Home ಜಿಲ್ಲೆ ಪ್ರಶಸ್ತಿ ಪ್ರದಾನ ಸಮಾರಂಭ

ಪ್ರಶಸ್ತಿ ಪ್ರದಾನ ಸಮಾರಂಭ


ಗದಗ, 1: ಕಲಾವಿದರು ತಮ್ಮ ಸೃಜನಶೀಲತೆಯನ್ನು ಯಾವುದೇ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೊರೆ ಹೋಗದೆ, ಸ್ವಂತ ಪರಿಶ್ರಮ, ಅನುಭವ ಹಾಗೂ ಪ್ರತಿಭೆಯ ಮೂಲಕ ಅಭಿವ್ಯಕ್ತಿಗೊಳಿಸಬೇಕು. ಕಲೆಯ ಮೂಲ ಸತ್ವ ಮತ್ತು ಸ್ವಂತಿಕೆಯನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಕಲಾವಿದನ ಕರ್ತವ್ಯವಾಗಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ ಹೇಳಿದರು.
ನಗರದ ಸಂಸ್ಕöÈತಿ ಕನ್ವೆನ್ಷನ್ ಬೈ ಟಿ.ಆರ್.ಐ. ವೆಂಚರ್ಸ್ನಲ್ಲಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಬೆಂಗಳೂರು ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ೨೦೨೬ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ, ಗೌರವ ಪ್ರಶಸ್ತಿ, ವರ್ಣಶ್ರೀ ಪ್ರಶಸ್ತಿ, ಪುಸ್ತಕ ಬಹುಮಾನ ಹಾಗೂ ೫೩ನೇ ವಾರ್ಷಿಕ ಕಲಾ ಬಹುಮಾನ ಪ್ರದಾನ ಮತ್ತು ಕಲಾವಿದರ ಪರಿಚಯ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಇಂಜಿನಿಯರಿAಗ್, ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ವಿದ್ಯಾರ್ಥಿಗಳು ಹಾಗೂ ವೃತ್ತಿಪರರು ಕಲೆಯತ್ತ ಆಸಕ್ತಿ ತೋರುತ್ತಿರುವುದು ಸಂತೋಷದ ಸಂಗತಿ. ಆದರೆ, ಕೃತಕ ಬುದ್ಧಿಮತ್ತೆಯ ಪ್ರಭಾವದಿಂದ ಕಲೆಯ ಸ್ವಂತಿಕೆ ಮತ್ತು ಸೃಜನಶೀಲತೆಗೆ ಧಕ್ಕೆಯಾಗದಂತೆ ಕಲಾವಿದರು ಎಚ್ಚರಿಕೆ ವಹಿಸಬೇಕು.


ಯಾವುದೇ ಕಲಾಕೃತಿಯ ಹಿಂದೆ ಕಲಾವಿದನ ಬೆವರು, ಅನುಭವ, ಪರಿಶ್ರಮ ಹಾಗೂ ಭಾವನೆಗಳು ಅಡಗಿರುತ್ತವೆ. ಅಂತಹ ಸೃಜನಶೀಲ ಕಲಾಕೃತಿಗಳಿಗೆ ಸೂಕ್ತ ಮೌಲ್ಯ ದೊರೆಯಬೇಕು. ಸುಲಭದ ಮಾರ್ಗವೆಂದು ಕೃತಕ ತಂತ್ರಜ್ಞಾನದ ಮೇಲೆ ಅವಲಂಬಿತರಾಗಬಾರದು ಎಂದು ಕಿವಿಮಾತು ಹೇಳಿದರು.


ಚಿತ್ರಕಲೆ ಎನ್ನುವುದು ಕಣ್ಣಿನ ಭಾಷೆಯಾದರೆ, ಕವಿತೆ ಕಿವಿಯ ಭಾಷೆಯಾಗಿದೆ. ಕಾವ್ಯ ಮತ್ತು ಚಿತ್ರಕಲೆಗಳೆರಡೂ ಮಾನವನ ಹೃದಯದ ಭಾವನೆಗಳನ್ನು ಅಭಿವ್ಯಕ್ತಿಸುವ ಶಕ್ತಿಯನ್ನು ಹೊಂದಿವೆ. ರಾಜ್ಯದ ಮೂಲೆಮೂಲೆಗಳಲ್ಲಿರುವ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು ಅಕಾಡೆಮಿ ಸದಾ ಬದ್ಧವಾಗಿದೆ. ಹಿರಿಯ ಹಾಗೂ ಕಿರಿಯ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ರಾಜ್ಯದ ಕಲಾಲೋಕವನ್ನು ಮತ್ತಷ್ಟು ಶ್ರೀಮಂತಗೊಳಿಸಲಾಗುವುದು ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗದ ಶ್ರೀ ಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ, ಸಾಹಿತ್ಯ, ಸಂಗೀತ ಮತ್ತು ಕಲೆಗಳು ಮನುಷ್ಯನಿಗೆ ಸಂಸ್ಕಾರ ನೀಡಿ ಸುಸಂಸ್ಕöÈತ ವ್ಯಕ್ತಿಯನ್ನಾಗಿ ರೂಪಿಸುತ್ತವೆ. ಸಾಹಿತ್ಯ, ಸಂಗೀತ ಹಾಗೂ ಕಲೆಗೆ ಹೆಸರುವಾಸಿಯಾದ ಗದಗ ನಗರದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಚಂದ್ರಕಾAತ ಸರೋದೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಲಾವಿದರ ಪರಿಚಯ ಪುಸ್ತಕವನ್ನು ಸಾಹಿತಿ ಚಂದ್ರಶೇಖರ ವಸ್ತçದ ಬಿಡುಗಡೆಗೊಳಿಸಿದರು. ೨೦೨೪-೨೫ ಹಾಗೂ ೨೦೨೫-೨೬ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕöÈತ ಕಲಾವಿದರಿಗೆ, ೨೦೨೩-೨೪ ಹಾಗೂ ೨೦೨೪-೨೫ನೇ ಸಾಲಿನ ವರ್ಣಶ್ರೀ ಪ್ರಶಸ್ತಿ ಪುರಸ್ಕöÈತರಿಗೆ ಮತ್ತು ೫೩ನೇ ವಾರ್ಷಿಕ ಕಲಾ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಬಾಗಲಕೋಟೆಯ ಕವಿ ಲಕ್ಷ÷್ಮಣ ಅವರ ಮಾತಿಗಿಳಿದ ಚಿತ್ರ ಪುಸ್ತಕಕ್ಕೂ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.


ಕೊಪ್ಪಳ ಜಿಲ್ಲೆಯ ಮೆಹಬೂಬ್ ಕಿಲ್ಲೇದಾರ್ ಹಾಗೂ ತಂಡದವರು ರಾಷ್ಟçಗೀತೆ ಮತ್ತು ನಾಡಗೀತೆ ಪ್ರಸ್ತುತಪಡಿಸಿದರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ರಿಜಿಸ್ಟಾçರ್ ಎನ್. ನಮ್ರತಾ ಸ್ವಾಗತಿಸಿದರು. ಕರ್ನಾಟಕ ನಾಟಕ ಅಕಾಡೆಮಿಯ ಕಲಾವಿದ ವೆಂಕಟರಾಜು ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಕಲೆಗಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ನಿರ್ದೇಶಕರು ಡಾ. ಕೆ.ಎಂ. ವಸುಂಧರಾ, ಗೌರವ ಪ್ರಶಸ್ತಿ ಪುರಸ್ಕöÈತ ಕಲಾವಿದರಾದ ಬಾಬು ಜತ್ಕರ, ಎಂ.ಜಿ. ದೊಡ್ಡಮನಿ, ಕೆ.ಸಿ.ಎಸ್. ಪ್ರಸನ್ನ, ಬಿ.ಎಸ್. ದೇಸಾಯಿ, ಡಾ. ಶಶಿಕಲಾ ಹೂಗಾರ್, ಚಿಕ್ಕಣ್ಣ.ಸಿ ಸೇರಿದಂತೆ ವರ್ಣಶ್ರೀ ಪ್ರಶಸ್ತಿ ಪುರಸ್ಕöÈತರು, ೫೩ನೇ ವಾರ್ಷಿಕ ಕಲಾ ಸ್ಪರ್ಧೆಯ ಬಹುಮಾನಿತರು ಹಾಗೂ ಕಲಾಸಕ್ತರು ಉಪಸ್ಥಿತರಿದ್ದರು.