Home ಜಿಲ್ಲೆ ಸಾಧನೆಗೆ ಪರಿಶ್ರಮ ಅತಿ ಮುಖ್ಯ:ಚಂದ್ರಶೇಖರ

ಸಾಧನೆಗೆ ಪರಿಶ್ರಮ ಅತಿ ಮುಖ್ಯ:ಚಂದ್ರಶೇಖರ

ಸೈದಾಪುರ:ಉತ್ತಮ ಸಾಧನೆಗೆ ಸತತ ಪರಿಶ್ರಮ ಅತಿ ಮುಖ್ಯವಾಗಿದೆ ಎಂದು ಯುಪಿಎಸಸಿ ಸಾಧಕರಾದ ಚಂದ್ರಶೇಖರ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಯಲ್ಲಿ ನನ್ನ ಕನಸು ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಆಸಕ್ತಿದಾಯಕವಾದ ವಿಷಯಗಳನ್ನು ನೀವು ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆಯಬೇಕು. ನಾನು ನಿಮ್ಮಂತೆ ಸರಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಯಾಗಿದ್ದೇನೆ ಎಂದು ವಿದ್ಯಾರ್ಥಿನಿ ಮಾದ್ಯಮ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾಧ್ಯಮ ಮುಖ್ಯವಲ್ಲ. ನಮ್ಮ ಗುರಿ ಹಾಗೂ ಪ್ರಯತ್ನ ಮುಖ್ಯವಾಗಿದೆ ಎಂದು ಹೇಳಿದರು.
ಯುಪಿಎಸ್‍ಸಿ ಸಾಧಕರಾದ ಡಾ.ನಿವೇದಿತಾ.ಸಿ.ಭಾವಿಮನಿ ಮಾತನಾಡಿ, ನಮಗೆ ಇಷ್ಟವಾದ ವೃತ್ತಿಯ ಕನಸನ್ನು ಇಟ್ಟುಕೊಂಡು ಪ್ರಯತ್ನ ಮಾಡಿದಾಗ ಸಾಧನೆಗೆ ನೆರವು ನೀಡುತ್ತದೆ. ಎಲ್ಲಾ ಉದ್ಯೋಗಗಳು ತನ್ನದೆಯಾದ ಮಹತ್ವ ಹೊಂದಿವೆ. ಪ್ರೌಡ ಶಾಲಾ ಹಂತದ ಕಲಿಕೆ ಮುಂದಿನ ಸಾಧನೆನೆಗೆ ನೆರವು ನೀಡುತ್ತದೆ. ಇವತ್ತಿನಿಂದಲೇ ನೀವು ನಿಮ್ಮದೆಯಾದ ಕನಸನ್ನು ಇಟ್ಟುಕೊಂಡ ಪ್ರಯತ್ನ ಮಾಡಿ, ಸಾಧನೆ ನಿಮ್ಮದಾಗುತ್ತದೆ ಎಂದು ಕಿವಿ ಮಾತುಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲರಾದ ಕರಬಸಯ್ಯ ದಂಡಿಗಿಮಠ, ದೇವಿಂದ್ರ ಪೀರಾ, ಇಸಿಒ ಚಾಂದಸಾಬ.ಎಂ, ಸಿಆರ್‍ಪಿ ಲಿಂಗಾರೆಡ್ಡಿ, ತಮ್ಮಣ್ಣ, ಮೌನೇಶ, ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಸೇರಿದಂತೆ ಇತರರಿದ್ದರು. ಸಂಗಾರೆಡ್ಡಿ ನಿರೂಪಿಸಿದರು.