
ಅಥಣಿ : ಹಬ್ಬಗಳು ಕೇವಲ ಧಾರ್ಮಿಕ ಆಚರಣೆಗಳಲ್ಲ ಅವು ಸಮಾಜದ ಜನರನ್ನು ಪ್ರೀತಿ, ವಿಶ್ವಾಸ ಹಾಗೂ ಸಹೋದರತ್ವದ ಸಂಬಂಧ ಬೆಸೆಯುವ ಶಕ್ತಿಯಾಗಿವೆ. ಎಲ್ಲರೂ ಒಂದಾಗಿ ಹಬ್ಬಗಳನ್ನು ಆಚರಿಸುವ ಮೂಲಕ ಸಮಾಜದಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯವನ್ನು ಬೆಳೆಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಜೀವನದಲ್ಲಿ ಉತ್ತಮ ಸಂಸ್ಕಾರ. ಕಲಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಕನ್ನಡ ಚಿತ್ರರಂಗದ ಖ್ಯಾತ ನಟ, ಕ್ರೇಜಿಸ್ಟಾರ್ ಡಾ. ವಿ ರವಿಚಂದ್ರನ್ ಅವರು ಹೇಳಿದರು.
ಅವರು ಅಥಣಿ ತಾಲೂಕಿನ ನಾಗನೂರ ಪಿಕೆ ಗ್ರಾಮದಲ್ಲಿ ಸಹಕಾರ ಸಚಿವ ಲಕ್ಷ್ಮಣ ಸವದಿ ಹಾಗೂ ಯುವ ನಾಯಕ ಚಿದಾನಂದ ಸವದಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಲಕ್ಷ್ಮೀದೇವಿ ಜಾತ್ರೆ ಹಾಗೂ ದಸರಾ ಮಹೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಯಶಸ್ಸು ಸಾಧಿಸಲು ಪರಿಶ್ರಮ, ತಾಳ್ಮೆ, ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನ ಅತ್ಯಗತ್ಯ. ಜೀವನದಲ್ಲಿ ಸೋಲು ಅಂತಿಮವಲ್ಲ.ಅದು ಗೆಲುವಿನತ್ತ ಕೊಂಡೊಯ್ಯುವ ಮೆಟ್ಟಿಲು ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಗೆಲುವು ಸಂತೋಷ ನೀಡುತ್ತದೆ. ಆದರೆ ಸೋಲು ತನ್ನ ತಪ್ಪನ್ನು ಅರಿತು ಯಶಸ್ಸು ಸಾಧಿಸಲು ಪ್ರೇರಣೆ ನೀಡುತ್ತದೆ. ಸೋಲಿಗೆ ಹೆದರದೆ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಜೀವನದಲ್ಲಿ ನಮಗೆ ಆದ ನೋವನ್ನು ನೆನೆದು ಬದುಕುವುದಕ್ಕಿಂತ ಇತರರಿಗೆ ಆಗುವ ನೋವನ್ನು ಅರಿತು, ಅವರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಚಿತ್ರನಟ ಡಾ.ವಿ.ರವಿಚಂದ್ರನ್ ಹೇಳಿದರು.
“ಹಬ್ಬಗಳ ಆಚರಣೆಯಲ್ಲಿ ಸಾಮರಸ್ಯಕ್ಕೆ ಆದ್ಯತೆ ಇರಲಿ”
ಭಾರತದ ಸಂಸ್ಕøತಿ ಮತ್ತು ಪರಂಪರೆಯಲ್ಲಿ ಹಬ್ಬಗಳಿಗೆ ವಿಶಿಷ್ಟ ಸ್ಥಾನವಿದೆ. ವಿವಿಧ ಹಬ್ಬಗಳು ಜನರನ್ನು ಒಂದೆಡೆ ಸೇರಿಸುವುದರ ಜೊತೆಗೆ ಪರಸ್ಪರ ಪ್ರೀತಿ, ಸಹಕಾರ ಮತ್ತು ಸೌಹಾರ್ದತೆಯನ್ನು ವೃದ್ಧಿಸುತ್ತವೆ. ಹೀಗಾಗಿ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸಬೇಕು. ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಕರ್ನಾಟಕದ ರಾಜ್ಯದ ಸಮಸ್ತ ಜನರು ಅಭಿಮಾನಿಗಳು ನನಗೆ ತೋರುವ ಪ್ರೀತಿ, ವಿಶ್ವಾಸ. ಆತ್ಮೀಯತೆಗೆ ಎಂದೂ ಬೆಲೆ ಕಟ್ಟಲಾಗದು, ಮನೆಯಲ್ಲಿ ಹೆಣ್ಣು ಮಗಳು ಸಂತೋಷವಾಗಿದ್ದರೆ ಇಡೀ ಮನೆಯೇ ಸಂತೋಷವಾಗಿರುತ್ತದೆ. ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಿರಿ. ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವ ನಾಯಕ ಚಿದಾನಂದ ಸವದಿ ಮಾತನಾಡಿ, ಗ್ರಾಮದ ಎಲ್ಲ ಗುರು ಹಿರಿಯರ. ಗೆಳೆಯರ ಬಳಗ ಹಾಗೂ ಗ್ರಾಮದ ಸಮಸ್ತ ಜನರ ಒಗ್ಗಟ್ಟು, ಸಹಕಾರ ಹಾಗೂ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ದಸರಾ ಮಹೋತ್ಸವ ಯಶಸ್ವಿಯಾಗಿ ನೆರವೇರಿತು ಎಂದು ಹೇಳಿದರು.
ಶೇಗುಣಸಿ ವಿರಕ್ತ ಮಠದ ಡಾ. ಮಹಾಂತಪ್ರಭು ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
ನಂತರ ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು.
ಈ ವೇಳೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣ ವರ. ಡಿವೈಎಸ್ಪಿ ಪಿ.ವೀರೇಂದ್ರಕುಮಾರ. ಸಿಪಿಐ ಸಂತೋಷ ಹಳ್ಳೂರ, ಉದ್ಯಮಿ ದಿಲೀಪ ಗುರುಸ್ವಾಮಿ, ಶಂಕರ ನಂದೇಶ್ವರ, ಸಂತೋಷ ಸಾವಡಕರ, ಮಲ್ಲೇಶ ಸವದಿ, ಅಕ್ಷಯ್ ಸವದಿ. ರಾಮನಗೌಡ ಪಾಟೀಲ. ಮಹಾಂತೇಶ ಠಕ್ಕಣ್ಣವರ, ಬಸವರಾಜ ತೇಲಿ ಸೇರಿದಂತೆ ಇತರರಿದ್ದರು.
###############
ಸಹಕಾರ ಸಚಿವ ಲಕ್ಷ್ಮಣ ಸವದಿ ಹಾಗೂ ಯುವ ನಾಯಕ ಚಿದಾನಂದ ಸವದಿ ಅವರ ನೇತೃತ್ವದಲ್ಲಿ ಆಯೋಜಿಸಲಾದ ನಾಗನೂರ ಪಿಕೆ ಗ್ರಾಮದ ದಸರಾ ಮಹೋತ್ಸವಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಅವಿನಾಶ್. ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್. ಅವರ ಆಗಮನ ವಿಶೇಷ ಆಕರ್ಷಣೆಯಾಯಿತು. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ನೆಚ್ಚಿನ ನಟನನ್ನು ಕಂಡ ಗ್ರಾಮಸ್ಥರು ಸಂಭ್ರಮಿಸಿದರು. ದಸರಾ ಮಹೋತ್ಸವವು ಧಾರ್ಮಿಕ ಆಚರಣೆಯ ಜೊತೆಗೆ ಸಾಂಸ್ಕೃತಿಕ ವೈಭವ, ಸಾಮಾಜಿಕ ಒಗ್ಗಟ್ಟು ಹಾಗೂ ಪರಸ್ಪರ ಬಾಂಧವ್ಯವನ್ನು ಸಾರುವ ವೇದಿಕೆಯಾಗಿ ಗಮನ ಸೆಳೆಯಿತು.
###########
ಎಲ್ಲರ ಒಗ್ಗಟ್ಟು, ಸಹಕಾರವೇ ಉತ್ಸವದ ಯಶಸ್ವಿಗೆ ಕಾರಣ : ಚಿದಾನಂದ ಸವದಿ.
ನಾಗನೂರ ಪಿಕೆ ಗ್ರಾಮದ ಎಲ್ಲ ಗ್ರಾಮಸ್ಥರು ಗುರು ಹಿರಿಯರು. ಗೆಳೆಯರ ಬಳಗದವರು ಉತ್ಸಾಹದಿಂದ ಲಕ್ಷ್ಮಿದೇವಿ ಜಾತ್ರೆ ಹಾಗೂ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿದ್ದರಿಂದ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲು ಸಾಧ್ಯವಾಯಿತು. ದಸರಾ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದ ಎಲ್ಲ ಹಿರಿಯರು ಎಲ್ಲ ತಾಯಂದಿರಿಗೂ ಹಾಗೂ ಸಮಸ್ತ ಗ್ರಾಮಸ್ಥರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಎಲ್ಲ ಕಲಾವಿದರಿಗೆ. ಚಿತ್ರನಟ ಅವಿನಾಶ್. ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್. ಹಾಗೂ ಸಮಾರೋಪ ಸಮಾರಂಭಕ್ಕೆ ಆಗಮಿಸಿ ಮೆರುಗು ತಂದ ಚಿತ್ರನಟ. ಕ್ರೇಜಿಸ್ಟಾರ್ ಡಾ.ವಿ. ರವಿಚಂದ್ರನ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.





















