
ಚಿತ್ತಾಪುರ; ಏ.20:ತಾಲೂಕಿನ ಟೆಂಗಳಿ ಕ್ರಾಸ್ ಹತ್ತಿರ ನಿನ್ನೆ ಸಾಯಂಕಾಲ ಭಾರೀ ಗಾಳಿ-ಮಳೆ ಹಾಗೂ ಅಬ್ಬರದ ನಡುವೆ ಅಪರೂಪದ ಘಟನೆ ಜರುಗಿದೆ.
ಕಲಬುರಗಿ ಸೇಡಂ ರಾಜ್ಯ ಹೆದ್ದಾರಿ ಸಮೀಪದ ಟೆಂಗಳಿ ಕ್ರಾಸ್ ಹತ್ತಿರದ ಹೊಲವೊಂದರಲ್ಲಿ ಒಣಗಿದ ಮರವೊಂದಕ್ಕೆ ಸಿಡಿಲು ಬಡಿದು, ಮರಕ್ಕೆ ಸಂಪೂರ್ಣವಾಗಿ ಬೆಂಕಿ ಹೊತ್ತಿಕೊಂಡಿದೆ.
ಮಳೆಯ ನಡೆವೆಯೂ ಮರ ಬೆಂಕಿಗಾಹುತಿಯಾಗಿದ್ದು, ಗಾಳಿಯ ರಭಸಕ್ಕೆ ಮರದಿಂದ ಹೊರಬಿದ್ದ ಬೆಂಕಿಯ ಕಿಡಿಗಳು ಎಲ್ಲೆಡೆ ಹಾರುತ್ತಿರುವ ದೃಶ್ಯ ಕಂಡುಬಂದಿದೆ. ಆ ಕಿಡಿಗಳು ಮಿಂಚು ಹುಳುವಿನಂತೆ ಹೊಳೆಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್’ನಲ್ಲಿ ಸೆರೆಹಿಡಿದಿದ್ದಾರೆ.
ಕಳೆದ ಅನೇಕ ತಿಂಗಳ ಹಳೆಯ ಈ ಒಣಗಿದ ಮರ ಸಿಡಿಲಿನ ಅಪಘಾತಕ್ಕೆ ಹೊತ್ತಿ ಉರಿದಿದ್ದು, ಪ್ರಕೃತಿಯ ಭೀಕರತೆಯ ಜೊತೆಗೆ ಅಚ್ಚರಿಹುಟ್ಟಿಸುವ ದೃಶ್ಯವೂ ಸಾಕ್ಷಿಯಾಗಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನುವುದು ತಿಳಿದು ಬಂದಿದೆ.




















