
ಬೀದರ್: ಬೀದರ್ ತಾಲೂಕಿನ ಚಿಲ್ಲರ್ಗಿ ಗ್ರಾಮದಲ್ಲಿರುವ ಪುರಾತನ ಶ್ರೀ ಪಾಂಡುರಂಗ-ರುಕ್ಮಿಣಿ ದೇವಸ್ಥಾನದ ಸಮೀಪ ಭವನ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ಕಾರ್ಯಕ್ರಮವನ್ನು ಗ್ರಾಮಸ್ಥರ ಅಪೇಕ್ಷೆಯಂತೆ ಈಶ್ವರ್ ಸಿಂಗ್ ಠಾಕೂರ್ ಅವರ ಹಸ್ತದಿಂದ ನೆರವೇರಿಸಲಾಯಿತು.
ಗ್ರಾಮದ ಹಿರಿಯರು ದೇವಸ್ಥಾನದ ಹತ್ತಿರ ಭಕ್ತರ ಉಪಯೋಗಕ್ಕಾಗಿ ಭವನ ನಿರ್ಮಾಣ ಮಾಡುವ ಸಂಕಲ್ಪ ಕೈಗೊಂಡಿದ್ದು, ಜಾಗದ ಮಾಲೀಕರಾದ ನಸಿರ್ಂಗ್ ಠಾಕೂರ್ ಅವರ ಕುಟುಂಬವನ್ನು ಮನವೊಲಿಸಿ ದೇವಸ್ಥಾನಕ್ಕೆ ಜಾಗ ನೀಡುವಂತೆ ವಿನಂತಿಸಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ನಸಿರ್ಂಗ್ ಠಾಕೂರ್ ಕುಟುಂಬವು ಸುಮಾರು 30 x 90 ಅಡಿ ಜಾಗವನ್ನು ದೇವಸ್ಥಾನಕ್ಕೆ ಉಚಿತವಾಗಿ ದಾನದ ರೂಪದಲ್ಲಿ ನೀಡಿದರು.
ಚಿಲ್ಲರ್ಗಿ ಗ್ರಾಮದಲ್ಲಿ ನಡೆಯುತ್ತಿರುವ ಸಪ್ತಾಹದ ಅಂಗವಾಗಿ ಈ ಜಾಗದಲ್ಲಿ ಭವನ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಈಶ್ವರ್ ಸಿಂಗ್ ಠಾಕೂರ್ ಅವರು, ಗ್ರಾಮದ ಜನರ ಅಪೇಕ್ಷೆಯಂತೆ ಇಂದು ಭೂಮಿ ಪೂಜೆ ನೆರವೇರಿಸಲಾಗಿದ್ದು, ದೇವರ ಕೃಪೆಯಿಂದ ಮುಂದಿನ ವರ್ಷಕ್ಕೆ ಭವನ ನಿರ್ಮಾಣ ಪೂರ್ಣಗೊಂಡು ಮುಂದಿನ ಸಪ್ತಾಹವನ್ನು ಇದೇ ಭವನದಲ್ಲಿ ನಡೆಸುವಂತೆ ಎಲ್ಲರೂ ಒಟ್ಟಾಗಿ ಪ್ರಯತ್ನಿಸೋಣ ಎಂದು ಹೇಳಿದರು. ಈ ಕಾರ್ಯಕ್ಕೆ ತಾವು ಸಹ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯದರ್ಶಿ ಮಹೇಶ್ವರ ಸ್ವಾಮಿ, ಬಿಜೆಪಿ ಗ್ರಾಮೀಣ ಎಸ್‍ಸಿ ಮೋರ್ಚಾ ಅಧ್ಯಕ್ಷ ಭೀಮಣ್ಣ ಚಿಕ್‍ಪೇಟೆ, ಎಸ್.ಟಿ ಮೋರ್ಚಾ ಅಧ್ಯಕ್ಷ ಪ್ರಕಾಶ್ ಕೋಳಿ, ವ್ಯಾಪಾರಸ್ಥ ರಾಜೀವ್ ಗಾಂಧಿ ರಾಜು ಮಹಾರಾಜ ಪಾಂಢರಫೂರ, ವಿಷ್ಣುದಾಸ್ ಬಿಯಾಣಿ, ವಿಜಯಕುಮಾರ ಪಾಟೀಲ, ಅರವಿಂದ ಪಾಟೀಲ, ನರಸಿಂಗ ಠಾಕೂರ್, ಬಲರಾಜ್ ಠಾಕೂರ್, ಶಿವಕುಮಾರ ಚೀಲಾ, ವಿಠ್ಠಲ ಚಿಂಚೋಳೆ, ಅರ್ಜುನ ಅಂಕಾರೆ, ವೀರಪ್ಪ ಕೊಳ್ಳೂರು, ನಾಗಣ್ಣ ಎಸ್ಕೆ, ಪುಂಡಲೀಕ ನಾಟಕಾರ, ಕಾಶೀನಾಥ ಬೋರಾಳೆ, ಕಾಶೀನಾಥ ಹರಿಪೂಜೆ, ಬಸವರಾಜ ಭೂತಪುಲ್ಲೆ ಹಾಗೂ ನಿಲೇಶ್ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

























