
ಚಿತ್ತಾಪುರ;ಜು.೧: ನನಗೆ ಕಾಂಗ್ರೆಸ್ ಪಕ್ಷ ಮುಖ್ಯ. ಪಕ್ಷಕ್ಕಿಂತ ದೊಡ್ಡವರು ಯಾರು ಇಲ್ಲ. ಹೀಗಾಗಿ ನಾನು ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಮೇರೆಗೆ ಕೆಲಸ ಮಾಡುತ್ತೇನೆ ಎಂದು ಪಿಎಲ್’ಡಿ ಬ್ಯಾಂಕ್ ನೂತನ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಿಎಲ್’ಡಿ ಬ್ಯಾಂಕ್’ಗೆ ಕಳೆದ ಮೂವತ್ತು ವರ್ಷಗಳಿಂದ ಜೆಡಿಎಸ್ ಹಾಗೂ ಬಿಜೆಪಿ ಅವರೇ ಅಧಿಕಾರ ನಡೆಸಿದ್ದರು. ಇದೀಗ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿದೆ. ಆದ್ದರಿಂದ ಅವರು ರೈತರಿಗೆ ಯಾವುದೇ ಸೌಲಭ್ಯಗಳು ಒದಗಿಸಿಲ್ಲ. ಮುಂದಿನ ದಿನಗಳಲ್ಲಿ ನಾನು ರೈತರ ಪರವಾಗಿ ಪ್ರಾಮಾಣಿಕ ಕೆಲಸ ಮಾಡುವ ಮೂಲಕ ರೈತರಿಗೆ ಸೀಗಬೇಕಾದ ಸೌಲಭ್ಯವನ್ನು ಒದಗಿಸಿ ಕೊಡುತ್ತೇನೆ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ನನ್ನನ್ನು ಗುರುತಿಸಿ ಅಧ್ಯಕ್ಷ ಸ್ಥಾನವನ್ನು ಒದಗಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವುದರ ಮೂಲಕ ತಾಲೂಕಿನ ರೈತರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಪಿಎಲ್’ಡಿ ಬ್ಯಾಂಕ್’ನ ಉಪಾಧ್ಯಕ್ಷ ವೀರುಪಾಕ್ಷಪ್ಪ ಗಡ್ಡದ್ ಮಾತನಾಡಿ, ಪಿಎಲ್’ಡಿ ಬ್ಯಾಂಕ್’ಗೆ ೩೦ ವರ್ಷದಿಂದ ಬಿಜೆಪಿ ಹಾಗೂ ಜೆಡಿಎಸ್ ನವರೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಆದರೆ ರೈತರಿಗೆ ಯಾವುದೇ ರೀತಿಯ ಅನುಕೂಲ ಮಾಡಿ ಕೊಟ್ಟಿಲ್ಲ. ಪಿಎಲ್’ಡಿ ಬ್ಯಾಂಕ್’ನಲ್ಲಿ ರೈತರಿಗಾಗಿ ಹಲವಾರು ಯೋಜನೆಗಳಿವೆ ಅವುಗಳನ್ನು ರೈತರಿಗೆ ಕೊಡಿಸುವುದರೊಂದಿಗೆ ರೈತರ ಏಳಿಗೆಗೆ ಶ್ರಮಿಸಬೇಕಿತ್ತು. ಆದರೆ ಶ್ರಮಿಸಿಲ್ಲ. ಇದೀಗ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮುಂದಿನ ದಿನಗಳಲ್ಲಿ ಸಚಿವರ ಆದೇಶದಂತೆ ಬರುವ ದಿನಗಳಲ್ಲಿ ಪಿಎಲ್’ಡಿ ಬ್ಯಾಂಕ್’ನಿAದ ರೈತರಿಗೆ ಸಿಗುವ ಪ್ರತಿಯೊಂದು ಯೋಜನೆಗಳ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ರೈತರಿಗೆ ಕೊಡಿಸುವಂತಹ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ, ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಮೂದ್ ಸಾಹೇಬ್, ಮುಖಂಡರಾದ ಶಿವಾನಂದ ಪಾಟೀಲ, ಶಿವರುದ್ರಪ್ಪ ಭೀಣಿ, ಮುಕ್ತಾರ್ ಪಟೇಲ್, ಜಗಣ್ಣಗೌಡ ಪಾಟೀಲ್, ಮಜರ್ ಆಲಂ ಖಾನ್, ರಾಜಗೋಪಾಲ್ ರೆಡ್ಡಿ, ಸುನೀಲ್ ದೊಡ್ಡಮನಿ, ಬಸವರಾಜ ಹೊಸಳ್ಳಿ, ಸಿದ್ದುಗೌಡ ಅಫಜಲಫುರಕರ್,ಎಂ.ಎ ರಶಿದ್, ಚಂದ್ರಶೇಖರ ಕಾಶಿ, ಅಣ್ಣಾರಾವ ಪಾಟೀಲ್ ಮುಡಬೂಳ, ಶಾಂತಣ್ಣ ಚಾಳೀಕಾರ, ಶೀಲಾ ಕಾಶಿ, ದೇವು ಯಾಬಾಳ, ಪಾಶಾಮಿಯ್ಯಾ ಖುರೇಶಿ, ವಿಜಯ ಯಾಗಾಪುರ, ನಿಂಗಣ್ಣ ಹೆಗಲೇರಿ, ಓಂಕಾರೇಶ್ಮಿ, ಬಸವರಾಜ ಚಿನ್ನಮಳ್ಳಿ, ಹಣಮಂತ ಸಂಕನೂರ, ದೇವೇಂದ್ರ ಅರಣಕಲ್, ಅಶೋಕ ನಿಪ್ಪಾಣಿ, ಶೇಖ ಬಬ್ಲು, ಲಕ್ಷ್ಮಿಕಾಂತ ಸಾಲಿ, ಪ್ರಭು ಹಳಕರ್ಟಿ, ಶಿವರಾಜ್ ಪಾಳೇದ್, ವೆಂಕಟೇಶ ಕುಲಕರ್ಣಿ, ಭೀಮು ಹೋತಿನಮಡಿ, ಶರಣು ಡೋಣಗಾಂವ, ರಾಮು ಗಡ್ಡಿಮನಿ, ಶ್ರೀನಿವಾಸರೆಡ್ಡಿ ಪಾಲಪ್, ನಜೀರ್ ಆಡಕಿ, ನಾಗಯ್ಯ ಗುತ್ತೇದಾರ, ಕರಣಕುಮಾರ ಅಲ್ಲೂರ್, ನಾಗರೆಡ್ಡಿ ಗೋಪಸೇನ್, ಚಂದ್ರಶೇಖರ ಇವಣಿ, ಜಗನಾಥ್ ಗಡ್ಡದ್ ಸೇರಿದಂತೆ ಇತರರು ಇದ್ದರು.
ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷರಾಗಿ ಭೀಮಣ್ಣ ಸಾಲಿ, ಉಪಾಧ್ಯಕ್ಷರಾಗಿ ವೀರುಪಾಕ್ಷಪ್ಪ ಗಡ್ಡದ್ ಅವಿರೋಧ ಆಯ್ಕೆ
ಚಿತ್ತಾಪುರ; ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ) ಅಧ್ಯಕ್ಷರಾಗಿ ಅಳ್ಳೋಳ್ಳಿ ಸಾಲಗಾರರ ಕ್ಷೇತ್ರದಿಂದ ಭೀಮಣ್ಣ ಸಾಲಿ ಹಾಗೂ ಉಪಾಧ್ಯಕ್ಷರಾಗಿ ಚಿತ್ತಾಪುರ ಸಾಲಗಾರರಲ್ಲದ ಕ್ಷೇತ್ರದಿಂದ ವೀರುಪಾಕ್ಷಪ್ಪ ಗಡ್ಡದ್ ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ತಿಳಿಸಿದ್ದಾರೆ.
ಪಿಎಲ್‌ಡಿ ಬ್ಯಾಂಕ್’ನಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು ೧೪ ನಿರ್ದೇಶಕರ ಪೈಕಿ ೧೨ ನಿರ್ದೇಶಕರು ಹಾಜರಿದ್ದರು ಇಬ್ಬರು ಗೈರಾಗಿದ್ದರು. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಒಂದೊAದೇ ನಾಮಪತ್ರಗಳು ಸಲ್ಲಿಕೆಯಾಗಿದ್ದವು, ಪ್ರತಿಸ್ಪರ್ಧಿ ನಾಮಪತ್ರಗಳು ಸಲ್ಲಿಸದೇ ಇರುವುದರಿಂದ ನಾಮಪತ್ರ ಪರಿಶೀಲನೆ ನಡೆಸಿ ಅಂತಿಮವಾಗಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.
ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.
ನಂತರ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು.