Home ಜಿಲ್ಲೆ ಕಲಬುರಗಿ ಪ್ರತಿಯೊಬ್ಬರ ಮನೆಯಲ್ಲೂ ಗ್ರಂಥಾಲಯ ಅವಶ್ಯಕ: ನಿರಗುಡಿ

ಪ್ರತಿಯೊಬ್ಬರ ಮನೆಯಲ್ಲೂ ಗ್ರಂಥಾಲಯ ಅವಶ್ಯಕ: ನಿರಗುಡಿ

ಕಲಬುರಗಿ,ಮಾ.18-ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಾಗೂ ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ ಸೋಮವಾರ ನಗರದ ಶಿವಶಕ್ತಿ ಬಡಾವಣೆಯ ಹಿರಿಯ ಸಾಹಿತಿಗಳಾದ ಡಾ. ಚಿ ಸಿ ನಿಂಗಣ್ಣನವರ ಸಾಹಿತ್ಯ ಕುಟೀರದ ಬಸವ ಗ್ರಂಥಾಲಯದಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಅನುಷ್ಠಾನಗೊಳಿಸಲಾಯಿತು. ಈ ಕಾರ್ಯಕ್ರಮದ ಆಶಯ ಮಾತುಗಳನಾಡುತ್ತಾ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮಾನಸ ಮೈಸೂರು ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಅನೇಕ ಯೋಜನೆಗಳನ್ನು ಹಾಕಿಕೊಂಡು ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನ ತರುವುದರೊಂದಿಗೆ ಕನ್ನಡ ಪರಿಸರ ನಿರ್ಮಾಣಕ್ಕೆ ಪ್ರಾಧಿಕಾರ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ . ರಾಜ್ಯದಾದ್ಯಂತ ಜನ ಸಾಮಾನ್ಯರು ಕೂಡಾ ಮನೆಯಲ್ಲಿ ಪುಸ್ತಕಗಳನ್ನು ಸಂಗ್ರಹಿಸುವ ಅಭಿರುಚಿ ಬೆಳೆಸಿಕೊಳ್ಳಬಹುದು ಎಂದು ರಾಜ್ಯ ಸದಸ್ಯರಾದ ಬಿ. ಎಚ್. ನಿರಗುಡಿ ಹೇಳಿದರು. ಡಾ. ಚಿ.ಸಿ ನಿಂಗಣ್ಣನವರ ಸಾಹಿತ್ಯ ಕುಟೀರದಲ್ಲಿ ಅದ್ಭುತವಾದ ಗ್ರಂಥಾಲಯವನ್ನು ನಿರ್ಮಾಣ ಮಾಡಿ 2000 ಕ್ಕಿಂತ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ , ಓದುಗರಿಗೆ ಗ್ರಂಥಾಲಯದ ಪುಸ್ತಕಗಳು ಎರವಲಾಗಿ ನೀಡುತ್ತಿದ್ದಾರೆ. ಹಾಗಾಗಿ ಅವರ ಸೇವೆಯನ್ನು ಪರಿಗಣಿಸಿ ಕನ್ನಡ ಪುಸ್ತಕ ಪ್ರಾಧಿಕಾರವು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು ಎಂದು ನಿರಗುಡಿ ಹೇಳಿದರು.
ಹಿರಿಯ ಸಾಹಿತಿಗಳಾದ ಡಾ. ವಿಜಯಕುಮಾರ್ ಪರುತೆ ಅವರು ಉದ್ಘಾಟಿಸಿ ಮಾತನಾಡುತ್ತಾ ಇಂದು ಆಧುನಿಕ ವಿಲಾಸಿ ಜೀವನ ಶೈಲಿಯಿಂದ ಮನುಷ್ಯ ಹೊರಬಂದು ಸಾಂಸ್ಕøತಿಕವಾಗಿ ಮುಂದುವರಿಯಬೇಕಾದರೆ ಪ್ರತಿ ಮನೆಯಲ್ಲಿ ಪ್ರತಿಯೊಬ್ಬರು ಪುಸ್ತಕಗಳನ್ನು ಸಂಗ್ರಹಿಸಿ ಗ್ರಂಥಾಲಯವನ್ನು ನಿರ್ಮಾಣ ಮಾಡಿದರೆ ಮಕ್ಕಳ ಜ್ಞಾನಾರ್ಜನೆಗೆ ಉತ್ತಮ ಪರಂಪರೆಗೆ ಸಹಾಯಕವಾಗುತ್ತದೆ ಎಂದು ತಿಳಿಸಿದರು .
ಗ್ರಂಥಾಲಯದಲ್ಲಿ ಡಾ. ಚಿ ಸಿ ನಿಂಗಣ್ಣನವರು ಕನ್ನಡ ಸಾಹಿತ್ಯದ ವಚನ , ಜನಪದ , ವಿಮರ್ಶೆ, ನಾಟಕ, ಜೀವನ ಚರಿತ್ರೆ, ಕಾದಂಬರಿ, ಕಾವ್ಯ, ಅಭಿನಂದನ, ತತ್ವಪದಗಳು, ದಾಸ ಸಾಹಿತ್ಯ, ಜನಪ್ರಿಯ ಮಾಲಿಕೆ, ಕಾನೂನು, ಇತಿಹಾಸ, ವಿಜ್ಞಾನ ಹೀಗೆ ಅನೇಕ ಪ್ರಕಾರದ ಪುಸ್ತಕಗಳನ್ನು ಸಂಗ್ರಹಿಸಿ ಇಟ್ಟಿರುವುದು ಇದೊಂದು ಮಾದರಿಯ ಕೆಲಸವಾಗಿದೆ. ಈ ಗ್ರಂಥಾಲಯಕ್ಕೆ ನಾಡಿನ ಹಿರಿಯ ಸಾಹಿತಿಗಳಾದ ನಾಡೋಜ ಡಾ. ಮನು ಬಳಗಾರ, ಚಿಂತಕ ಪೆÇ್ರ ಎಸ್ ಜಿ ಸಿದ್ದರಾಮಯ್ಯ ,ಡಾ. ಸ್ವಾಮಿರಾವ್ ಕುಲಕರ್ಣಿ, ಡಾ ಡಿ ಬಿ ನಾಯಕ್, ಬಸವರಾಜ ಕೊನೇಕ, ಬಂತನಾಳದ ಪೂಜ್ಯರು ,ಸರಡಗಿ ಪೂಜ್ಯರು ಅನೇಕ ಸಾಹಿತಿಗಳು, ಕಲಾವಿದರು, ಉಪನ್ಯಾಸಕರು, ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಭೇಟಿ ನೀಡಿರುವುದಕ್ಕೆ ಪರುತೆ ಮೆಚ್ಚುಗೆ ವ್ಯಕ್ತಪಡಿಸಿದರು
ಗ್ರಂಥಾಲಯದ ರೂವಾರಿ ಸಾಹಿತಿ ಡಾ. ಚಿ ಸಿ ನಿಂಗಣ್ಣನವರು ಕನ್ನಡ ಪುಸ್ತಕ ಪ್ರಾಧಿಕಾರವು ನಮ್ಮ ಗ್ರಂಥಾಲಯವನ್ನು ಗುರುತಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿ ರುವುದರಿಂದ ಪ್ರಾಧಿಕಾರಕ್ಕೆ ಧನ್ಯವಾದಗಳನ್ನು ತಿಳಿಸಿದರು. 30 ವರ್ಷಗಳಿಂದ ಪುಸ್ತಕಗಳನ್ನು ಜಿಲ್ಲಾ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸುತ್ತಾ ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯದಲ್ಲಿ ಸಂಗ್ರಹಿಸಿದ್ದೇನೆ. ರೈತ ಕುಟುಂಬದಲ್ಲಿ ಜನಿಸಿ ಶರಣ ಸಂಸ್ಕೃತಿಯನ್ನು ಅನುಸರಿಸಿಕೊಂಡು ಮನೆಯಲ್ಲಿ ಬಸವ ಗ್ರಂಥಾಲಯವನ್ನು ನಿರ್ಮಿಸಿ ಪುಸ್ತಕಗಳನ್ನು ಸಂಗ್ರಹಿಸುವುದು ಅವುಗಳನ್ನುಸಂರಕ್ಷಣೆ ಮಾಡುವುದು ಓದುಗರಿಗೆ ನೀಡುವದು ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. ನನ್ನ ಜ್ಞಾನಾರ್ಜನೆಗೆ ಈ ಪುಸ್ತಕಗಳು ಸಹಾಯಕವಾಗಿವೆ ಎಂದರು. ಕಾರ್ಯಕ್ರಮದಲ್ಲಿ ಡಾ. ನಾಗಪ್ಪ ಗೋಗಿ, ವಿಜಯಕುಮಾರ್ ರೋಣದ ಶ್ರೀಶೈಲ್ ಮದಾನೆ ,ಬಿ.ಎಸ್ .ಮಾಲಿ ಪಾಟೀಲ್ ,ಡಾ. ಶಂಕರ್ ಬಾಳಿ, ಶಾಂತಗೌಡ ಪಾಟೀಲ್, ಲಕ್ಷ್ಮಿಕಾಂತ್ ಹಿರೇಗೌಡರು,ಭೀಮಯ್ಯ ಎಂ ಬಸವರಾಜ್ ಪಾಟೀಲ್, ರೇವಣಸಿದ್ದಪ್ಪ ದುಕಾನ, ರೇವಣಸಿದ್ದಯ್ಯನರನಾಳ, ಕಾವ್ಯಶ್ರೀ , ಲಕ್ಷ್ಮೀ ಎನ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.