
ಲಕ್ಷೆ÷್ಮÃಶ್ವರ,ಅ೨೮: ಪಟ್ಟಣದ ಪೇಠ ಬಣದಲ್ಲಿರುವ ೧೦೦೮ ಶ್ರೀ ಅನಂತನಾಥ ತೀರ್ಥಂಕರರ ಬಸದಿಯ ಮುಂಬಾಗಿಲನ್ನು ಬಂದ್ ಮಾಡಿದ್ದು ಅದನ್ನು ತೆರೆಯುವಂತೆ ಆಗ್ರಹಿಸಿ ಜೈನ ಸಮಾಜದವರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ ಈ ಬಸದಿಯ ನಿರ್ವಹಣೆಗಾಗಿ ಮೂವರು ಉಪಾಧ್ಯಾಯರಿದ್ದು ಒಬ್ಬೊಬ್ಬರಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಈಗ ಸುಭಾಷ್ ಮಂಜಪ್ಪ ಉಪಾಧ್ಯಾಯದಂಬರಿಗೆ ಪಾಳೆ ಬಂದಿದೆ ಆದರೆ ಅವರು ಬೇರೆ ಕಡೆ ಇರುವುದರಿಂದ ಮತ್ತೊಬ್ಬರಿಗೆ ಆ ಕೆಲಸವನ್ನು ನಿರ್ವಹಿಸಿದ್ದು ಅವರಿಗೆ ನೀಡಬೇಕಾದ ಸಂಭಾವನೆ ನೇರವಾಗಿ ಮುಖ್ಯ ಅರ್ಚಕರಿಗೆ ಪ್ರತಿ ತಿಂಗಳು ೬ ಸಾವಿರ ರೂಪಾಯಿಗಳು ಮತ್ತು ಉಪ ಅರ್ಚಕರಿಗೆ ೫೦೦೦ ಗಳು ಬರುತ್ತವೆ.
ಆದರೆ ಈಗ ಕಾರ್ಯನಿರ್ವಹಿಸುತ್ತಿರುವವರಿಗೆ ಯಾವುದೇ ಸಂಭಾವನೆ ದೊರಕದ್ದರಿಂದ ಮುಂಭಾಗದ ಬಾಗಿಲನ್ನು ಬಂದ್ ಮಾಡಿ ಹೋಗಿದ್ದು ಇದರಿಂದ ಪ್ರತಿನಿತ್ಯ ಪೂಜಾ ಕೈ ಂಕರಗಳನ್ನು ಕೈಗೊಳ್ಳಲು ಶ್ರಾವಕ ಮತ್ತು ಶ್ರಾವಕಿಯರಿಗೆ ತೊಂದರೆ ಉಂಟಾಗುತ್ತಿದ್ದು ಕೂಡಲೇ ಮಧ್ಯ ಪ್ರವೇಶಿಸಿ ಬಾಗಿಲನ್ನು ತೆರೆಸಬೇಕು ಎಂದು ಗ್ರೇಡ್ ೨ ತಹಸಿಲ್ದಾರ್ ಮಂಜುನಾಥ್ ಅಮಾಸಿಯವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಏನು ಸಮಾಜದ ಅಧ್ಯಕ್ಷರಾದ ಪದ್ಮಾವತಿ ಮಿಣಿಜಿಗಿ , ಗೊಂಗಡಿ ವಕೀಲರು ವೈಭವ್ ಗೋಗಿ ಸಿಜಿ ಗೊಂಗಡಿ ಎಸ್ಆರ್ ಪಾಟೀಲ್ ಬಿಜೆ ಪಾಟೀಲ ಬರಿಗಾಲಿ ಸೇರಿದಂತೆ ಜೈನ ಸಮಾಜದ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು.





















