Home ಜಿಲ್ಲೆ ಗುಡುಗು ಸಿಡಿಲಿನ ಮಳೆಗೆ ಎಮ್ಮೆ ಬಲಿ, ಕುಸುಬಿ ಬೆಳೆ ಹಾನಿ

ಗುಡುಗು ಸಿಡಿಲಿನ ಮಳೆಗೆ ಎಮ್ಮೆ ಬಲಿ, ಕುಸುಬಿ ಬೆಳೆ ಹಾನಿ

ನವಲಗುಂದ,ಮಾ18: ತಾಲ್ಲೂಕಿನಾದ್ಯಂತ ಮಂಗಳವಾರ ಸಂಜೆ ಭಾರಿ ಗಾಳಿ, ಸಿಡಿಲು, ಗುಡುಗುಗಳಿಂದ ಕೂಡಿದ ಆಲಿಕಲ್ಲಿನ ಮಳೆ ಸುರಿದಿದ್ದು ವಿದ್ಯುತ್ ಸಂಪರ್ಕ ಕಡಿತ ಗೊಂಡಿದ್ದು. ಮಳೆಗೆ ದಾಟನಾಳ ಗ್ರಾಮದ ಶೇಖಪ್ಪ ಹೂಗಾರ ಎಂಬವರ ಎಮ್ಮೆಗೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟದ್ದು ಭೋಗಾನೂರು ಗ್ರಾಮದಲ್ಲಿ ಮರವೊಂದು ಮನೆ ಮೇಲೆ ಬಿದ್ದ ಘಟನೆ ಜರುಗಿದೆ. ಅದೃಷ್ಠವಶಾತ್ ಯಾವುದೇ ಜೀವ ಹಾನಿಯಾದ ಕುರಿತಾಗಿ ವರದಿಗಳಾಗಿಲ್ಲ.

ಮಳೆಗೆ ನವಲಗುಂದ ಚೀಲಕವಾಡ ರಸ್ತೆಯಲ್ಲಿ ಬಳಿಯಿರುವ ಎರಡು ವಿದ್ಯುತ್ ಕಂಬಗಳು ಮುರಿದು ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿದೆ.

ಮಾರ್ಚ ತಿಂಗಳ ಬಿಸಿಲ ಬೇಗೆಗೆ ಕಂಗೆಟ್ಟ ಜನತೆಗೆ ಮಳೆ ತಂಪೆರೆದರೆ, ಕುಸಬಿ ಫಸಲು ಇನ್ನೂ ಜಮೀನಲ್ಲಿರುವುದರಿಂದ ಕೆಲ ರೈತರು ಸಂಕಷ್ಟಕ್ಕಿಡಾಗಿದ್ದಾರೆ.

ಗುಡುಗು ಸಹಿತ ಮಳೆ ಸುರಿದಾಗ ಶಾಲೆಯಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಮಳೆ ನೀರಿನ ಸಿಂಚನವನ್ನು ಅನುಭವಿಸುತ್ತ ಖುಷಿಪಟ್ಟರು.