Home ಜಿಲ್ಲೆ ಕಲಬುರಗಿ ಸಿಯುಕೆಯಿಂದ 2026-27ನೇ ಶೈಕ್ಷಣಿಕ ಸಾಲಿನ ಪಿಎಚ್.ಡಿ. ಪ್ರವೇಶಾತಿಗೆ ಆನ್‍ಲೈನ್ ಅರ್ಜಿ ಆಹ್ವಾನ

ಸಿಯುಕೆಯಿಂದ 2026-27ನೇ ಶೈಕ್ಷಣಿಕ ಸಾಲಿನ ಪಿಎಚ್.ಡಿ. ಪ್ರವೇಶಾತಿಗೆ ಆನ್‍ಲೈನ್ ಅರ್ಜಿ ಆಹ್ವಾನ

ಕಲಬುರಗಿ,ನ.10-ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು (CUK), 2026-27ನೇ ಶೈಕ್ಷಣಿಕ ಸಾಲಿನ ವಿವಿಧ ಪಿಎಚ್.ಡಿ. (Ph.D.) ಸಂಶೋಧನಾ ಕಾರ್ಯಕ್ರಮಗಳ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.
UGC, CSIR, DBT, ICMR ಅಥವಾ ICSSR ಸಂಸ್ಥೆಗಳು ನೀಡುವ ಜೂನಿಯರ್ ರಿಸರ್ಚ್ ಫೆಲೋಶಿಪ್ (JRF) ಹೊಂದಿರುವವರು, UGC/CSIR ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET), GATE ಹಾಗೂ ಇವುಗಳಿಗೆ ಸಮಾನವಾದ ಇತರ ರಾಷ್ಟ್ರೀಯ ಮಟ್ಟದ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಪಿಎಚ್.ಡಿ. ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಇದಲ್ಲದೆ, ‘ಕೇವಲ ಪಿಎಚ್.ಡಿ.’ (Ph.D.-only) ವರ್ಗದಡಿ (ವರ್ಗ-3) NET ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, DST- INSPIRE ಫೆಲೋಶಿಪ್ ಹೊಂದಿರುವವರು, ಕೇಂದ್ರ ಅಥವಾ ರಾಜ್ಯ ಸರ್ಕಾರದ ಪ್ರಾಯೋಜಿತ ಫೆಲೋಶಿಪ್ ಪಡೆಯುತ್ತಿರುವವರು,ANRF-PAIR ಯೋಜನೆಯಡಿ ಸಂಶೋಧನಾ ಫೆಲೋಗಳಾಗಿ ಕಾರ್ಯನಿರ್ವಹಿಸುತ್ತಿರುವವರು ಹಾಗೂ ರಾಷ್ಟ್ರೀಯ ಅಥವಾ
ರಾಜ್ಯಮಟ್ಟದ ಶಿಕ್ಷಕ ಫೆಲೋಶಿಪ್ (Teacher Fellowship) ಹೊಂದಿರುವವರು ಸಹ ವಿಶ್ವವಿದ್ಯಾಲಯದ ನಿಗದಿತ ಪ್ರವೇಶ ಮಾರ್ಗಸೂಚಿಗಳನ್ವಯ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಹ ಅಭ್ಯರ್ಥಿಗಳು CUK-SAMARTH ಪ್ರವೇಶ ಪೆÇೀರ್ಟಲ್ (https://cukadm.samarth.edu.in) ಮೂಲಕ ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿ ಪ್ರಕ್ರಿಯೆಯು 2026ರ ನವೆಂಬರ್ 6ರಂದು ಪ್ರಾರಂಭವಾಗಿದ್ದು, ನವೆಂಬರ್ 27ರಂದು ಮುಕ್ತಾಯಗೊಳ್ಳಲಿದೆ. ಪಿಎಚ್.ಡಿ. ಪ್ರವೇಶಾತಿಗೆ ಅರ್ಜಿ ಸಲ್ಲಿಸಲು Sಂಒಂಖಖಿಊ ಪೆÇೀರ್ಟಲ್‍ನಲ್ಲಿ ಆನ್‍ಲೈನ್ ನೋಂದಣಿ
ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ನೋಂದಣಿ ಪ್ರಕ್ರಿಯೆ ಆರಂಭಿಸುವ ಮೊದಲು ವಿಶ್ವವಿದ್ಯಾಲಯದ ಅಧಿಕೃತ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಬಳಕೆದಾರರ ಕೈಪಿಡಿ (User Manual) ಹಾಗೂ ಪ್ರವೇಶಾತಿಗೆ ಸಂಬಂಧಿಸಿದ ಸಮಗ್ರ ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಓದಿಕೊಳ್ಳುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.
ನೋಂದಣಿ ಶುಲ್ಕ: ಸಾಮಾನ್ಯ ವರ್ಗ (General), OBC-NCL ಮತ್ತು EWS ಅಭ್ಯರ್ಥಿಗಳಿಗೆ 500 ಹಾಗೂ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ದಿವ್ಯಾಂಗ (PwD) ಅಭ್ಯರ್ಥಿಗಳಿಗೆ 100 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. ಈ ಶುಲ್ಕವು ಮರುಪಾವತಿಸಲಾಗದ (Non-refundable)ಮೊತ್ತವಾಗಿದ್ದು, ಅನ್ವಯವಾಗುವ ವಹಿವಾಟು ಶುಲ್ಕಗಳು (Transaction Charges) ಹೆಚ್ಚುವರಿಯಾಗಿರುತ್ತವೆ.
ಪ್ರಮುಖ ದಿನಾಂಕಗಳು: ಆನ್‍ಲೈನ್ ನೋಂದಣಿ ಪ್ರಾರಂಭ: 2026ರ ನವೆಂಬರ್ 6, ಆನ್‍ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2026ರ ನವೆಂಬರ್ 27, ಅರ್ಹ ಅಭ್ಯರ್ಥಿಗಳ ಪಟ್ಟಿಯ ಪ್ರಕಟಣೆ: 2026ರ ನವೆಂಬರ್ 30, ಅರ್ಹತೆಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ: 2026ರ ನವೆಂಬರ್ 30ರಿಂದ ಡಿಸೆಂಬರ್ 1ರವರೆಗೆ, ಪಿಎಚ್.ಡಿ. ಸಂದರ್ಶನಗಳ ಅವಧಿ: 2026ರ ಡಿಸೆಂಬರ್ 3ರಿಂದ 9ರವರೆಗೆ, ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯ ಪ್ರಕಟಣೆ: 2026ರ ಡಿಸೆಂಬರ್ 10, ಪ್ರವೇಶಾತಿ ಪ್ರಕ್ರಿಯೆ ಮತ್ತು ಶುಲ್ಕ ಪಾವತಿಗೆ ಕೊನೆಯ ದಿನಾಂಕ: 2026ರ ಡಿಸೆಂಬರ್ 11, ತರಗತಿಗಳ ಪ್ರಾರಂಭ: 2027ರ ಜನವರಿ 4.
ವಿವಿಧ ಪಿಎಚ್.ಡಿ. ಕಾರ್ಯಕ್ರಮಗಳ ವಿವರಗಳು, ಅರ್ಹತಾ ಮಾನದಂಡಗಳು, ಕನಿಷ್ಠ ಶೈಕ್ಷಣಿಕ ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ, ವಿಭಾಗವಾರು ಸಂಪರ್ಕ ಮಾಹಿತಿ, ಸಂಶೋಧನಾ ಮಾರ್ಗದರ್ಶಕರ (Research Guides) ಆದ್ಯತಾ ಪಟ್ಟಿಗಾಗಿ ನಿಗದಿತ ನಮೂನೆ, ಆನ್‍ಲೈನ್ ನೋಂದಣಿ ವಿಧಾನ ಹಾಗೂ ಪ್ರವೇಶಾತಿಗೆ ಸಂಬಂಧಿಸಿದ ಸಮಗ್ರ ಮಾರ್ಗಸೂಚಿಗಳಿಗಾಗಿ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ವೆಬ್‍ಸೈಟ್ www.cuk.ac.in ಅಥವಾ CUK-SAMARTH ಪ್ರವೇಶ ಪೆÇೀರ್ಟಲ್ https://cukadm.samarth.edu.in ಗೆ ಭೇಟಿ ನೀಡಬಹುದು ಸಿಯುಕೆ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿರುವ ಅಧಿಕೃತ ಪಿಎಚ್.ಡಿ. ಪ್ರವೇಶಾತಿ ಅಧಿಸೂಚನೆಯನ್ನು ಪರಿಶೀಲಿಸುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ.