
ಚಿಂಚೋಳಿ :ತಾಲೂಕಿನ ಸುಲೇಪೇಟ ಗ್ರಾಮದ ಮಹಾಂತೇಶ್ವರ ಕಲ್ಯಾಣ ಮಂಟಪದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ‘ಸುಲೇಪೇಟ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಭಾನುವಾರ ಜರುಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬೀದರ್ ಸಂಸದ ಸಾಗರ ಖಂಡ್ರೆ, ವಿರೋಧ ಪಕ್ಷದ ಧ್ವನಿ ಪ್ರಬಲವಾಗಿರದ ಸಂದರ್ಭದಲ್ಲಿಯೂ ಮಾಧ್ಯಮ ಕ್ಷೇತ್ರವು ದೇಶದಲ್ಲಿ ವಿರೋಧ ಪಕ್ಷದಂತೆ ಕಾರ್ಯನಿರ್ವಹಿಸಿದ ಉದಾಹರಣೆಗಳಿವೆ ಎಂದರು. ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದ ಕಾಲದಲ್ಲಿಯೂ ಮಾಧ್ಯಮವು ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನಿಸುವ ಮೂಲಕ ಪ್ರಜಾಪ್ರಭುತ್ವದ ಕಾವಲುಗಾರನಾಗಿ ಕೆಲಸ ಮಾಡಿದೆ ಎಂದು ಹೇಳಿದರು
ಮಾಜಿ ಸಂಸದ ಡಾ. ಉಮೇಶ ಜಾಧವ ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಅಪಾರ ಶಕ್ತಿ ಇದೆ. ಪತ್ರಕರ್ತರು ಯಾವುದೇ ವ್ಯಕ್ತಿ ಅಥವಾ ಪಕ್ಷದ ಪರವಾಗಿರದೆ ಸತ್ಯದ ಪರವಾಗಿಯೇ ಕಾರ್ಯನಿರ್ವಹಿಸಬೇಕು. ಜನರಿಗೆ ವಾಸ್ತವಾಂಶವನ್ನು ತಲುಪಿಸುವುದು ಮಾಧ್ಯಮದ ಪ್ರಮುಖ ಕರ್ತವ್ಯ ಎಂದು ಹೇಳಿದರು.
ಕೃಷಿಕ ಸಮಾಜದ ಅಧ್ಯಕ್ಷ ಬಸವರಾಜ ಪಾಟೀಲ ಮಾತನಾಡಿ, ಪತ್ರಕರ್ತರು ಕೇವಲ ಬಂಡವಾಳದ ಉದ್ದೇಶದಿಂದ ಪತ್ರಿಕೋದ್ಯಮದಲ್ಲಿ ತೊಡಗಿಕೊಳ್ಳದೆ, ಗ್ರಾಮೀಣ ಭಾಗದ ಜನರ ಸಮಸ್ಯೆಗಳ ಕುರಿತು ಧ್ವನಿ ಎತ್ತಬೇಕು ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್ ಮಾತನಾಡಿ, ಪತ್ರಕರ್ತರು ತಮ್ಮ ಪ್ರಾಣದ ಹಂಗು ತೊರೆದು ಹಲವಾರು ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಮಾಧ್ಯಮ ಕ್ಷೇತ್ರದಲ್ಲಿ ವಿಕೇಂದ್ರೀಕರಣ ಅಗತ್ಯವಿದ್ದು, ವಿವಿಧ ವರ್ಗಗಳ ಧ್ವನಿಗೆ ವೇದಿಕೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ‘ಸುಲೇಪೇಟ ರತ್ನ’ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ
ಜಗನ್ನಾಥ ಶೇರಿಕಾರ್ (ಮಾಧ್ಯಮ), ಡಾ. ಶಶಿಕಾಂತ ಶೆಳ್ಳಗಿ (ವೈದ್ಯಕೀಯ), ಮಲ್ಲಿಕಾರ್ಜುನ ದೇಸಾಯಿ (ಕೃಷಿ), ಸಂಗಪ್ಪ ಶೆಟ್ಟಿ (ಸಾಮಾಜಿಕ) ಹಾಗೂ ನಿವೃತ್ತ ಪ್ರಾಂಶುಪಾಲ ನಿಂಗಪ್ಪ ಹಿರೇಕುರಬ್ (ಶಿಕ್ಷಣ) ಅವರಿಗೆ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕøತರನ್ನು ಕಾರ್ಯಕ್ರಮಕ್ಕೂ ಮುನ್ನ ಬಸವೇಶ್ವರ ವೃತ್ತದಿಂದ ಮಹಾಂತೇಶ್ವರ ಕಲ್ಯಾಣ ಮಂಟಪದವರೆಗೆ ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆಯ ಮೂಲಕ ಕರೆತರಲಾಯಿತು.
ಸುಗುರ ಚನ್ನರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು. ದಯಾನಂದ ರೆಮ್ಮಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಿಂಗರಾಜಸ್ವಾಮಿ ಸ್ವಾಗತಿಸಿದರು. ಸೈಯದ್ ವಸೀಮ್ ವಂದಿಸಿದರು. ಅಶೋಕ ಹುವಿನಬಾವಿ ಕಾರ್ಯಕ್ರಮವನ್ನು ನಿರೂಪಿಸಿದರು
ಕಾರ್ಯಕ್ರಮದಲ್ಲಿ ಅನೀಲ ಜಮಾದಾರ್, ಮಹಾರುದ್ರಪ್ಪ ದೇಸಾಯಿ, ತಾಹೇರ್ ಪಟೇಲ್, ಅತೀಷ ಪವಾರ್, ಬಸವರಾಜ ಮಾಲಿ, ಮಸ್ತಾನ ಅಲಿ ಪಟ್ಟೆದ್ದಾರ, ಗೋಪಾಲರಾವ್ ಕಟ್ಟಿಮನಿ, ರುದ್ರಶೆಟ್ಟಿ ಪಡಶೆಟ್ಟಿ, ಶರಣು ಪಾಟೀಲ ಮೋತಕಪಳ್ಳಿ, ಮೇಘರಾಜ ರಾಠೋಡ್, ಆನಂದಕುಮಾರ್ ಟೈಗರ್, ಶಿವಕುಮಾರ್ ಸೊಂತ, ಮಹೇಶ್ ಬೇಮಳಗಿ, ವಿಜಯಕುಮಾರ್ ಚೆಂಟಗೆ, ಶಿವಕುಮಾರ್ ಸಜ್ಜನ, ಶಾಮರಾವ್ ಚಿಂಚೋಳಿ, ಶಿವಶರಣಪ್ಪ ಕುಂಬಾರ್, ಚಾಂದಪಾಶಾ ಮೊಮಿನ್, ಜಹೀರೊದ್ದೀನ್ ಪಟೇಲ್, ನಸೀರ ಮದರಗಿ, ರಾಮರೆಡ್ಡಿ ರುದ್ರಮುನಿ, ಮೋಯಿನ್ ಮೊಮಿನ್, ಸುನೀಲಕುಮಾರ ಕೋರಿ ರಾಮತೀರ್ಥಕರ್, ಶಿವಾನಂದ ಸ್ವಾಮಿ, ನಾಮದೇವ ಪಾಟೀಲ, ಬಾಬಣ್ಣ ಗುಲಗುಂಜಿ, ಅಬ್ದುಲ್ ಬಾಸಿದ್, ಕೆಎಂ ಬಾರಿ, ಪರಮೇಶ್ವರ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು





















