ಕಲಬುರಗಿ,ಮೇ.೨೫-ಕೇಂದ್ರ ಕಾರಾಗೃಹದ ವೀಕ್ಷಕರುಗಳಾದ ಬಾಲನಗೌಡ ಮತ್ತು ಭೀಮರೆಡ್ಡಿ ಅವರು ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ ೪*೧೦೦ ರಿಲೇ ಓಟ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವೀತಿಯ ಸ್ಥಾನವನ್ನು ಗಳಿಸಿ ರಾಷ್ಟç ಮಟ್ಟಕ್ಕೆ ಆಯ್ಕೆಯಾದ ಪ್ರಯುಕ್ತ ಸಂಸ್ಥೆಯ ಮುಖ್ಯಸ್ಥರಾದ ಡಾ.ಅನಿತಾ ಆರ್. ರವರು, ವಿಜೇತರಾದ ವೀಕ್ಷಕರುಗಳಿಗೆ ಇಲಾಖೆ ವತಿಯಿಂದ ಶಾಲು, ಪೇಟ, ಹಾರ ಹಾಗೂ ಸಿಹಿಯನ್ನು ನೀಡಿ ಸನ್ಮಾನಿಸಿದರು.
ನಂತರ ಮಾತನಾಡಿದ ಅವರು, ತಾವುಗಳು ಮುಂದೆಯೂ ಕೂಡಾ ಇದೇ ರೀತಿ ರಾಷ್ಟç ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಇಲಾಖೆ ವತಿಯಿಂದ ತಮಗೆ ಸಂಪೂರ್ಣ ಬೆಂಬಲವಿದೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತೇವೆ, ತಾವುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ವಿಜಯಪತಾಕೆಯನ್ನು ಹಾರಿಸಿ ಕಾರಾಗೃಹ ಇಲಾಖೆಯ ಮತ್ತು ಕರ್ನಾಟಕ ರಾಜ್ಯದ ಕೀರ್ತಿಯನ್ನು ಎಲ್ಲೆಡೆ ಪಸರಿಸಿರಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಹಾಯಕ ಆಡಳಿತ ಅಧಿಕಾರಿಯಾದ ಭೀಮಾಶಂಕರ ಡಾಂಗೆ, ಶೀಕ್ಷಕರಾದ ನಾಗರಾಜ ಮೂಲಗೆ, ಜೈಲರ್‌ಗಳಾದ ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀ¯, ಮುಖ್ಯ ವೀಕ್ಷಕರರುಗಳಾದ ಶ್ರೀನಿವಾಸ ಭಜಂತ್ರಿ, ಮಹೇಶ್ ಪಾಟೀಲ್, ಶ್ರೀಕಾಂತ್ ರಂಜೇರಿ, ಬಂಡೆಪ್ಪ ಬಡಿಗೇರ್, ಹಾಗೂ ಬಿ.ಪಿ ಕಾಳಿಂಗ್ ಇತರರು ಭಾಗವಹಿಸಿ ಶುಭ ಕೋರಿದರು ಹಾಗೂ ಎಲ್ಲಾ ಕಛೇರಿ ಅಧಿಕಾರಿ/ ಸಿಬ್ಬಂದಿಗಳು ಉಪಸ್ಥಿತರಿದ್ದರು.