
ಕಲಬುರಗಿ:ಬಾಬಾ ಸಾಹೇಬ ಅಂಬೇಡ್ಕರ್ ಅವರು ದೇಶದ ದಮನಿತರರ ಅಭಿವೃದ್ಧಿಯ ನೀಲನಕ್ಷೆ ಬರೆಯಲು ಅವರು ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು. ಅಂಬೇಡ್ಕರ್ ಹಲವು ಜ್ಞಾನಶಿಸ್ತುಗಳ ವಿದ್ವತ್ ಉಳ್ಳವರಾಗಿದ್ದರು. ಅವರ ಓದಿನ ಹರವು ದೊಡ್ಡದು ಅಂದು ಜಾಗತಿಕ ಚಿಂತಕರನ್ನು ಓದಿ ವಿದ್ವತ್ತು ಪಡೆದಿದ್ದರು, ಇಂದು ಜಗತ್ತು ಅಂಬೇಡ್ಕರ್ ಅವರನ್ನು ಹೆಚ್ಚೆಚ್ಚು ಓದತೊಡಗಿದ್ದಾರೆ. ಅವರ ಅಪಾರ ಓದು-ವಿದ್ವತ್ತು ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಿದೆ’ ಎಂದು ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಡಾ.ಅಂಬೇಡ್ಕರ್ ಮಹಾವಿದ್ಯಾಲಯದ ಡಾ.ಅಂಬೇಡ್ಕರ್ ವಿಚಾರ ವೇದಿಕೆಯ ಉದ್ಘಾಟನೆ ಮತ್ತು ಬಿ.ಎ., ಬಿ.ಕಾಂ,. ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪೆÇ್ರಫೆಸರ್ ವಿಕ್ರಮ ವಿಸಾಜಿಯವರು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾದ ಪೆÇ್ರ.ರಮೇಶ ಲಂಡನಕರ್ ಅವರು `ಕಲಬುರಗಿಯಲ್ಲಿ ಡಾ.ಅಂಬೇಡ್ಕರ್ ಕಾಲೇಜಿಗೆ ಒಂದು ಮಹತ್ವದ ಸ್ಥಾನವಿದೆ. ಕಾರಣ ಈ ಕಾಲೇಜಿಗೆ ಬಡ ದಲಿತ ದಮನಿತ ಮಕ್ಕಳು ಕಲಿಯಲು ಬರುತ್ತಾರೆ. ಇಲ್ಲಿನ ಮಕ್ಕಳು ಮುಂದೆ ಸಮಾಜವನ್ನು ಸುಧಾರಿಸುವ ಚಿಂತಕರಾಗಿ ಬೆಳೆಯಬೇಕು’ ಎಂದು ಆಶಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಪಿ.ಇ ಸೊಸೈಟಿಯ ಕಾರ್ಯದರ್ಶಿಗಳಾದ ಶಾಂತಪ್ಪ ಸೂರನ್ ಅವರು ಮಕ್ಕಳಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಶಿಸ್ತು, ಅಧ್ಯಯನದ ಹಸಿವು, ಏನನ್ನಾದರೂ ಸಾಧಿಸುವ ಛಲ ಬೆಳೆಯಬೇಲಾಗಿದೆ ಎಂದರು. ಸಾಂಸ್ಕøತಿಕ ಕಾರ್ಯಕ್ರಮಗಳ ಸಂಚಾಲಕರಾದ ಡಾ.ಅರುಣ್ ಜೋಳದಕೂಡ್ಲಿಗಿ ಅವರು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ವೇದಿಕೆಯ ಮೇಲಿನ ಅತಿಥಿಗಳು ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡಿ ಗೌರವಿಸಿದರು.5000 ಮೆರಥಾನ್ ಓಟದಲ್ಲಿ ಚಿನ್ನದ ಪದಕ ಪಡೆದ ಕಾಲೇಜಿನ ಅಜಯ್ ಭೀಮರಾವ್ ಮತ್ತು ಯುಜಿಸಿ-ಎನ್.ಇ.ಟಿ ಪರೀಕ್ಷೆ ಪಾಸು ಮಾಡಿದ ಡಾ.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಕಾಂ ಎರಡನೆ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿ ಅಭಿಶೇಕ ಅವರುಗಳನ್ನು ಸನ್ಮಾನಿಸಲಾಯಿತು. ಡಾ.ಅಂಬೇಡ್ಕರ್ ವಿಚಾರ ವೇದಿಕೆಯ ಸಂಚಾಲಕರಾದ ಡಾ.ಗಾಂಧೀಜಿ ಮೋಳೆಕರ್ ಅವರು ವಿಛಾರ ವೇದಿಕೆಯ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಡಾ.ನಿರ್ಮಲಾ ಶಿರಗಾಪುರ ಅವರು ಎಲ್ಲರಿಗೂ ವಂದನೆಗಳನ್ನು ತಿಳಿಸಿದರು. ಪ್ರಾಧ್ಯಾಪಕ ಡಾ.ದತ್ತೂರಾಯ ಶಿವರಾಯ ಅವರು ನಿರೂಪಿಸಿದರು.
ವೇದಿಕೆಯಲ್ಲಿ ಕೆ.ಪಿ.ಇ ಸೊಸೈಟಿಯ ಆಡಳಿತಾಧಿಕಾರಿಗಳಾದ ಡಾ.ಚಂದ್ರಶೇಖರ ಶೀಲವಂತರ್, ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿದ್ದಪ್ಪ ಎಸ್.ಕಾಂತ, ಡಾ.ವಸಂತ ವಿ.ನಾಶಿ, ಕಾಲೇಜಿನ ಐಕ್ಯೂಎಸಿ ನಿರ್ದೇಶಕರಾದ ಡಾ. ಸಿದ್ದಾರ್ಥ ಮದನಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಧ್ಯಾಪರಾದ ಡಾ.ಶಿವಕುಮಾರ್, ಡಾ.ಕರಿಬಸಪ್ಪ, ಡಾ.ಅರುಣ್ ಕುಮಾರ್, ಡಾ.ಹರ್ಷವರ್ಧನ್, ಡಾ.ಸ್ನೇಹ ಲತಾ, ಡಾ.ರತಿ ರೇವೂರ, ಶಿಲ್ಪ ಎಲ್. ಮಂಜುಳ.ಕೆ, ಡಾ.ಸುರೇಶ ಕುಲಕರ್ಣಿ, ಗ್ರಂಥಪಾಲಕರಾದ ಡಾ. ರಮೇಶ ಜಾಬನೂರು, ಶೃತಿ, ಉಪಸ್ಥಿತರಿದ್ದರು. ಬೋಧಕೇತರ ಸಿಬ್ಬಂಧಿಗಳಾದ ರಾಜಶೇಖರ್, ಸಂಜೀವ ಪಾಟೀಲ ಉಪಸ್ಥಿತರಿದ್ದರು.





















