
ಕಾಳಗಿ:ಏ.20:ಸತ್ಯಮಾರ್ಗದ ರಾಜಕೀಯಕ್ಕೆ ಹೆಚ್ಚು ಒತ್ತುನೀಡಿರುವ ಕ್ರಾಂತಿ ಪುರುಷ ಡಾ.ಬಾಬು ಜಗಜೀವನರಾಮ್ ಭಾರತ ದೇಶದ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮೂಡಿಪಾಗಿಟ್ಟಿರುವ ಎಕೈಕ ನಾಯಕ ಅವರಾಗಿದ್ದರು ಎಂದು ಬೀದರ್ ಸಂಸದ ಸಾಗರ ಖಂಡ್ರೆ ತಿಳಿಸಿದರು.
ಪಟ್ಟಣದ ಶ್ರೀನೀಲಕಂಠ ಕಾಳೇಶ್ವರ ಮಂಗಲ ಮಂಟಪದಲ್ಲಿ ರವಿವಾರ ಏರ್ಪಡಿಸಿರುವ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪಪ್ರಧಾನಿಗಳಾದ ಡಾ.ಬಾಬು ಜಗಜೀವನರಾಮ್ ಅವರ 119ನೇ ಜಯಂತೋತ್ಸವದ ಬೃಹತ್ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಮಾದಿಗ ಸಮಾಜಕ್ಕಾಗಿ
ಕಾಳಗಿಯಲ್ಲಿ ತಾಲೂಕು ಮಟ್ಟದ ಬಾಬೂಜೀ ಭವನ ನಿರ್ಮಾಣಕ್ಕಾಗಿ 10ಲಕ್ಷ ಹಣ ನೀಡುವುದಾಗಿ ಭರವಸೆ ನೀಡಿದರು.
ಶಾಸಕ ಡಾ.ಅವಿನಾಶ ಜಾಧವ ಮಾತನಾಡಿ
ಭಾರತ ದೇಶ ಸುಭದ್ರವಾಗಿ ಹಾಗೂ ಹಸಿವು ಮುಕ್ತವಾದ ರಾಷ್ಟ್ರವಾಗಿ ಮುನ್ನಡೆಸಿಕೊಂಡು ಹೊಗುವ ಅಪಾರವಾದ ಶಕ್ತಿ ಈ ದೇಶದ ರೈತನಿಗೆ ಮಾತ್ರ ಎಂದರಿತ ಬಾಬೂಜೀ ಅವರು, ತಮ್ಮ ಅಧೀಕಾರವಧಿಯಲ್ಲಿ ಹಸಿರುಕ್ರಾಂತಿಯನ್ನೆ ಮಾಡಿ ದೇಶ ಅಭಿವೃದ್ಧಿಪಡಿಸುವ ಸಾಹಸ ಮಾಡಿದರು.
ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ವಾಗಿ ಹಿಂದೂಳಿದ ಮಾದಿಗ ಸಮಾಜ ಮುಂದೆ ಬರುವುದು ಪ್ರಮುಖವಾಗಿದೆ.
ತಮ್ಮ ಹಕ್ಕಿಗಾಗಿ ಒಳ ಮೀಸಲಾತಿ ಕೇಳುತ್ತಿರುವುದು ಸಾಂವಿಧಾನಿಕವಾಗಿದ್ದು, ತಮ್ಮ ಹಕ್ಕಿಗಾಗಿ ಯಾವ ಪಕ್ಷದ ನಾಯಕನಿಗೂ ಸಹ ನಿರ್ಭೀತಿಯಿಂದ ಪ್ರಶ್ನಿಸುವ ಅಧಿಕಾರ ಮಾದಿಗ ಸಮಾಜಕ್ಕಿದೆ ಎಂದರು.
ಮಾದಿಗ ಸಮಾಜದ ಸುಂದರ ಭವನ ನಿರ್ಮಾಣಕ್ಕೆ 50ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ತುಂಬಿದ ಸಭೆಯಲ್ಲಿ ನಾಯಕರುಗಳ ವಾಗ್ವಾದ ಸಭೇ ವಿಸರ್ಜಿಸಲು ಮುಂದಾದ ಸಾಗರ ಖಂಡ್ರೆ:
ಮಾದಿಗ ಸಮಾಜದ ಹಿರಿಯ ಮುಖಂಡ ಹಾಗೂ ಮಾದರ ಮಹಾ ಸಭೇಯ ಕಲಬುರಗಿ ಜಿಲ್ಲಾಧ್ಯಕ್ಷ ಗೋಪಾಲರಾವ ಕಟ್ಟಿಮನಿ ಮಾತು ಪ್ರಾರಂಭಿಸಿ, ಒಳ ಮೀಸಲಾತಿ ಜಾರಿಗಾಗಿ 30ವರ್ಷಗಳಿಂದ ಹೋರಾಟ ಮಾಡುತ್ತ ಬಂದಿರುವ ಮಾದಿಗರಿಗೆ ಎಲ್ಲಾ ಪಕ್ಷಗಳು ತುಳಿಯುತ್ತಲೇ ಬಂದಿವೆ.
ಕಳೆದ ಬಾರಿ ಕಾಂಗ್ರೆಸ್ ಚುನಾವಣೆ ವೇಳೆ ತಮ್ಮ ಪ್ರನಾಳಿಕೆಯಲ್ಲಿ ಒಳಮೀಸಲು ಜಾರಿ ಮಾಡುವುದಾಗಿ ಭರವಸೆ ನೀಡಿ, ಮಾದಿಗರ ಮತಗಳನ್ನು ಪಡೆದು ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರ ಈಗ ಮಿಸಲಾತಿ ಜಾರಿ ಮಾಡದೆ ಮಿಂಚು ಹುಳುವಿನಂತೆ ನಟಿಸುತ್ತಿದೆ ಎಂದರು.
ವೇದಿಕೆಯಲ್ಲಿರುವ ಸಂಸದ ಸಾಗರ ಖಂಡ್ರೆ ಸಿಟ್ಟಿಗೆದ್ದು ನಿಂತು, ಮೀಸಲಾತಿ ಜಾರಿಯಲ್ಲಿ ಸಿಎಂ ಸಿದ್ದರಾಮಯ್ಯನವರೇ ವಿಳಂಬ ನೀತಿ ಅನುಸರಿಸುತ್ತಾರೆ ಎನ್ನುತ್ತಿರಿ.
ಕೇವಲ ಸಿಎಂ ಸಿದ್ದರಾಮಯ್ಯನವರನ್ನೆ ಏಕೆ ಬೊಟ್ಟು ಮಾಡಿ ತೋರಿಸುತ್ತಿರಿ ಎಂದು ಸಭೆ ವಿಸರ್ಜಿಸಲು ಮುಂದಾದರು.
ವೇದಿಕೆಯಲ್ಲಿರುವ ಉಳಿದ ಗಣ್ಯರು ಸಂಸದರಿಗೆ ಸಾಂತ್ವಾನ ಹೇಳಿ ಕುಳಿರಿಸಿದರು.
ಕೆಲವು ನಿಮಿಷ ವೇದಿಕೆ ಗೊಂದಲದ ಗೂಡಾಯಿತು.
ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ, ದಶರಥ ಕಲಗುರ್ತಿ ಮಾತನಾಡಿದರು.
ಭರತನೂರಿನ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು.
119ನೇ ಜಯಂತೋತ್ಸವ ಸಮಿತಿ ಅಧ್ಯಕ್ಷ ಶರಣು ರಾಜಾಪೂರ,
ರೇವಣಸಿದ್ದ ಕಟ್ಟಿಮನಿ, ಸುಂದರ ಸಾಗರ,
ರಮೇಶ ಕಿಟ್ಟದ, ಮಲ್ಲಿಕಾರ್ಜುನ ಸಿಂಗೆ, ಮಹೇಶ ಭರತನೂರ, ಕರಣ ರಾಜಾಪೂರ, ಹರೀಶ ಸಿಂಗೆ, ಪ್ರಶಾಂತ ಕದಂ, ಶರಣು ಚಂದಾ, ಮಾಣಿಕ ಸಿಂಧೆ, ಶಿವಕುಮಾರ ಕಮಕನೂರ, ಕೃಷ್ಣ ಕಟ್ಟಿಮನಿ, ರೇವಣಸಿದ್ದ ಕೋಡ್ಲಿ ಸೇರಿದಂತೆ ಅನೇಕರಿದ್ದರು.




















