Home ಜಿಲ್ಲೆ ಕಲಬುರಗಿ ನಾಳೆಯಿಂದ ಧೋತರಗಾಂವ ವೀರೇಶ್ವರ ಜಾತ್ರಾ ಮಹೋತ್ಸವ

ನಾಳೆಯಿಂದ ಧೋತರಗಾಂವ ವೀರೇಶ್ವರ ಜಾತ್ರಾ ಮಹೋತ್ಸವ

ಕಲಬುರಗಿ,ಮಾ.18: ಜಿಲ್ಲೆಯ ಅಳಂದ ತಾಲೂಕಿನ ಧೋತರಗಾಂವ ಗ್ರಾಮದ ವೀರೇಶ್ವರರ ಜಾತ್ರಾ ಮಹೋತ್ಸವ
ಮಾ. 19 ರಿಂದ 25 ರವರೆಗೆ ಜರುಗುವುದು
19 ರಂದು ಅಮವಾಸ್ಯೆ ಜಾಗರಣೆ, ಸೋಲಾಪುರ ಸಿದ್ಧಾರೂಢ ಮಠದ ಮಾತೋಶ್ರೀ ಸುಶಾಂತಾದೇ ಅವರಿಂದ ಪ್ರವಚನೆ ಜರುಗುವುದು. ನಂತರ ಬೆಳಗಾಗುವವರೆಗೂ ಭಜನೆ ಹಾಗೂ ಶಿವಕೀರ್ತನೆ ನಡೆಯಲಿದೆ.
20 ರಂದು ಬೆಳಿಗ್ಗೆ 10.30ಕ್ಕೆ ವೀರೇಶ್ವರ ದೇವಸ್ಥಾನದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ನಡೆಯಲಿದೆ.ಸಂಜೆ 5 ಗಂಟೆಗೆ ಯುಗಾದಿ ಹಬ್ಬದ ಚೈತ್ರ ಹೊಸವರ್ಷದಂದು ನೂತನ ಪಂಚಾಗ ಪೂಜೆ ಮತ್ತು ವಾಚನ ನಂತರ ರಾತ್ರಿ 9 ಗಂಟೆಗೆ ವೀರೇಶ್ವರ ಪಲ್ಲಕ್ಕಿ ಉತ್ಸವ ನಂತರ ರಾತ್ರಿ 10 ಗಂಟೆಗೆ ಜೋಳದ ಹಂತಿ ವಿಶೇಷ ಕಾರ್ಯಕ್ರಮವಿದೆ.21 ರಂದು ರಾತ್ರಿ 9 ಗಂಟೆಗೆ ಪಲ್ಲಕ್ಕಿ ಉತ್ಸವ ನಂತರ ವೇಮೂ ಸೂರ್ಯಕಾಂತ ಶಾಸ್ತ್ರೀ ವಿಶ್ವನಾಥಮಠ ಮತ್ತು ಸಂಗಡಿಗರಿಂದ ಶಿವಕೀರ್ತನೆ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ.
22 ಮತ್ತು 23 ರಂದು ರಾತ್ರಿ 9 ಗಂಟೆಗೆ ಪಲ್ಲಕ್ಕಿ ಉತ್ಸವ ನಂತರ ಬೆಳಗಾಗುವರೆಗೆ ಹರದೇಶಿ ಮತ್ತು ನಾಗೇಶಿ ಗೀಗೀಪದಗಳು (ಹರದೇಶಿ) ಶರಣಬಸಪ್ಪ ನದಿಸಿನ್ನೂರ ಹಾಗೂ ಸಂಗಡಿಗರಿಂದ(ನಾಗೇಶಿ) ರೇಣುಕಾಬಾಯಿ ಫಕೀರಪ್ಪ ಐಹೊಳೆ,ಮಂದರೂಪ ತಾ.ಜಿ ಸೋಲಾಪುರ ಹಾಗೂ ಸಂಗಡಿಗರಿಂದ ಜರುಗುವವು.
24 ರಂದು ಇಡೀ ದಿನ ಭಕ್ತಾದಿಗಳ ಹರಕೆ, ಕಾಣಿಕೆ ಸಮರ್ಪಣೆ ಹಾಗೂ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮ ಜರುಗುವುದು.25 ರಂದು ಮುಂಜಾನೆ 10 ಗಂಟೆಗೆ ಪಲ್ಲಕ್ಕಿ ಮಹೋತ್ಸವ ಗ್ರಾಮದ ರಾಜ ಬೀದಿಗಳಲ್ಲಿ ಚಲಿಸಿ ಸಂಜೆ 4 ಗಂಟೆಗೆ ದೇವಸ್ಥಾನಕ್ಕೆ ತಲುಪುವುದು. ನಂತರ ಪ್ರಸಿದ್ಧ ಪೈಲ್ವಾನರಿಂದ ಜಂಗೀ ಕುಸ್ತಿಗಳು ಜರಗುವುದು. ರಾತ್ರಿ 8 ಗಂಟೆಗೆ ವರ್ಣರಂಜಿತ ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ.ಜಾತ್ರಾ ಮಹೋತ್ಸವಕ್ಕೆ ಸರ್ವರೂ ಆಗಮಿಸಿ ವೀರೇಶ್ವರರ ದರ್ಶನಾಶೀರ್ವಾದ ಪಡೆಯಬೇಕೆಂದು ಧೋತ್ತರಗಾಂವ ಶ್ರೀ ವೀರೇಶ್ವರ ದೇವಸ್ಥಾನ ಸೇವಾ ಸಮಿತಿ ಹಾಗೂ ಸಕಲ ಸದ್ಭಕ್ತ ಮಂಡಳಿಯವರು ಕೋರಿದ್ದಾರೆ.