ಮಳೆಗೆ ಬೆಳೆ ಹಾನಿ ; ಪ್ರತಿಎಕರೆಗೆ ೨೫ ಸಾವಿರ ರೂ ಪರಿಹಾರಕ್ಕೆ ನಿಖಿಲ್ ಒತ್ತಾಯ||

ಕಲಬುರಗಿ.ಸೆ೧೬: ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಳೆಯಿಂದಾಗಿ ರೈತರ ಬೆಳೆಗಳು ಸಂಪೂರ್ಣ ನೆಲ ಕಚ್ಚಿವೆ. ಸರ್ಕಾರ ಈ ಕೂಡಲೇ ಮಧ್ಯ ಪ್ರವೇಶಿಸಿ ಒಂದು ಎಕರೆ ಪ್ರದೇಶ ಬೆಳೆ ನಾಶಕ್ಕೆ ೨೫೦೦೦ ಪರಿಹಾರ ಘೋಷಿಸಬೇಕೆಂದು ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗಂಭೀರವಾಗಿ ಒತ್ತಾಯಿಸಿದರು.


ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ರಾಜ್ಯ ಸರ್ಕಾರ ಬರೀ ಘೋಷಣೆಗೆ ಮಾತ್ರ ಸೀಮಿತವಾಗಿದೆ


ಈ ಸರ್ಕಾರ ಬರೀ ಘೋಷಣೆಗೆ ಮಾತ್ರ ಸೀಮಿತವಾಗಿದೆ. ಅಭಿವೃದ್ಧಿ ಮಾಡುವಲ್ಲಿ ಈ ಸರ್ಕಾರ ವಿಫಲವಾಗಿದೆ. ಘೋಷಿಸಿದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರದ ಖಜಾನೆಯಲ್ಲಿ ದುಡ್ಡ ಇದಿಯೋ, ಇಲ್ಲವೋ ಸರ್ಕಾರನೇ ಉತ್ತರಿಸಬೇಕೆಂದು ನಿಖಿಲ್ ಅವರು ಆಗ್ರಹಿಸಿದರು.


ಕೆಕೆಆರ್ ಡಿ ಬಿ ಯ ಕೆಲಸಗಳನ್ನು ಶೇ ೩೦% ಗೆ ಲ್ಯಾಂಡರ್ಮಿಗೆ ಮಾರಿಕೊಂಡಿದ್ದಾರೆ.ಏಏಖಆಃ ಇರೋದು ದುಡ್ಡು ಮಾಡಕ್ಕೆ. ಕಮಿಷ ನಡೆಯೋಕೆ. ಪರ್ಸೆಂಟೇಜ್ ರಾಜಕಾರಣಕ್ಕೆ ಇಟ್ಟಿರುವುದು. ಅಭಿವೃದ್ಧಿ ವಿಷಯ ಬಂದಾಗ ಕೆಕೆಆರ್ ಡಿಬಿ ಹೆಸರನ್ನು ಮುಂದೆ ಇಡುತ್ತಾರೆ ಎಂದು ಆರೋಪಿಸಿದರು.ಕಲ್ಯಾಣ ಕರ್ನಾಟಕದಲ್ಲಿ ಕಲ್ಯಾಣ ಆಗ್ತಿಲ್ಲ, ರಸ್ತೆಗಳೆಲ್ಲ ಗುಂಡಿಗಳು ಬಿದ್ದಿವೆ


ಕಲ್ಬುರ್ಗಿ ನಗರದ ರಸ್ತೆಗಳೆಲ್ಲ ಗುಂಡಿಗಳು ಬಿದ್ದಿವೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ೫೦೦೦ ಕೊಟ್ಟಿದೆ ಅಂತ ಹೇಳ್ತಾರೆ. ಕಲ್ಬುರ್ಗಿಯ ರಸ್ತೆಗಳನ್ನು ನಿರ್ಮಿಸುವುದನ್ನು ಬಿಡಿ. ಗುಂಡಿಗಳನ್ನು ಮುಚ್ಚುವ ಕೆಲಸ ಕಲ್ಬುರ್ಗಿಯಿಂದ ಆರಂಭಿಸಲಿ ಎಂದು ಸರ್ಕಾರ ವಿರುದ್ಧ ಗುಡುಗಿದರು.


ಇಡೀ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಸರ್ಕಾರಿ ಹಾಗೂ ಖಾಸಗಿ ಆಸ್ತಿ ಹಾಳು ಮಾಡಿದೆ. ಜನ ಜಾನುವಾರುಗಳ ಮೇವು ಕೂಡ ಪರಿಣಾಮ ಆಗಿದೆ.ರೈತರ ಮೇಲೆ ಮಳೆ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಆಗಸ್ಟ್ ತಿಂಗಳಲ್ಲಿ ಬಾರಿ ಮಳೆ ಆಗಿದೆ. ೧ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತೊಗರಿ ಉದ್ದು ಹೆಸರು ಮತ್ತಿತರ ಬೆಳೆಗಳು ಹಾಳಗಿದೆ ಎಂದು ತಿಳಿಸಿದರು.


ಈಗಾಗಲೇ ಸರ್ಕಾರಿಂದ ವರದಿ ಕೂಡ ಸಿದ್ದ ಮಾಡಿದ್ದಾರೆ. ಕಲಬುರಗಿ ಜಿಲ್ಲೆ ತೊಗರಿ ಕಣಜ.೫೦ ಸಾವಿರ ಹೆಕ್ಟೇರ್ ಪ್ರದೇಶ ಸಂಪೂರ್ಣ ಹಾಳಾಗಿದೆ.ರಾಜ್ಯದಲ್ಲಿ ಬೆಳೆ ಹಾನಿ ಪ್ರದೇಶದಲ್ಲಿ ಸಂತ್ರಸ್ತರ ಬೇಟಿ ಮಾಡುತ್ತಿದ್ದೆವೆ ನಮ್ಮ ಪಕ್ಷದಿಂದ ವರದಿ ತಯಾರು ಮಾಡುತ್ತೆವೆ. ಅದನ್ನ ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು.


ಕಲಬುರಗಿ ನಗರದ ಎಪಿಎಂಸಿಯಲ್ಲಿ ರೈತರ ಜೊತೆಗೆ ಸಂವಾದ ಮಾಡಿದ್ದೆ. ರೈತರ ಸಮಸ್ಯೆಗಳನ್ನು ಕುಮಾರಣ್ಣ ಮೂಲಕ ಕೇಂದ್ರದ ಗಮಕ್ಕೆ ತಂದಿದ್ದೇನೆ. ರೈತರು ಪ್ರತಿ ವರ್ಷ ಎರಡು ಮೂರು ಬೆಳೆ ಬೆಳೆಯಲು ಸಾಲಸೂಲ ಮಾಡುತ್ತಾನೆ. ಒಂದು ಎಕರೆಗೆ ಆರರಿಂದ ಎಂಟು ಕ್ಟಿಂಟಲ್ ಬೆಳೆ ಬೆಳೆಯುತ್ತಿದ್ದಾನೆ. ಆದರೂ ಅರ್ಧ ಕ್ವಿಂಟಲ್ ಬೆಳೆಯಲು ಸಾದ್ಯ ಆಗುತ್ತಿಲ್ಲ. ಎಕರೆಗೆ ೨೫ ಸಾ ಪರಿಹಾರ ನೀಡಿ ಅಂತ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.


ಸರ್ಕಾರ ನಡೆಸುವಂತವರು ಅತಿವೃಷ್ಟಿಯನ್ನ ಗಂಭೀರವಾಗಿ ಪರಿಗಣಿಸಬೇಕು. ಬಾರಿ ಪ್ರಮಾಣದ ಮಳೆ ಆಗಿದೆ ಇದು ರೈತರ ಮೇಲೆ ಪರಿಣಾಮ ಬೀರಿದೆ. ಇನ್ಸೂರೆನ್ಸ್ ಕಂಪನಿಗಳು ಏನ್ ಮಾಡುತ್ತಿವೆ ,ರಾಜ್ಯ ಸರ್ಕಾರ ಎಷ್ಟರ ಮಟ್ಟಿಗೆ ವೈಜ್ಞಾನಿಕವಾಗಿ ತಲುಪಿಸಲು ಹೊರಟಿದೆ ಎಂದು ಕಿಡಿಕಾರಿರದು.

ಈ ಸಂದರ್ಭದಲ್ಲಿ ದೊಡ್ಡಪ್ಪಗೌಡ ನರಿಬೋಳ್, ಬಾಲರಾಜ್ ಗುತ್ತೇದಾರ್, ಶಿವಕುಮಾರ್ ನಾಟಿಕರ್, ಕೃಷ್ಣಾರೆಡ್ಡಿ,ಬಸವರಾಜ್ ತಡಕಲ್,ದೇವೆಗೌಡ ತೆಲ್ಲೂರ,ಬಸವರಾಜ ಬಿರಬಟ್ಟಿ ಸೇರಿದಂತೆ ಜಿಲ್ಲೆಯ ಪ್ರಮುಖರು ಜೊತೆಯಲ್ಲಿದ್ದರು.