ಪಕ್ಷ ಸದೃಢ ಸಂಘಟನೆಗೆ ಕರೆ

ಕೆ.ಆರ್.ಪುರ, ಜು.೧-ಮಹದೇವಪುರ ಕ್ಷೇತ್ರದಲ್ಲಿ ಮುಂದಿನ ಚುನಾವಣೆಗಳು ಹಾಗೂ ಪಕ್ಷದ ಸಂಘಟನೆಯ ದೃಷ್ಟಿಯಿಂದ ಬೂತ್ ಮಟ್ಟದಲ್ಲಿ ಪಕ್ಷವನ್ನು ಸದೃಢವಾಗಿ ಸಂಘಟಿಸುವಂತೆ ಮಾಜಿ ಸಚಿವ ಹೆಚ್.ನಾಗೇಶ್ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.


ಮಹದೇವಪುರ ಕ್ಷೇತ್ರದ ವರ್ತೂರು ವಾಡ್೯ ಕಾಂಗ್ರೆಸ್ ನೂತನ ಪಧಾದಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.


ಮಹದೇವಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ದೃಷ್ಟಿಯಿಂದ ಸಾಮಾನ್ಯ ಕಾರ್ಯಕರ್ತರಿಗೆ ಬ್ಲಾಕ್ ಹಾಗೂ ವಾಡ್೯ ಅಧ್ಯಕ್ಷರಾಗಿ ಆಯ್ಕೆಮಾಡಿದ್ದು, ಕೂಡಲೇ ನೂತನ ಬ್ಲಾಕ್ ಅಧ್ಯಕ್ಷರು ವಾಡ್೯ ಕಮಿಟಿ, ಬೂತ್ ಕಮಿಟಿ, ಮಹಿಳಾ ಕಮಿಟಿ ಸೇರಿದಂತೆ ವಿವಿಧ ಕಮಿಟಿಗಳನ್ನು ರಚಿಸಿ ಪಕ್ಷದ ಸಂಘಟನೆಗೆ ಒತ್ತು ನೀಡುವಂತೆ ತಿಳಿಸಿದರು.


ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ ಬಡವರ ಪ್ರತಿ ಮನೆಗೆ ತಳುಪಿಸುವುದು ಕಾಂಗ್ರೆಸ್ ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದರು.
ವರ್ತೂರು ಬ್ಲಾಕ್ ಒಬಿಸಿ ಅಧ್ಯಕ್ಷರಾಗಿ ವಿಜಯ್ ಕುಮಾರ್,ಪ್ರಧಾನ ಕಾರ್ಯದರ್ಶಿಯಾಗಿ ಬಿ.ವಿ.ಸುನೀಲ್ ಕುಮಾರ್, ವರ್ತೂರು ವಾಡ್೯ ಅಧ್ಯಕ್ಷರಾಗಿ ಟಿ.ಮುನಿರಾಜು, ಜಿಲ್ಲಾ ಒಬಿಸಿ ಪ್ರಧಾನಕಾರ್ಯದರ್ಶಿಯಾಗಿ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಿದರು.


ಈ ಸಂಧರ್ಭದಲ್ಲಿ ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂದಕುಮಾರ್, ವರ್ತೂರು ಬ್ಲಾಕ್ ಅಧ್ಯಕ್ಷರಾದ ಶ್ರೀನಿವಾಸ್ ರೆಡ್ಡಿ, ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರಾದ ಸುರೇಶ್, ಮುಖಂಡರಾದ ಕುಪ್ಪಿ ಮಂಜುನಾಥ್, ಮಧುರನಗರ ನಾಗೇಶ್, ವರಪುರಿ ನಾರಾಯಣಸ್ವಾಮಿ, ಪ್ರದೀಪ್ ರೆಡ್ಡಿ,ಸಂತೋಷ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.