Home ಜಿಲ್ಲೆ ಪೂರ್ವಭಾವಿ ಸಭೆ

ಪೂರ್ವಭಾವಿ ಸಭೆ

ಲಕ್ಷೆö್ಮÃಶ್ವರ,ಅ೨೮: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಲಕ್ಷೆö್ಮÃಶ್ವರ ತಾಲೂಕಾ ಘಟಕದ ಅಧ್ಯಕ್ಷ ಮಂಜುನಾಥ ಮಾಗಡಿ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ತಾಲೂಕಾ ಘಟಕದ ಪದಾಧಿಕಾರಿಗಳ ಸಭೆ ಹಾಗೂ ವೀರರಾಣಿ ಕಿತ್ತೂರ ಚನ್ನಮ್ಮ ಜಯಂತೋತ್ಸವ ಆಚರಣೆಯ ಕುರಿತ ಪೂರ್ವಭಾವಿ ಸಭೆ ಜರುಗಿತು.


ಈ ವೇಳೆ ತಾಲೂಕಾ ಘಟಕದ ಪ್ರ. ಕಾರ್ಯದರ್ಶಿ ನಾಗರಾಜ ಚಿಂಚಲಿ, ಸಂಘಟನಾ ಕಾರ್ಯದರ್ಶಿ ಮಂಜುನಾಥ ಗೌರಿ ಮಾತನಾಡಿ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಲಕ್ಷೆö್ಮÃಶ್ವರ ತಾಲೂಕಾ ಘಟಕದ ಅಧ್ಯಕ್ಷರಾಗಿ ಮಂಜುನಾಥ ಮಾಗಡಿ ಅವರು ಕಳೆದ ೫ ವರ್ಷಗಳಲ್ಲಿ ಸಮಾಜ ಸಂಘಟನೆಗಾಗಿ ತನುಮನಧನದಿಂದ ಸೇವೆ ಮಾಡಿದ್ದಾರೆ. ಗ್ರಾಮ ಘಟಕಗಳನ್ನು ಸಂಘಟಿಸಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಇದು ಸಮಾಜದವರಿಗೂ ಗೊತ್ತು ಮತ್ತು ದಾಖಲೆಗಳೂ ಇವೆ.. ಸಮಾಜ ಬಾಂಧವರ ಮನೆಯಲ್ಲಿ ಚನ್ನಮ್ಮನ ಮನೆ, ಇತರೇ ಸಮಾಜ ಬಾಂಧವರ ಮನೆಯಲ್ಲಿ ಹರ ಮನೆ ಕಾರ್ಯಕ್ರಮ, ಧರ್ಮ, ಸಮಾಜ ಜಾಗೃತಿ, ಚನ್ನಮ್ಮನ ಜಯಂತೋತ್ಸವ ಸೇರಿ ಅನೇಕ ಕಾರ್ಯ ಮಾಡಿದ್ದಾರೆ. ಆ ಮೂಲಕ ಲಕ್ಷೆö್ಮÃಶ್ವರ ತಾಲೂಕಾ ಘಟಕ ರಾಜ್ಯದಲ್ಲಿಯೇ ಅತ್ಯಂತ ಕ್ರಿಯಾಶೀಲ, ಸಂಘಟನಾ ಶೀಲ ಸಂಘ ಎಂದು ಗುರುತಿಸಿಕೊಂಡಿದೆ. ಅವರ ಅಧ್ಯಕ್ಷತೆಯಲ್ಲಿಯೇ ಈ ವರ್ಷವೂ ಅತ್ಯಂತ ಅರ್ಥಪೂರ್ಣವಾಗಿ ವೀರರಾಣಿ ಕಿತ್ತೂರ ಚನ್ನಮ್ಮನ ಜಯಂತೋತ್ಸವ ಜರುಗಲಿದೆ ಎಂದು ಹೇಳಿದರು.


ಅಧ್ಯಕ್ಷತೆವಹಿಸಿ ಮಾತನಾಡಿದ ತಾಲೂಕಾ ಘಟಕದ ಅಧ್ಯಕ್ಷ ಮಂಜುನಾಥ ಮಾಗಡಿ ಅವರು ನ.೨೨ ರಂದು ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಸೇರಿ ಅನೇಕ ಹರಗುರುಚರ ಮೂರ್ತಿಗಳ ಸಾನಿಧ್ಯದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮನ ಜಯಂತೋತ್ಸವ ಮತ್ತು ವಿಜಯೋತ್ಸವ ಕಾರ್ಯಕ್ರಮ ಮಾಡಲಾಗುತ್ತದೆ. ಕಾರ್ಯಕ್ರಮಕ್ಕೆ ರಾಜ್ಯ ಸಂಘದ ಅಧ್ಯಕ್ಷರು ಸೇರಿ ಎಲ್ಲ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಲಕ್ಷೆö್ಮÃಶ್ವರ, ಶಿರಹಟ್ಟಿ, ಮುಂಡರಗಿ ಸೇರಿ ಜಿಲ್ಲೆಯಾದ್ಯಂತ ಇರುವ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆ. ನನ್ನ ಅಧಿಕಾರಾವಧಿಯಲ್ಲಿ ತಾಲೂಕಾ ಸಂಘದ ಅಧ್ಯಕ್ಷನಾಗಿ ಕಾಯಾವಾಚಾಮನಸಾ ಪೂರ್ವಕವಾಗಿ ಅತ್ಯಂತ ಪ್ರಮಾಣಿಕ ಸೇವೆ ಸಲ್ಲಿಸಿದ್ದೇನೆ. ಜನವರಿ ತಿಂಗಳಲ್ಲಿ ರಾಜ್ಯ ಸಂಘದ ನಿರ್ದೇಶನದಂತೆ ಹೊಸ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಧಿಕಾರ ಶಾಶ್ವತವಲ್ಲ ಸಮಾಜ ಸೇವೆಯನ್ನು ನಿರಂತರವಾಗಿ ಮಾಡುತ್ತೇನೆ ಎಂದರು.


ಈ ವೇಳೆ ತಾಲೂಕಾ ಘಟಕದ ಗೌರವಾಧ್ಯಕ್ಷ ಡಿ.ಸಿ ಮರಳಹಳ್ಳಿ, ಉಪಾಧ್ಯಕ್ಷರಾದ ವಸಂತಗೌಡ ಬಾಗೇವಾಡಿ,ಜುಂಜನಗೌಡ, ನರಸಮ್ಮನವರ, ನಾಗಪ್ಪ ಉಮಚಗಿ, ಮುತ್ತು ಮ ನೀರಲಗಿ, ಪದಾಧಿಕಾರಿಗಳಾದ ಚಂದ್ರು ಮಾಗಡಿ, ಮಲ್ಲಿಕಾರ್ಜುನ ನಿರಾಲೋಟಿ, ಭೀಮಣ್ಣ ಹುಲ್ಲೂರ, ಗುರಪ್ಪ ಮುಳಗುಂದ, ಮಂಜುನಾಥ ಹಂಗನಕಟ್ಟಿ, ಮಾದೇವಪ್ಪ ಕಟಗಿ, ಶಿವಾನಂದಗೌಡ ಬನ್ನಿಮಟ್ಟಿ, ಬಸವಣ್ಣೆಪ್ಪ ಮತ್ತೂರ, ವಿರುಪಾಕ್ಷಪ್ಪ ಮರಳಿಹಳ್ಳಿ, ಪ್ರವೀಣ ಹೊಟ್ಟಿ, ಭರಮಣ್ಣ ಗುಡಗೇರಿ, ಬಸಣ್ಣ ಬಾಳಿಕಾಯಿ, ಕಾಶಪ್ಪ ಮುಳಗುಂದ, ಮಹಾಂತೇಶ ಉಮಚಗಿ, ಮಂಜುನಾಥ ಜಬಡಿ, ನಾಗರಾಜ ಯತ್ನಳ್ಳಿ ಸೇರಿ ಹಲವರಿದ್ದರು.