Home ಜಿಲ್ಲೆ ಬೆಂಗಳೂರು ಬಿಜಿಎಂಎಲ್ ಕಾರ್ಮಿಕನ ಮಗಳಿಂದ ಕಲಾಂನ್ಸ್ ವಾರ್ಡ್ ರೆಕಾರ್ಡ್ ಬ್ರೇಕ್

ಬಿಜಿಎಂಎಲ್ ಕಾರ್ಮಿಕನ ಮಗಳಿಂದ ಕಲಾಂನ್ಸ್ ವಾರ್ಡ್ ರೆಕಾರ್ಡ್ ಬ್ರೇಕ್

filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (-1, -1); aec_lux: 48.0; hist255: 0.0; hist252~255: 0.0; hist0~15: 0.0;

ಕೆಜಿಎಫ್:ಮಾ:೧೮: ಚಿನ್ನದ ಗಣಿ ನಿವೃತ್ತ ಕಾರ್ಮಿಕ ಹೆನರ್‍ಸಿ ಕಾಲೋನಿ ನಿವಾಸಿ ಸಂಪತ್ ರವರ ಪುತ್ರಿ ಐಟಿ ಕಂಪನಿಯಲ್ಲಿ ಸಾಫ್ಟವೇರ್ ಇಂಜಿನೀಯರ್ ಆಗಿರುವ ಲಾವಣ್ಯ ೧೦೦ ರಿಂದ ೦ ಸಂಖ್ಯೆಯನ್ನು ೨೮ ಸೆಕೆಂಡ್‌ಗಳಲ್ಲಿ ಓದುವ ಮೂಲಕ ಕಲಾಂನ್ಸ್ ವಾರ್ಡ್ ರೆಕಾರ್ಡ್ ಬ್ರೇಕ್ ಮಾಡಿದ್ದು ನಗರಸಭೆ ಸದಸ್ಯ ಮಲರ್ ವೇಣಿ ಮಗಿ ರವರು ಮನೆಗೆ ಭೇಟಿ ನೀಡಿ ಅಭಿನಂದಿಸಿದರು.


ಈ ವೇಳೆ ಮಾತನಾಡಿದ ನಗರಸಭೆ ಸದಸ್ಯೆ ಮಲರ್ ವೇಣಿಮಗಿ ಆನ್ ಲೈನ್ ನಲ್ಲಿ ೧೦೦ ರಿಂದ ೦ ಸಂಖ್ಯೆಯನ್ನು ಹೇಳುವ ಸ್ಪರ್ದೆಯನ್ನು ಕಲಾಂನ್ಸ್ ವಾರ್ಡ್ ರೆಕಾರ್ಡ್ ಸಂಸ್ಥೆ ಅಯೋಜಿಸಿತ್ತು.


ಜೀವಮಾನದಲ್ಲಿ ಉತ್ತಮ ಸಾಧನೆ ಮಾಡಿರುವ ಯುವತಿಯು ಇತರೆ ಯುವ ಪ್ರತಿಭೆಗಳಿಗೆ ಮಾದರಿಯಾಗಿದ್ದು ಪ್ರತಿಯೋಬ್ಬರಲ್ಲೂ ಸೂಫ್ತವಾದ ಪ್ರತಿಭೆಗಳು ಅಡಗಿರುತ್ತದೆ ಅವುಗಳನ್ನು ಬಹಿರಂಗಪಡಿಸಬೇಕು ಮತ್ತು ಪೋಷಕರು ತಮ್ಮ ಮಕ್ಕಳಿಗೆ ಪ್ರೋತ್ಸಹ ನೀಡಿದಾಗ ಇಂತಹ ಪ್ರತಿಭೆಗಳು ಹೊರ ಜಗ್ಗತಿಗೆ ಪರಿಚಯವಾಗುತ್ತದೆ ಎಂದು ಹೇಳಿದರು.


ಕಲಾಂನ್ಸ್ ವಾರ್ಡ್ ರೆಕಾರ್ಡ್ ಬ್ರೇಕ್ ಮಾಡಿದ ಸಾಫ್ಟ್‌ಇಂಜಿನೀಯರ್ ಲಾವಣ್ಯ ಮಾತನಾಡಿ ಆನ್ ಲೈನ್ ಮೂಲಕ ಇಂತಹ ಒಂದು ಸ್ಪರ್ಧೆ ಇರುವುದು ಕಂಡು ಬಂದು ನಾನು ಸಹ ಕೋಲಾರ ಜಿಲ್ಲೆಯಿಂದ ಸ್ಪರ್ಧೆ
ಮಾಡಿ ನನ್ನ ಏಕಾಗ್ರತೆಯನ್ನು ಪ್ರದರ್ಶಿಸುವ ಮೂಲಕ ೨೮ ಸೆಂಕಡ್‌ಗಳಲ್ಲಿ ೧೦೦ ರಿಂದ ೦ ವರೆಗೆ ಹಿಂದಿನಿಂದ ಓದುವ ಕಲೆ ಪ್ರದರ್ಶನ ಮಾಡಿದ್ದೇನೆ ಎಲ್ಲರೂ ಇಂತಹ ಸ್ಪರ್ದೆಗಳಲ್ಲಿ ಭಾಗವಹಿಸಿ ಸತತವಾಗಿ ಸಾಧನೆ ಮಾಡಿದರೆ ನಿಮ್ಮ ಗುರಿ ಮುಟ್ಟಲು ಸುಲಭವಾಗಲಿದೆ ಎಂದು ಹೇಳಿದರು.


ಕಲಾಂನ್ಸ್ ವಾರ್ಡ್ ರೆಕಾರ್ಡ್‌ನಲ್ಲಿ ಸಾಧನೆ ಮಾಡಿದ ಸ್ಪರ್ಧಿಗಳಿಗೆ ಚೈನೈನಲ್ಲಿ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ವಿತರಿಸಲಾಯಿತು.