ಸೆಂಟ್ರಲ್ ಜೈಲಿನಲ್ಲೇ ಉಳಿಸಲು ದರ್ಶನ್ ವಕೀಲರ ಯತ್ನ

ಬೆಂಗಳೂರು, ಆ. ೧೮- ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ನನ್ನು ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬೇರೆ ಜೈಲಿಗೆ ಸ್ಥಳಾಂತರ ಮಾಡಲು ಜೈಲು ಅಧಿಕಾರಿಗಳು ಕೋರ್ಟ್ ಮೊರೆ ಹೋಗಲು ಮುಂದಾದ ಬೆನ್ನಲ್ಲೇ ದರ್ಶನ್‌ರನ್ನು ಪರಪ್ಪನ ಅಗ್ರಹಾರದಲ್ಲೇ ಉಳಿಸಲು ಅವರ ಪರ ವಕೀಲರು ಪ್ರಯತ್ನ ಮಾಡುತ್ತಿದ್ದಾರೆ.


ದರ್ಶನ್ ಬಂಧಿತನಾಗಿರುವ ದಿನವೇ ವಕೀಲರು ದರ್ಶನ್ ಪರಪ್ಪನ ಅಗ್ರಹಾರ ಜೈಲಿಂದ ಬೇರೆ ಕಡೆ ಶಿಫ್ಟ್ ಮಾಡಬಾರದು ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.


ವಿಚಾರಣೆ ಆರಂಭಗೊಂಡರೆ ಬೇರೆ ಜಿಲ್ಲೆಗಳಿಂದ ಕರೆದುಕೊಂಡು ಬರುವುದು ಕಷ್ಟವಾಗುವ ಹಿನ್ನೆಲೆಯಲ್ಲಿ ಸ್ಥಳಾಂತರ ಮಾಡಬಾರದು ಎಂದು ಕೋರ್ಟ್‌ಗೆ ವಕೀಲ ಸುನೀಲ್ ಅರ್ಜಿ ಸಲ್ಲಿಸಿದ್ದಾರೆ. ಇಂದು ಎಸ್‌ಪಿಪಿ ಮುಖಾಂತರ ಜೈಲಾಧಿಕಾರಿಗಳು ಅರ್ಜಿ ಸಲ್ಲಿಕೆ ಮಾಡಲಿದ್ದಾರೆಯೇ ಕಾದು ನೋಡಬೇಕಿದೆ. ಹಾಗೇನಾದರೂ ಅರ್ಜಿ ಸಲ್ಲಿಕೆ ಮಾಡಿದರೆ, ನಮ್ಮ ವಾದವನ್ನು ಪರಿಗಣಿಸಿ ಎಂದು ಮನವಿ ಮಾಡುವ ಸಾಧ್ಯತೆಯಿದೆ.