
ಕೆಜಿಎಫ್:ಮಾ:೧೮: ಜಾತ್ರ ಮಹೋತ್ಸವದಲ್ಲಿ ಯಾವುದೇ ಶಾಂತಿಗೆ ಭಂಗ ಬರದಂತೆ ಶಾಂತಿ ಸುವ್ಯವಸ್ಥೆ ಗ್ರಾಮಸ್ಥರು ಕಾಪಾಡಬೇಕು ನಿಮ್ಮ ರಕ್ಷಣೆ ಹಾಗೂ ಬಂದೋ ಬಸ್ತ್‌ಗೆ ನೆರವಿಗೆ ಪೊಲೀಸ್ ಇಲಾಖೆ ಧಾವಿಸಲಿದೆ ಎಂದು ಬೆಮೆಲ್ ಠಾಣೆ ಎಸ್‌ಐ ರವಿಚಂದ್ರ ಹೇಳಿದರು.
ನಗರದ ಸರಹದ್ದಿನಲ್ಲಿರುವ ಪಿಚ್ಚಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ಪ್ರಖ್ಯಾತಿ ಪಡೆದಿರುವ ಪಿಚ್ಚಹಳ್ಳಿ ಚಾಮುಂಡೇಶ್ವರಿ ದೇವಾಲಯದ ಜಾತ್ರ ಮಹೋತ್ಸವ ಹಿನ್ನಲೆ ಗ್ರಾಮದಲ್ಲಿ ಗ್ರಾಮಸ್ಥರೊಂದಿಗೆ ಶಾಂತಿ ಸಭೆ ನಡೆಸಿದ ಬೆಮೆಲ್ ಎಎಸ್‌ಯ ರವಿಚಂದ್ರ ಮೈಸೂರು ಮಹಾರಾಜರ ಸಹಕಾರದಿಂದ ನಿರ್ಮೀಸಿರುವ ಚಾಮುಂಡೇಶ್ವರಿ ದೇವಿಯ ಜಾತ್ರೆಯನ್ನು ಅನಾಧಿ ಕಾಲದಿಂದ ಆಚರಿಸಿಕೊಂಡು ಬರಲಾಗುತ್ತಿದೆ ಜಾತ್ರೆ ಹಿನ್ನಲೆ ಇಲಾಖೆಯಲ್ಲಿ ಅನುಮತಿಯನ್ನು ನೀಡಲಾಗಿದ್ದು ಗ್ರಾಮಸ್ಥರು ಒಂದಾಗಿ ಅನ್ಯೋನತೆಯಿಂದ ಮಾಡಬೇಕು ನಿಮ್ಮ ರಕ್ಷಣೆಗೆ ಪೊಲೀಸ್ ಇಲಾಖೆ ನಿಲ್ಲಲಿದೆ ಜಾತ್ರೆ ಸಂದರ್ಭದಲ್ಲಿ ಯಾವುದಾದರು ಅವಘಡಗಳು ಸಂಭವಿಸದರೆ ತಕ್ಷಣ ಇಲಾಖೆಗೆ ಮಾಹಿತಿ ನೀಡಬೇಕು ಮಕ್ಕಳ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಗಳನ್ನು ಮನೆಯಲ್ಲಿ ಪೋಷಕರು ಗಂಡನೊಂದಿಗೆ ಹೇಳಿಕೊಳ್ಳಲು ಆಗದವರಿಗಾಗಿ ಅಕ್ಕ ಪಡೆಯನ್ನು ಮಾನ್ಯ ಗೃಹ ಸಚಿವರು ಮಹಿಳಾ ಮತ್ತು ಕಲ್ಯಾಣ ಸಚಿವರಾದ ಲಕ್ಷ್ಮಿಹೆಬ್ಬಾಳ್ಕರ್ ರವರು ೧೮೧ ಸಹಾಯ ವಾಣಿಯನ್ನು ಪ್ರಾರಂಭಿಸಿದ್ದು ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಬೇಕು ಮತ್ತು ಗ್ರಾಮದಲ್ಲಿ ಗಾಂಜ ಮಾರಾಟ ಮಾಡುವವರ ಬಗ್ಗೆ ಮಾಹಿತಿ ನೀಡಿದರೆ ಗಾಂಜ ಮಾರಾಟವನ್ನು ಬಗ್ಗು ಬಡಿಯಲು ಸಹಕಾರಿಯಾಗಲಿದೆ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದರು.
ಈ ವೇಳೆ ಘಟ್ಟಕಾಮದೇನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸವಿತಪ್ರಸನ್ನ ಹಾಗೂ ಗ್ರಾಮಸ್ಥರು ಹಾಜರಿದ್ದರು .



























