ಚನ್ನಮ್ಮನ ಕಿತ್ತೂರು,ಜೂ.೩೦: ಮಳೆ ವಿಪರೀತವಾಗಿ ಸುರಿದಿದ್ದರಿಂದ ಸಮೀಪದ ಗಂದಿಗವಾಡ ಗ್ರಾಮದ ರಸ್ತೆಗಳಲ್ಲಿ ಅಲ್ಲ್ಲಲ್ಲಿ ತಗ್ಗು-ಗುಂಡಿಗಳು ನೀರಿನಿಂದ ಜಲಾವೃತಗೊಂಡು ಹದಗೆಟ್ಟಿವೆ. ವಾಹನ ಸವಾರರು, ರೈತರು, ಶಾಲಾಮಕ್ಕಳು, ವೃದ್ಧರು, ಅಂಗವಿಕಲರು ದಿನನಿತ್ಯ ಇನ್ನೂ ಅನೇಕ ಕಾರ್ಯಚಟುವಟಿಕೆಗಳಿಗೆ ಅದೇ ಮಾರ್ಗದಿಂದ ಹೋಗಬೇಕಾಗುತ್ತದೆ. ಆ ಗುಂಡಿಗಳನ್ನು ತಪ್ಪಿಸಲು ಹೋಗಿ ಅಪಘಾತಗಳು ಸಂಭವಿಸುತ್ತವೆ. ರಸ್ತೆಯ ಅಕ್ಕಪಕ್ಕದಲ್ಲಿ ಮನೆಗಳಿದ್ದು ಅಲ್ಲಿಯ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಜೀವನ ನಡೆಸಬೇಕಾಗಿದೆ. ಈಗಾಗಲೇ ಸಂಬAಧಪಟ್ಟ ಇಲಾಖೆಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರು ಕ್ಯಾರೇ ಎನ್ನುತ್ತಿಲ್ಲ. ಎಂದು ಸಾರ್ವಜನಿಕರು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನೇಗಿಲಯೋಗಿ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷ ರವಿ ಪಾಟೀಲ ಮಾತನಾಡಿ ನಮ್ಮ ಹಾಗೂ ಹಲವಾರು ಸಂಘಟನೆಗಳಿAದ ಸಂಬAಧಪಟ್ಟ ಇಲಾಖೆಯವರಿಗೆ ಹಲವಾರು ಭಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆಂದು ಗಂಭೀರವಾಗಿ ಆರೋಪಿಸಿದರು. ಶೀಘ್ರವಾಗಿ ಎಚ್ಚೇತ್ತುಕೊಂಡು ಅಭಿವೃದ್ಧಿ ಪಡಿಸದಿದ್ದರೆ ಜಿಲ್ಲಾಧಿಕಾರಿ ಕಛೇರಿ ಎದುರಿಗೆ ಸಾರ್ವಜನಿಕರೆಲ್ಲರೂ ಸೇರಿಕೊಂಡು ಉಗ್ರಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಈ ವೇಳೆ ಮಲ್ಲಪ್ಪ ಗಾಳಿ, ಬಸವರಾಜ ಭಂಗಿ, ಶಂಕರ ಕುರೇರ, ಬಾಬು ಗೋಡೆಕರ, ವಿಠ್ಠಲ ಕಾತಗಾರ, ಉಮೇಶ ಪಂಡಿ, ಸಂಜೀವ ಕೇದಾರಿ, ಇನ್ನಿತರರಿದ್ದರು.