9606301190 ಸಂಖ್ಯೆಗೆ ಕರೆಮಾಡಿ ಅಹವಾಲು ಸಲ್ಲಿಸಬಹುದು.
ರೋಣ ತಾಲೂಕಿನ ಗ್ರಾಹಕರು 9916890282 ಅಥವಾ 6364381607 ಸಂಖ್ಯೆಗೆ ಸಂಪರ್ಕಿಸಬಹುದು. ನರಗುಂದ ತಾಲೂಕಿನವರು 9606281029 ಸಂಖ್ಯೆಗೆ ಕರೆಮಾಡಬಹುದು.
ಗಜೇಂದ್ರಗಡ ಪ್ರದೇಶದ ಗ್ರಾಹಕರು 9916890282 ಅಥವಾ 8105201560, ಮುಂಡರಗಿ ತಾಲೂಕಿನವರು 9980252047, ಶಿರಹಟ್ಟಿ ತಾಲೂಕಿನವರು 7829960469 ಹಾಗೂ ಲಕ್ಷೆ?ಮೀಶ್ವರ ತಾಲೂಕಿನವರು 96164249118 ಸಂಖ್ಯೆಗಳ ಮೂಲಕ ಸಂಪರ್ಕಿಸಿ ಅಡುಗೆ ಅನಿಲ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು ಎಂದು ಹೇಳಿದರು.
ಎಲ್‍ಪಿಜಿ ಗ್ರಾಹಕರು ಸಿಲಿಂಡರ್ ಬುಕ್ಕಿಂಗ್ ಮಾಡಲು IಗಿಖS, ಮಿಸ್ಡ್ ಕಾಲ್, ವಾಟ್ಸಪ್, ಮೊಬೈಲ್ ಅಪ್ಲಿಕೇಶನ್, ಫೆÇೀನ್‍ಪೆ ಆಪ್, ಪೇಟಿಎಂ ಆಪ್ ಹಾಗೂ ಔಒಅ ಪೆÇೀರ್ಟಲ್ ಸೇರಿದಂತೆ ಹಲವು ಡಿಜಿಟಲ್ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು.
ಸಾಮಾನ್ಯವಾಗಿ ಸಿಲಿಂಡರ್ ಬುಕ್ಕಿಂಗ್ ಮಾಡಿದ ಬಳಿಕ 25 ದಿನಗಳೊಳಗೆ ಪೂರೈಕೆ ಆಗಬೇಕು. ಬುಕ್ಕಿಂಗ್ ನಂತರ ದೀರ್ಘ ವಿಳಂಬವಾಗುವುದು, ಹೆಚ್ಚುವರಿ ಹಣ ವಸೂಲಿ ಮಾಡುವುದು ಅಥವಾ ಸರಿಯಾದ ಸೇವೆ ದೊರೆಯದಿರುವಂತಹ ಸಮಸ್ಯೆಗಳು ಕಂಡುಬಂದಲ್ಲಿ ಗ್ರಾಹಕರು ಮೇಲ್ಕಂಡ ದೂರವಾಣಿ ಸಂಖ್ಯೆಗಳ ಮೂಲಕ ತಕ್ಷಣ ಅಹವಾಲು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಯ ಎಲ್ಲಾ ಎಲ್‍ಪಿಜಿ ಗ್ರಾಹಕರು ಈ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಂಡು ತಮ್ಮ ಸಮಸ್ಯೆಗಳಿಗೆ ತ್ವರಿತ ಪರಿಹಾರ ಪಡೆಯಬೇಕು. ಗ್ಯಾಸ್ ವಿತರಕರು ಹಾಗೂ ಸಂಬಂಧಿತ ಅಧಿಕಾರಿಗಳು ಗ್ರಾಹಕರಿಗೆ ಸಮರ್ಪಕ ಸೇವೆ ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ತಿಳಿಸಿದ್ದಾರೆ.
ಸಭೆಯಲ್ಲಿ ಗ್ಯಾಸ್ ವಿತರಣಾ ಎಜನ್ಸಿಗಳ ಮಾಲೀಕರು, ಪ್ರತಿನಿಧಿಗಳು, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

























