
ನವಲಗುAದ, ಜೂ೭: ಸ್ವಾಮಿಜಿಗಳಾದವರು ಹೊರಮುಖವಾದ ಪಂಚೇದ್ರಿಯಗಳನ್ನು ಒಳಮುಖಾಗಿ ನಿಯಂತ್ರಣ ಮಾಡಿಕೊಳ್ಳುವ ಮೂಲಕ ಧ್ಯಾನಸ್ಥರಾಗಿ ಶಿವಾರಾಧನೆ ಮಾಡುವುದೇ ಅನುಷ್ಠಾನದ ಕ್ರಮವಾಗಿದ್ದು ನೂತನ ಶ್ರೀ ಗಳು ೨೧ ದಿನಗಳ ಕಾಲ ನಡೆಸಿದ ಮೌನಾನುಷ್ಠಾನದಿಂದ ಭಕ್ತ ಸಮೂಹ ಸಂಸ್ಕಾರ.ಸುಖ ಸಮೃದ್ದಿಯಿಂದ ಮುನ್ನಡೆಸುವಂತಾಗಲಿ ಎಂದು ಶಿರಹಟ್ಟಿ ಭಾವೈಕ್ಯ ಮಠದ ಶ್ರೀ ಫಕೀರಸಿದ್ದರಾಮ ಸ್ವಾಮಿಜಿ ಅಭಿಪ್ರಾಯ ಪಟ್ಟರು.
ಸ್ಥಳೀಯ ಪಂಚಗ್ರಹ ಹಿರೇಮಠದಲ್ಲಿ ಜರುಗಿದ ನೂತನ ಪಿಠಾಧಿಕಾರಿಗಳಾದ ಶ್ರೀ ಇಮ್ಮಡಿ ಸಿದ್ಧೇಶ್ವರ ಶಿವಾಚಾರ್ಯರು ೨೧ ನೂತನ ಶ್ರೀಗಳ ಮೌನ ಅನುಷ್ಠಾನ ಹಾಗೂ ಪಟ್ಟಾಧಿಕಾರ ಮಹೋತ್ಸವದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸ್ವಾಮಿಗಳಾದವರು ನಿರಂತರ ಪೂಜಾನಿಷ್ಠರಾಗಿ ಜಾತಿ.ಮತಗಳ ಅಂತರವನ್ನು ಗಮನಿಸದೇ ಮಾನವ ಕುಲವನ್ನು ಧರ್ಮದ ಹಾದಿಯಲ್ಲಿ ನಡೆಸುವ ಮೂಲಕ ಸಂಸ್ಕಾರವನ್ನು ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡು ಮಠಗಳ ಜತೆ ಭಕ್ತ ಸಮೂಹವನ್ನೂ ಬೆಳೆಸುವ ಕಾರ್ಯ ಮಾಡಬೇಕೆಂದರು.
ನರಗುAದ ಹಿರೇಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಜಿ ಮಾತನಾಡಿದರು.
ಹಿರೇಮಠದ ಹಿರಿಯ ಶ್ರೀಗಳಾದ ಶ್ರೀ ಸಿದ್ದೇಶ್ವರ ಶಿವಾಚಾರ್ಚ ಸ್ವಾಮಿಜಿ ಜಾತಿ.ಬೇಧ ಮರೆತು ಮಠದ ಎಲ್ಲ ಕಾರ್ಯಗಳನ್ನು ವಿಜಭನೆಯಿಂದ ನಡೆಸಿಕೊಟ್ಟ ಭಕ್ತ ಸಮೂಹದ ಕಾರ್ಯ ಅಭಿನಂದನಾರ್ಹವಾಗಿದೆ ಎಂದರು.
ಅಣ್ಣಪ್ಪ ಬಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವ ಕೆ.ಎನ್.ಗಡ್ಡಿ, ದೇವರಾಜ ದಾಡಿಭಾವಿ, ಸಿದ್ದಲಿಂಗಯ್ಯ ಹಿರೇಮಠ, ಬಿ.ಬಿ.ಗಂಗಾಧರಮಠ, ಅಂದಾನಯ್ಯ ಹಿರೇಮಠ,ಕಲ್ಲಯ್ಯ ಹೊಸಮನಿ, ಪಾಂಡಪ್ಪ ಕೋನರಡ್ಡಿ, ಬಾಬಾಜಾನ್ ಮುಲ್ಲಾ, ವ್ಹಿ.ಟಿ.ಕರಿಸಕ್ರಣ್ಣವರ(ಭೋವಿ), ಅಬ್ಬಾಸ್ ದೇವರಿಡು, ರಾಯನಗೌಡ ಪಾಟೀಲ, ಬಸವರಾಜ ಹರಿವಾಳದ, ಗಂಗಪ್ಪ ಹಳ್ಳದ,ಶಂಕರಗೌಡ ಪಾಟೀಲ, ಬಿ.ಸಿ.ಪೂಜಾರ, ಆರ್.ಎನ್.ಧಾರವಾಡ, ಶ್ರೀಶೈಲ ಮೂಲಿಮನಿ ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.ಎ.ಬಿ.ಕೊಪ್ಪದ ಹಾಗೂ ಆರ್.ಎಚ್.ನೇಗಲಿ ನಿರೂಪಿಸಿದರು.


























