
ಕುAದಗೋಳ,ನ.೬: ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಸವಾಯಿ ಗಂಧರ್ವ ಸ್ಮಾರಕ ಭವನದಲ್ಲಿ ಭಾರತ ರಾಷ್ಟಿçÃಯ ವಿದ್ಯಾರ್ಥಿ ಒಕ್ಕೂಟ (ಓSUI)ದಿಂದ ಪದಗ್ರಹಣ ಸಮಾರಂಭ ಹಾಗೂ ಕುಂದಗೋಳ ಯುವ ಸಂಕಲ್ಪ ಯಾತ್ರೆ ಜರುಗಿತು.
ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್. ಪಾಟೀಲ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಂಕಷ್ಟದಲ್ಲಿರುವ ಯುವಕರಿಗೆ ಸೂಕ್ತ ಮಾರ್ಗದರ್ಶನ ಮತ್ತು ನೆರವು ನೀಡುವ ಮೂಲಕ ಸಂಘಟನೆ ಜನಪರವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಮುಖಂಡ ಶಿವಾನಂದ ಬೆಂತೂರ ಮಾತನಾಡಿ, ಸಮಾಜಕ್ಕಾಗಿ ಶ್ರಮಿಸುವ ಯುವಕರಿಗೆ ನಾವೆಲ್ಲರೂ ಸರಿಯಾಗಿ ಸ್ಪಂದಿಸುವದರೊAದಿಗೆ ಅವರ ದಾರಿಗೆ ಬೆಳಕಾಗೋಣ ಎಂದರು.
ಇದಕ್ಕೂ ಮುನ್ನ ನಿವೃತ್ತ ಯೋಧ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ನೋಟ್ಬುಕ್ ಹಾಗೂ ಪೆನ್ ವಿತರಿಸಲಾಯಿತು.
ಇರ್ಫಾನ್ ಮುಲ್ಲಾ, ಅಲ್ತಾಫ್ ತಲವಾಯಿ, ಮನೋಜ ಬಡಿಗೇರ, ವಿಕಾಸ ಗೊರ್ಪಡೆ ಸೇರಿದಂತೆ ಹಲವು ಓSUI ಸದಸ್ಯರಿಗೆ ಪದಗ್ರಹಣ ನಡೆಯಿತು. ಮುತ್ತಣ್ಣ ಶಿವಳ್ಳಿ, ರಮೇಶ ಕೊಪ್ಪದ, ಜಗದೀಶ ಉಪ್ಪಿನ, ಮಲ್ಲಿಕಾರ್ಜುನ ಕಿರೇಸೂರ, ಪ್ರಭುಗೌಡ ಸಕ್ಯಾಗೌಡ ಶ್ಯಾನಿ, ಚಂದ್ರಶೇಖರ ಸೋಮರೇಡ್ಡಿ, ಸಲೀಂ ಕ್ಯಾಲಕೊಂಡ, ಗಂಗಾಧರ ಪಾಣಿಗಟ್ಟಿ, ತೌಸೀಪ್ ಭರದ್ವಾಡ, ಮಣಿಕಂಠ ನಿಲಪ್ಪಗೌಡರ, ಸಂಗಯ್ಯ ಹಿರೇಮಠ, ಯಲ್ಲಪ್ಪ ಖಡಾರಿ, ಬಸವರಾಜ ಹಾಲಿ, ಸೋಮಣ್ಣ ಶಿಂಗಣ್ಣವರ, ಶರಣಪ್ಪ ಮುಂದಿನಮನಿ, ಹಜರತಲಿ ಕರ್ಜಗಿ, ಇರಶಾದ ಅಹಮ್ಮದ ಮುಲ್ಲಾ, ಮಂಜುನಾಥ ನಿಪ್ಪಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.





















