Home ಜಿಲ್ಲೆ ಕಲಬುರಗಿ 16 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

16 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

ಕಲಬುರಗಿ,ಮೇ.21-ಸುಮಾರು 16 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ವಾಡಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಚಿತ್ತಾಪುರ ತಾಲ್ಲೂಕಿನ ವಾಡಿ (ಜಂ) ಸೋನಾಬಾಯಿ ಏರಿಯಾ ನಿವಾಸಿ ಲಾಲಬಾಷ ತಂದೆ ಸೈಯದ್ ಹುಸೇನ್ (41) ಕಳೆದ 16 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ.
ಆರೋಪಿ ಪತ್ತೆಗೆ ಪಿಎಸ್‍ಐಗಳಾದ ತಿರುಮೇಶ, ರೇಣುಕಾ, ಎಎಸ್‍ಐ ಮೊಹ್ಮದ್ ಯೂಸೂಫ್, ಸಿಬ್ಬಂದಿಗಳಾದ ಬಸವಲಿಂಗಪ್ಪ, ಸಂಗಮೇಶ, ಆರೀಫ್, ರವಿಂದ್ರ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ಬೆಂಗಳೂರು, ಕಲಬುರಗಿ, ನಾಲವಾರ, ಕುಂಬಾರಹಳ್ಳಿ, ವಾಡಿ ಪಟ್ಟಣ ಮುಂತಾದ ಕಡೆಗಳಲ್ಲಿ ಹುಡುಕಾಟ ನಡೆಸಿ ಮೇ.19 ರಂದು ವಾಡಿ ಪಟ್ಟಣದಲ್ಲಿ ಆರೋಪಿ ಲಾಲಾಬಾಷನನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕಳೆದ 16 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡದ ಕಾರ್ಯವನ್ನು ಎಸ್‍ಪಿ ಅಡ್ಡೂರು ಶ್ರೀನಿವಾಸಲು ಅವರು ಶ್ರ್ಲಾಘಿಸಿದ್ದಾರೆ.