
ಕಲಬುರಗಿ:ಕರುಣೇಶ್ವರ ನಗರದಲ್ಲಿರುವ ವಿವೇಕಾನಂದ ವಿದ್ಯಾನಿಕೇತನ ಶಾಲೆಯಲ್ಲಿ 6 ಹಾಗೂ 7 ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನ ಉಪನ್ಯಾಸ ಸ್ಪರ್ಧೆ ಏರ್ಪಡಿಸಲಾಗಿತ್ತು.ವಿದ್ಯಾರ್ಥಿಗಳು ಮಾನವನ ಹೃದಯ, ನರಮಂಡಲ, ಮೆದುಳು, ಜೀರ್ಣ ಕ್ರಿಯೆ, ಸಂತಾನೋತ್ಪತ್ತಿ ಮುಂತಾದ ವಿಷಯಗಳ ಮೇಲೆಪ್ರಾತ್ಯಕ್ಷಿಕೆಗಳ ಮೂಲಕ ಉಪನ್ಯಾಸ ನೀಡಿದರು.
ಸ್ಪರ್ಧಾಳುಗಳ ವಿಷಯ ಜ್ಞಾನ, ಸಂವಹನ ಕಲೆ ಹಾಗೂ ಪ್ರಾತ್ಯಕ್ಷಿಕೆ ಗುಣಮಟ್ಟ ಹಾಗೂ ಬಳಸಿದ ರೀತಿಯನ್ನಾಧರಿಸಿ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು. ವಿಜ್ಞಾನ ಶಿಕ್ಷಕರಾದ ಯೋಗಿತಾ ಹೊಗಾಡೆ, ನಟಾಶಾ ಮಲ್ಕರ ಹಾಗೂ ವೈಶಾಲಿ ಹಿರೇಮಠ ನಿರ್ಣಾಯಕರಾಗಿ ಆಗಮಿಸಿದ್ದರು.
ಕುಮಾರಿ ಕಸ್ತೂರಿಶಿವಯ್ಯ ಪ್ರಥಮ ಸ್ಥಾನ, ತನುಶ್ರೀ ಗುರುರಾಜ ದ್ವಿತೀಯ, ಚೇತನ್ ಶರಣಗೌಡ ಹಾಗೂ ರತನ್ ದೀಪ್ ಅನಿಲಕುಮಾರ ತೃತೀಯ ಸ್ಥಾನ ಪಡೆದರು. ಕುಮಾರ ನಿರಂಜನ್, ಸಿದ್ಧರಾಮ, ಪ್ರಥಮ್, ಶ್ರೀಯಸ್,ಕುಮಾರಿ ಆರಾಧ್ಯ, ಸೌಜನ್ಯ, ವೈಷ್ಣವಿ, ಶ್ರಾವ್ಯ, ಪ್ರಕಾಶಿತ, ಚೇತನಾ ಹಾಗೂ ಗೌರಿ ಸಮಾಧಾನಕರ ಬಹುಮಾನ ಪಡೆದರು.
ವಿಜೇತ ಮಕ್ಕಳಿಗೆ ಪ್ರಾಂಶುಪಾಲ ಸಿದ್ದಪ್ಪ ಭಗವತಿ ಚೆಕ್ ನೀಡಿ ಮಾತನಾಡಿದರು.ವಿಜ್ಞಾನವನ್ನು ಓದಿ ಅರ್ಥ ಮಾಡಿಕೊಳ್ಳದೆ ಉಪನ್ಯಾಸ ನೀಡುವ ಮೂಲಕ, ಪ್ರಯೋಗ ಮಾಡುವ ಮೂಲಕ ಕಲಿಯಬೇಕು.ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು. ತರಗತಿಯಲ್ಲಿ ಹೆಚ್ಚು ಪ್ರಶ್ನೆಗಳನ್ನು ಕೇಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿಶಿಕ್ಷಣ ಸಂಯೋಜಕಿ ಸುಷ್ಮಾ ಭಗವತಿ,ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





















