
ಧಾರವಾಡ, ಅ.೨೮: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ನವೀನ ರಾಜ್ ಸಿಂಗ್ ಧಾರವಾಡ ಜಿಲ್ಲೆಗೆ ಭೇಟಿ ನೀಡಿ, ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಅಂತರ ರಾಷ್ಟಿçÃಯ ಮಟ್ಟದ ಈಜುಕೊಳ ಹಾಗೂ ಒಳಾಂಗಣ ಕ್ರೀಡಾಂಗಣವನ್ನು ವಿಕ್ಷೀಸಿದರು. ಈ ಕಟ್ಟಡವನ್ನು ನಿರ್ಮಿಸಿದ ಏಜೆನ್ಸಿಯವರೊಂದಿಗೆ ಪ್ರೋಜೆಕ್ಟ್ ರೀಪೋರ್ಟ ಮತ್ತು ನೀಲ ನಕ್ಷೆಯನ್ನು ವಿಕ್ಷೀಸಿ ಚರ್ಚಿಸಿದರು. ಹಾಗೂ ಕೆಲವೊಂದು ಮಾರ್ಪಾಡು ಮಾಡಲು ಸೂಚಿಸಿದರು.
ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಒಳಾಂಗಣ ಕ್ರೀಡಾಂಗಣವನ್ನು ವಿಕ್ಷೀಸಿದರು. ಸದರಿ ಕಟ್ಟಡವು ಬಹಳ ಹಳೆಯದಾಗಿದ್ದು, ಇಲ್ಲಿ ಕೆಲವೊಂದು ಮಾರ್ಪಾಡು ಮಾಡಲು ಸೂಚಿಸಿದರು. ಕ್ರೀಡಾಂಗಣಕ್ಕೆ ಸಂಬAಧಿಸಿದ ಎಲ್ಲ ಕಾಮಗಾರಿಗಳಿಗೆ ಅಂದಾಜು ವೆಚ್ಚ ಪಟ್ಟಿ ತಯಾರಿಸಿ ಸಲ್ಲಿಸಲು ಸೂಚಿಸಿದರು.
ಕ್ರೀಡಾಂಗಣದಲ್ಲಿ ಕುಸ್ತಿ ಮತ್ತು ಜಿಮ್ ಹಾಲ್ ನಿರ್ಮಿಸಲು ಅನುದಾನ ಕೊರತೆಯಾಗಿದ್ದು, ಹೆಚ್ಚಿನ ಅನುದಾನ ಬಿಡುಗಡೆಗೆ ಹಾಗೂ ಜಿಲ್ಲಾ ಕ್ರೀಡಾಂಗಣದ ಸುತ್ತಲೂ ಪ್ರೇಕ್ಷಕರ ಗ್ಯಾಲರಿ ಮತ್ತು ಸಿಂಥೇಟಿಕ್ ಅಥ್ಲೇಟಿಕ್ಸ್ ಟ್ರಾö್ಯಕ್ ಹಾಳಾಗಿದ್ದು, ಅದನ್ನು ಹೊಸದಾಗಿ ನಿರ್ಮಿಸಲು ಅನುದಾನ ಬಿಡುಗಡೆಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದ ಹೆಚ್ ಅಮರಾಪುರ ವಿನಂತಿಸಿದರು.
ಹುಬ್ಬಳ್ಳಿ ನಗರದ ಉಣಕಲ್ಲ ಸಾಯಿನಗರದಲ್ಲಿ ೧-ಎಕರೆ, ೩೨-ಗುಂಟೆ ಖಾಲಿ ನಿವೇಶನವನ್ನು ಕ್ರೀಡಾ ಚಟುವಟಿಕೆಗಳಿಗೆ ಉಪಯೋಗಿಸಲು ನಿವೇಶನವನ್ನು ಇಲಾಖೆಗೆ ಹಸ್ತಾಂತರಿಸಗೊಳಿಸಲು ಪ್ರಧಾನ ಕಾರ್ಯದರ್ಶಿಗಳಿಗೆ ಸಹಾಯಕ ನಿರ್ದೇಶಕರು ತಿಳಿಸಿದರು.
ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ಬೃಹತ್ ಪ್ರಮಾಣದ ಒಟ್ಟು-೨೨ ಕ್ರೀಡೆಗಳ ಅಂತರ ರಾಷ್ಟಿçÃಯ ಮಟ್ಟದ ವಿವಿಧೋದ್ದೇಶ ಕ್ರೀಡಾಂಗಣವನ್ನು ಖೇಲೋ ಇಂಡಿಯಾ ಯೋಜನೆ ಹಾಗೂ ಸ್ಮಾರ್ಟ ಸಿಟಿ ಯೋಜನೆ ಅಡಿಯಲ್ಲಿ ಅಂದಾಜು ರೂ.೧೭೫.೦೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕ್ರೀಡಾಂಗಣವನ್ನು ವಿಕ್ಷೀಸಿದರು. ಮತ್ತು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಅವರೊಂದಿಗೆ ಚರ್ಚಿಸಿ ಉಧ್ಘಾಟನೆ ಹಾಗೂ ನಿರ್ವಹಣೆಗಾಗಿ ಗುತ್ತಿಗೆಯನ್ನು ನೀಡುವ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ. ರುದ್ರೇಶ ಎಸ್ ಘಾಳಿ, ಸಹಾಯಕ ಇಂಜಿನೀಯರ ಬಸವರಾಜ ಹಾಗೂ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.





















