
ಲಕ್ಷೆ÷್ಮÃಶ್ವರ,ನ.೬: ಪಟ್ಟಣದಲ್ಲಿ ಗೋಹತ್ಯೆ ಹಾಗೂ ಅಕ್ರಮ ಗೋಸಾಗಾಣಿಕೆ ರಾಜಾರೋಷವಾಗಿ ನಡೆಯುತ್ತಿದೆ ಎಂದು ಅಖಂಡ ಭಾರತ ಯುವಸೇನೆ ಕಾರ್ಯಕರ್ತರಾದ ಅಮರೀಶ ಗಾಂಜಿ, ಪ್ರತಾಪ ಅಂಕಲಿ ಹಾಗೂ ಸಾಗರ ಮೆಹರವಾಡೆ ಆರೋಪಿಸಿದರು.
ಅವರು ತಹಸೀಲ್ದಾರ ಧನಂಜಯ ಎಂ ಅವರಿಗೆ ಮನವಿ ಸಲ್ಲಿಸಿ ಮಾತನಾಡುತ್ತ, ಸುಪ್ರೀಂ ಕೋರ್ಟ್ ಆದೇಶದಲ್ಲಿ ಗೊಹತ್ಯೆ ನಿಷೇದವಿದ್ದರು ಪಟ್ಟಣದಲ್ಲಿ ಅಕ್ರಮ ಗೋಹತ್ಯೆ ನಡೆಯುತ್ತಿದೆ ಸಂಬAಧಪಟ್ಟ ಅಧಿಕಾರಿಗಳು ಎಚ್ಛೇತ್ತುಕೊಳ್ಳತ್ತಿಲ್ಲ ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರು ಅಧಿಕಾರಿಗಳು, ಕ್ರಮ ಕೈಗೊಂಡಿಎAದು ಆಕ್ರೋಶ ವ್ಯಕ್ತಪಡಿಸಿದರು ಗೋಹತ್ಯೆನಡೆಸುವವರು ಕಣ್ಣು ಮುಂದೆ ಇದ್ದರು ಕ್ರಮಗೊಂಡಿಲ್ಲ,
ಗೋವುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆದ್ದರಿಂದ ಪಟ್ಟಣದ ಸೂಕ್ಷ÷್ಮ ಪ್ರದೇಶಗಳಲ್ಲಿ ಸೂಕ್ತ ನಿಗಾ ವಹಿಸಿ, ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಪೊಲೀಸ್ ಗಸ್ತು ಹೆಚ್ಚಿಸಬೇಕು ಈ ವಿಷಯವನ್ನು ನಿರ್ಲಕ್ಷಿಸಿದಲ್ಲಿ ಮುಂದೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದರೆ ಅದಕ್ಕೆ ಸಂಬAಧ ಪಟ್ಟ ಅಧಿಕಾರಿಗಳೆ ನೇರ ಹೊಣೆಯಾಗುತ್ತಾರೆ
ಅಂತಹ ಘಟನೆಗಳು ಸಂಭವಿಸುವ ಮೊದಲೇ ಸಂಬAಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಚ್ಚರಿಸಿದರು
ಈ ಸಂದರ್ಭದಲ್ಲಿ ಶ್ರೇಯಾoಕ ಹಿರೇಮಠ, ಶರಣು ಗಾಂಜಿ, ಗಂಗಾಧರ ಸವಣೂರ, ವಿಕಾಸ ಮಹಾಜನಶೆಟ್ಟರ, ರಂಜಿತ ಗಾಂಜಿ ಯಶಪಾಲ ಗೋಗಿ, ಸಚಿನ ಬಂಕಾಪುರ, ಶಂಕರ ಹೊನ್ನಣ್ಣವರ ಆಕಾಶ ಕುಂಬಾರ, ಈಶ್ವರ ಅಂಕಲಿ, ಪವನ ಹಗರದ, ಅಭಿಷೇಕ ಘೋoಗಡಿ,ಕಿರಣ ಮಹಾಜನಶೆಟ್ಟರ, ಈರಣ್ಣ ಬೆಳವಿಗಿ ಅಖಂಡ ಭಾರತ ಯುವಸೇನೆ ಕಾರ್ಯಕರ್ತರು ಇದ್ದರು





















