
ನವಲಗುAದ,ಅ೨೫: ದೇಶದ ಸ್ವಾತಂತ್ರ÷್ಯ ಹೋರಾಟದ ಇತಿಹಾಸದಲ್ಲಿ ಧೈರ್ಯ, ಸಾಹಸ ಮತ್ತು ಶೌರ್ಯಕ್ಕೆ ಹೆಸರಾದ ಕಿತ್ತೂರು ರಾಣಿ ಚೆನ್ನಮ್ಮ ಅವರು ಹೋರಾಟ ನಡೆಸಿದ ವೀರ ವನಿತೆಯಾಗಿದ್ದಾರೆ ಎಂದು ತಹಶೀಲ್ದಾರ ಸುಧೀರ ಸಾಹುಕಾರ ಹೇಳಿದರು.
ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನವರ ೨೦೨ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಸಮಾಜದ ಮುಖಂಡರೊAದಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಬ್ರೀಟಿಷರ ವಿರುದ್ಧ ಹೋರಾಡಿ ನಾಡಿನ ಸ್ವಾಭಿಮಾನ ಮತ್ತು ಸ್ವಾತಂತ್ರ÷್ಯಕ್ಕಾಗಿ ತ್ಯಾಗ ಮಾಡಿದ ಅವರ ಆದರ್ಶಗಳು ಇಂದಿನ ಯುವಜನತೆಗೆ ಸದಾ ಪ್ರೇರಣೆಯಾಗಿವೆ ಎಂದರು.
ವೀರಶೈವ ಲಿಂಗಾಯತ ಮಹಾಸಬಾ ತಾಲ್ಲೂಕು ಅಧ್ಯಕ್ಷ ಶಿವಶಂಕರ ಕಲ್ಲೂರ ಮಾತನಾಡಿ ಸ್ವಾತಂತ್ರ÷್ಯ ಹೋರಾಟಗಾರ್ತಿ ವೀರ ರಾಣಿ ಕಿತ್ತೂರು ಚನ್ನಮ್ಮಳ ಜೀವನ ಚರಿತ್ರೆ ಇಂದಿನ ಯುವ ಜನತೆಗೆ ಪರಿಚಯಿ ಸುವ ಕಾರ್ಯ ಸರಕಾರಗಳು ಮಾಡಬೇಕೆಂದರು
ಉಪ ತಹಶೀಲ್ದಾರ ಗಣೇಶ ಚಳ್ಳಕೆರೆ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನಾಗನಗೌಡ ಪಾಟೀಲ್, ಮುಖಂಡರಾದ ಉಮೇಶ ನವಲಗುಂದ, ಶಿರಾಜ ಧಾರವಾಡ, ಜಿ ಎನ್ ತೋಟದ, ಸದುಗೌಡ ಪಾಟೀಲ, ಜಿ ಎಲ್ ಮಡಿವಾಳರ, ಆರ್ ಬಿ ಬಳಗಲಿ, ಶಂಕರಗೌಡ ಬಾಳನಗೌಡ್ರ, ದ್ಯಾಮನಗೌಡ ಪಾಟೀಲ, ಮಹೇಶ್ ಕುರ್ತೀಕೋಟಿ, ಶಂಕ್ರಪ್ಪ ಯಮನೂರ, ಸಂತೋಷ ಹೊಸಮನಿ, ರಾಜುಗೌಡ ಗೌಡಪ್ಪಗೌಡ್ರ ಸೇರಿದಂತೆ ತಹಶೀಲ್ದಾರ ಕಚೇರಿ ಸಿಬ್ಬಂದಿಗಳು ವರ್ಗ ಸಮಾಜದ ಮುಖಂಡರು ಭಾಗವಹಿಸಿದ್ದರು.





















