Home ಜಿಲ್ಲೆ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಮುನವಳ್ಳಿ: ಯಕ್ಕುಂಡಿ ಗ್ರಾಮ ಪಂಚಾಯತಿಯಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಿಂದ ಮಹರ್ಷಿ ವಾಲ್ಮೀಕಿಯವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.


ಕಾರ್ಯಕ್ರಮದ ಅದ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಶೇಕವ್ವ ರವಿ ತಿಮ್ಮೇಶಿ ವಹಿಸಿ ಮಾತನಾಡಿ ಮಹರ್ಷಿವಾಲ್ಮೀಕಿಯವರ ತತ್ವ ಆದರ್ಶಗಳನ್ನು ಎಲ್ಲರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು. ಮಹರ್ಷಿ ವಾಲ್ಮೀಕಿಯವರು ರಾಮಾಯಣ ರಚಿಸಿದ್ದರಿಂದ ವಾಲ್ಮೀಕಿ ರಾಮಾಯಣ ಎಂದು ಪ್ರಸಿದ್ದಿಯಾಯಿತು ಎಂದರು.


ಪAಚಾಯತ ಅಭಿವೃದ್ದಿ ಅಧಿಕಾರಿ ವೈ ಪಿ ಬೋಳಶೆಟ್ಟಿ ಹಾಗೂ ಗ್ರಾಮ ಪಂಚಾಯತ ಸದಸ್ಯರಾದ ಕೃಷ್ಣಾ ಕಂಬಾರ, ಇಮಾಮಸಾಬ ಇಮ್ಮನ್ನವರ, ಶಿವಾನಂದ ಕಂಬಿಯವರ ಮತ್ತು ವಾಲ್ಮೀಕಿ ಸಮಾಜದ ಹಿರಿಯರು ಮತ್ತು ಗ್ರಾಮ ಪಂಚಾಯತ ಸಿಬ್ಬಂದಿ ವರ್ಗ ಇನ್ನೂ ಮುತಾಂದವರು ಉಪಸ್ಥಿತರಿದ್ದರು ಸಂಗಮೇಶ ಸಿದ್ನಾಳ ಸ್ವಾಗತಿಸಿದರು, ಪ್ರಕಾಶ ಕಮ್ಮಾರ ಕಾರ್ಯಕ್ರಮ ನಿರೂಪಿಸಿದರು,ಬಸವ್ವ ಹಿಟ್ಟಣಗಿ ವಂದಿಸಿದರು.