
ಮಧುಗಿರಿ, ಜೂ. ೧- ಆರ್ಯ ವೈಶ್ಯ ಮಂಡಳಿ, ವಾಸವಿ ಯುವಜನ ಸಂಘದ ಸಂಯುಕ್ತಾಶ್ರಯದಲ್ಲಿ ಉಚಿತ ಕಿವಿ ಶ್ರವಣ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ ಕಾರ್ಯಕ್ರಮವನ್ನು ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಯುವಜನ ಸಂಘದ ಅಧ್ಯಕ್ಷ ಶಿಶಿರ್, ವಾಸವಿ ಯುವಜನ ಸಂಘ ಅನೇಕ ಸಾಮಾಜಿಕ ಕಾರ್ಯಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದೇವೆ. ಈ ಹಿಂದೆ ರಕ್ತದಾನ ಶಿಬಿರ, ಹೆಲ್ತ್ ಕ್ಯಾಂಪ್, ಆಧಾರ್ ಕಾರ್ಡ್ ಮೇಳಿ ಸೇರಿದಂತೆ ಇನ್ನು ಮುಂತಾದ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಈ ದಿನ ಶ್ರವಣದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ನಮ್ಮ ಸಂಸ್ಥೆ ಶ್ರವಣದ ಯಂತ್ರಕ್ಕೆ ಆಗುವ ವೆಚ್ಚದ ಶೇ. ೪೦ ರಷ್ಟು ಮೊತ್ತವನ್ನು ಭರಿಸಲಾಗುತ್ತದೆ. ಇದರಿಂದ ರೋಗಿಗಳಿಗೆ ಉಪಯೋಗವಾಗಲಿ ಎಂದರು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ.ಎನ್. ಶ್ರೀನಿವಾಸ್ ಮೂರ್ತಿ, ಯೋಜನಾ ಸಂಘದ ಉಪಾಧ್ಯಕ್ಷ ಅಶ್ವಿನ್, ಕಾರ್ಯದರ್ಶಿ ಆದರ್ಶ್, ಅರ್ಚನ್, ಶ್ರವಣ ದೋಷ ತಜ್ಞ ಡಾ. ಪ್ರವೀಣ್‌ಕುಮಾರ್, ಡಾ. ಲವಕುಮಾರ್, ಡಾ. ಉದಯ್ ಮತ್ತಿತರರು ಉಪಸ್ಥಿತರಿದ್ದರು.