
-ನಾಗರಾಜ ಹೂವಿನಹಳ್ಳಿ
ಕಲಬುರಗಿ,ನ.೭-ಬಿಳಿಜೋಳದ ಬೆಲೆ ಗಗನಕ್ಕೆ ಏರಿದೆ. ರೊಟ್ಟಿ ಉಣ್ಣುವುದು ಈಗ ತುಟ್ಟಿಯಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಜನರ ಪ್ರಮುಖ ಆಹಾರವಾದ ಜೋಳದ ರೊಟ್ಟಿ ಊಟ ಮಾಡುವುದು ಈಗ ಕಷ್ಟವಾಗಿದೆ.
ಎಲ್ನಿನೋ ಪರಿಣಾಮದಿಂದ ಮಳೆಯಾಗದೇ ಇರುವುದು, ಮಳೆಯಾಗದೇ ಇರುವುದರಿಂದ ಜೋಳ ಬಿತ್ತನೆಯಾಗದೇ ಇರುವುದು ಜೋಳದ ಬೆಲೆ ಏಕಾಏಕಿಯಾಗಿ ಗಗನಕ್ಕೆ ಏರುವಂತೆ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಜೋಳದ ಬೆಲೆ ೧೦,೨೦೦ ರೂಪಾಯಿಗೆ ಬಂದು ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿಳಿಜೋಳದ ಬೆಲೆ ದುಪ್ಪಟ್ಟು ಆದಂತಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬಿಳಿ ಜೋಳದ ಬೆಲೆ ಪ್ರತಿ ಕ್ವಿಂಟಾಲ್ಗೆ ೬೦೦೦ ರೂಪಾಯಿ ಇತ್ತು. ಆದರೆ ಈ ವರ್ಷಕ್ಕೆ ಹೋಲಿಸಿದರೆ ಬಿಳಿಜೋಳದ ಬೆಲೆ ದ್ವಿಗುಣವಾದಂತಾಗಿದೆ. ಹೀಗಾಗಿ ಈ ಭಾಗದ ಜನರ ಪ್ರಮುಖ ಆಹಾರವಾದ ಜೋಳದ ರೊಟ್ಟಿ ಊಟ ಮಾಡುವುದೇ ದುಸ್ತರವಾದಂತಾಗಿದೆ.
ಮೂರು ತಿಂಗಳ ಹಿಂದೆಯಷ್ಟೇ ೫,೫೦೦ ರೂಪಾಯಿ ಕ್ವಿಂಟಲ್ ಮಾರಾಟವಾಗುತ್ತಿದ್ದ ಬಿಳಿಜೋಳ ಇದೀಗ ೧೦,೨೦೦ ರೂಪಾಯಿ ಕ್ವಿಂಟಲ್ಗೆ ಬಂದು ತಲುಪಿರುವುದು ಗ್ರಾಹಕರನ್ನು ದಂಗು ಬಡಿಸಿದೆ. ಬಿಳಿ ಜೋಳದ ಬೆಲೆ ದಿಢೀರನೆ ಹೆಚ್ಚಳವಾಗಿರುವುದರಿಂದ ರೊಟ್ಟಿ ಕೇಂದ್ರಗಳಲ್ಲಿಯೂ ರೊಟ್ಟಿಯ ಬೆಲೆ ಏರಿಕೆಯಾಗಲಿದೆ. ಇದರಿಂದ ಖಾನಾವಳಿಗಳಲ್ಲಿ ಬಿಳಿ ಜೋಳದ ರೊಟ್ಟಿ ಊಟ ಮಾಡುವುದು ಗ್ರಾಹಕರಿಗೆ ಹೆಚ್ಚಿನ ಹೊರೆ ಬೀಳಲಿದೆ.
ಬಿಳಿ ಜೋಳದಲ್ಲಿಯೇ ಮಿಡಿಯಂ ಕ್ವಾಲಿಟಿ ಜೋಳದ ಬೆಲೆ ೮,೩೦೦ ರೂಪಾಯಿ, ಹೈಬ್ರೀಡ್ ಜೋಳದ ಬೆಲೆ ಪ್ರತಿ ಕ್ವಿಂಟಲ್ಗೆ ೩,೫೦೦ ರೂ.ಗಳಿಂದ ೪೦೦೦ ರೂಗೆ ಬಂದು ತಲುಪಿದೆ ಎನ್ನುತ್ತಾರೆ ನಗರದ ನೆಹರು ಗಂಜ್ನ ಕಣಜಿ ಟ್ರೇಡಿಂಗ್ ಕಂಪನಿಯ ಚಂದ್ರಕಾAತ ಕಣಜಿ ಅವರು.
ಮಳೆಯಾಗದೇ ಇರುವುದರಿಂದ ಜೋಳ ಬಿತ್ತನೆ ಬಹುತೇಕ ಕಡಿಮೆಯಾಗಿದೆ. ಇದರಿಂದಾಗಿ ಬಿಳಿ ಜೋಳಕ್ಕೆ ಎಲ್ಲಿಲ್ಲದ ಬೇಡಿಕೆ ಬಂದAತಾಗಿದ್ದು, ಬಡವರು ಮತ್ತು ಮಧ್ಯಮ ವರ್ಗದವರು ಇನ್ನು ಮುಂದೆ ಬಿಳಿಜೋಳ ರೊಟ್ಟಿ ಊಟ ಮಾಡುವುದು ದುಸ್ತರವಾಗಲಿದೆ.
………….
ಬಿಳಿಜೋಳದ ಬೆಲೆ ಪ್ರತಿ ಕ್ವಿಂಟಲ್ಗೆ ೧೦,೨೦೦ ರೂ
ಮೀಡಿಯಂ ಕ್ವಾಲಿಟಿ ಬಿಳಿಜೋಳ ಪ್ರತಿ ಕ್ವಿಂಟಲ್ಗೆ ೮,೩೦೦ ರೂ.
ಹೈಬ್ರೀಡ್ಜೋಳದ ಬೆಲೆ ಪ್ರತಿ ಕ್ವಿಂಟಲ್ಗೆ ೩,೫೦೦ ರಿಂದ ೪೦೦೦ ರೂ.





















