Home ಜಿಲ್ಲೆ ಬಾಯಾರಿದ ಪ್ರಾಣಿ-ಪಕ್ಷಿಗಳಿಗೆ ನಿತ್ಯ ನೀರುಣಿಸುತ್ತಿರುವ ಸ್ವಾಭಿಮಾನಿ ಗೆಳೆಯರ ಬಳಗ

ಬಾಯಾರಿದ ಪ್ರಾಣಿ-ಪಕ್ಷಿಗಳಿಗೆ ನಿತ್ಯ ನೀರುಣಿಸುತ್ತಿರುವ ಸ್ವಾಭಿಮಾನಿ ಗೆಳೆಯರ ಬಳಗ

ವಿಶೇಷ ವರದಿ: ಶಿವಕುಮಾರ ಸ್ವಾಮಿ
ಬೀದರ್: ಬೇಸಿಗೆ ಬಂತೆAದರೆ ಮನುಷ್ಯನಾದಿಯಾಗಿ ಎಲ್ಲ ಪ್ರಾಣಿ-ಪಕ್ಷಿಗಳು ಬಾಯಾರಿಕೆಯಿಂದ ಬಳಲುವುದು ಸರ್ವೆ ಸಾಮಾನ್ಯ. ಇತ್ತಿಚೀಗೆ ತೇವಾಂಶ ಕಡಿಮೆಯಾಗಿ ತಾಪಮಾನ ಹೆಚ್ಚಾದಂತೆಲ್ಲ ಇನ್ನಷ್ಟು ಜಲಕ್ಕಾಗಿ ಪರದಾಡುವುದು ಸಹಜ. ಅರಣ್ಯ ಪ್ರದೇಶಗಳು ಕಡಿಮೆಯಾಗಿ ಕಾಡೆಲ್ಲ ನಾಡಾಗಿ ಪರಿವರ್ತನೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರಾಣಿಗಳಿಗೆ ಯಾವುದೇ ಸುರಕ್ಷತೆ ಇಲ್ಲದಂತಾಗಿರುವುದು ವಿಪರ್ಯಾಸ ಸಂಗತಿ.
ಮನುಷ್ಯ ಇಂದು ತನ್ನ ಬೀಜಿ ಲೈಫ್‌ನಲ್ಲಿ ಮಾನವಿಯ ಮೌಲ್ಯಗಳನ್ನು ಮರೆತು ತನಗಾಗಿ ತನ್ನ ಕುಟುಂಬಕ್ಕಾಗಿ ಬದುಕುತ್ತಿರುವಾಗ ಇಂಥ ಸನ್ನಿವೇಶದಲ್ಲೂ ಮಾನವಿಯತೆ ಮೆರೆಯುವ ಕೆಲವು ಸಂಘಟನೆಗಳು ಹಾಗೂ ಯುವಕರ ಪಡೆ ಇದೆ ಎಂಬುದು ಸಂತೋಷದ ಸಂಗತಿ. ಅಂತಹ ಸಂಘಟನೆಗಳ ಪಟ್ಟಿಯಲ್ಲಿ ಬೀದರ್ ನಗರದ ಸ್ವಾಭಿಮಾನಿ ಗೆಳೆಯರ ಬಳಗ ಇದೆ ಎಂಬುದು ಅಭಿಮಾನದ ಮಾತು.
ಕಳೆದ ನಾಲ್ಕೆöÊದು ವರ್ಷಗಳಿಂದ ಬೀದರ್ ಸ್ವಾಭಿಮಾನಿ ಬಳಗವು ತಾಲೂಕಿನ ಕಮಠಾಣ ಹಾಗೂ ಅಲಿಯಂಬರ ಅರಣ್ಯ ಪ್ರದೇಶದಲ್ಲಿ ಸ್ವಂತ ಖರ್ಚಿನಲ್ಲಿ ಸಿಮೆಂಟಿನ ಕುಂಡಗಳನ್ನು ನಿರ್ಮಿಸಿ ನಿತ್ಯ ಅವುಗಳಲ್ಲಿ ನೀರು ತುಂಬಿ ಬಾಯಾರಿಕೆಯಿಂದ ಬಳಲುವ ಪ್ರಾಣಿ ಹಾಗೂ ಪಕ್ಷಿಗಳಿಗೆ ನೀರುಣಿಸುವ ಕಾರ್ಯ ಮಾಡುತ್ತಿರುವುದು ತುಂಬ ಹೆಮ್ಮೆಯ ವಿಚಾರ.
ಇವರು ಬರೀ ಅರಣ್ಯ ಪ್ರದೇಶ ,ಮಾತ್ರವಲ್ಲದೇ ಭೂಮರಡ್ಡಿ ಕಾಲೇಜು ಮೈದಾನ, ಎನ್.ಕೆ ಜಾಬಶೆಟ್ಟಿ ಆಯುರ್ವೇದಿಕ ಮೇಡಿಕಲ್ ಕಾಲೇಜು ಅವರಣ ಸೇರಿದಂತೆ ನಗರದ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಹಾಗೂ ಪಕ್ಷಿಗಳಿಗಾಗಿ ಸಣ್ಣ ಸಣ್ಣ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಅವುಗಳಿಗೆ ನೀರು ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ. ಬೇಸಿಗೆ ಬಂತೆAದರೆ ಆಹಾರಕ್ಕಿಂತ ಮನುಷ್ಯಾನಾದಿಯಾಗಿ ಮೊದಲು ಕೇಳುವುದು ನೀರು. ಹಾಗಾಗಿ ಈ ಯುವ ಪಡೆ ನಿತ್ಯ ಇಂಥ ಪೂಣ್ಯ ಕಾರ್ಯದಲ್ಲಿ ತೊಡಗಿ ಸಾರ್ವಜನಿಕರಿಂದ ಭೇಷ್ ಎನಿಸಿಕೊಳ್ಳುತ್ತಿರುವರು. ಇಂಥ ಯುವಜನರ ಈ ಮಹತ್ ಕಾರ್ಯಕ್ಕೆ ಸಾರ್ವಜನಕರಾದ ನಾವುಗಳು ಒಂದು ಸೆಲ್ಯುಟ್ ಹಾಕಲೇಬೇಕಿದೆ.
ಈ ಮಹತ್ತರ ಕಾರ್ಯದಲ್ಲಿ ತೊಡಗಿರುವ ಸ್ವಾಭಿಮಾನಿ ಗೆಳೆಯರ ಬಳಗದ ಪ್ರಮುಖರಾದ ಪ್ರವಿಣ ಅಮಾಜಿ, ನೀಲಕಂಠ ಶಟಕಾರ, ಶ್ರೀಕಾಂತ ರಡ್ಡಿ, ಬಸವರಾಜ ಸ್ವಾಮಿ, ರವಿ ಬೆಳಕುಣೆ, ಸುರೇಶ ಗೂನಳ್ಳಿ, ನಾಗರಾಜ ಬಂಬುಳಗಿ, ಶ್ರೀಕಾಂತ ಸ್ವಾಮಿ ಹಾಗೂ ಇತರರು ಕಳೆದ ಹತ್ತಾರು ವರ್ಷಗಳಿಂದ ಜಿಲ್ಲೆಯ ಹಲವು ಶಾಲಾ, ಕಾಲೇಜುಗಳಿಗೆ ನೀರಿನ ಮಗಿಗಳು, ಕುಂಡಗಳು ಹಾಗೂ ಸಿಮೆಂಟಿನ ರಿಂಗ್‌ಗಳನ್ನು ಉದಾರವಾಗಿ ನೀಡಿ ಮಾನವಿಯತೆ ಮೆರೆದಿರುವರು. ಇವರ ಈ ಉದಾರ ಕಾರ್ಯಕ್ಕೆ ಸಂಜೆವಾಣಿ ಮಾಧ್ಯಮ ಸಂಸ್ಥೆ ಸಹ ಥ್ಯಾಂಕ್ಸ್ ಹೇಳುತ್ತದೆ.