Home ಜಿಲ್ಲೆ ಕಲಬುರಗಿ ಜೂಜಾಟ:10 ಜನರ ಬಂಧನ

ಜೂಜಾಟ:10 ಜನರ ಬಂಧನ

ಕಲಬುರಗಿ,ಜು.13-ಆರ್.ಜಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೀರ್ತಿ ನಗರ ಸರಕಾರಿ ಶಾಲೆ ಹತ್ತಿರ ಮತ್ತು ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟನೂರ (ಡಿ) ಸೀಮಾಂತರದ ಕೇರಿಬಸಮ್ಮ ದೇವಸ್ಥಾನ ಹತ್ತಿರ ಜೂಜಾಟವಾಡುತ್ತಿದ್ದ 10 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಕೀರ್ತಿ ನಗರ ಸರಕಾರಿ ಶಾಲೆ ಹತ್ತಿರ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಆರ್.ಜಿ.ನಗರ ಪೊಲೀಸ್ ಠಾಣೆ ಎಎಸ್‍ಐ ಮಲ್ಲಿಕಾರ್ಜುನ ಜಾನೆ, ಸಿಬ್ಬಂದಿಗಳಾದ ಮಲ್ಲನಗೌಡ, ಉಮೇಶ ಮತ್ತು ಆರೇಶ್ ಅವರು ದಾಳಿ ನಡೆಸಿ ಶಬ್ಬೀರ್ ಮೂಲಗೆ, ಸತೀಶ್ ಹೋಳ್ಕರ್, ಶಿವಕುಮಾರ ದೊಡ್ಡಮನಿ, ಸೈಫನ್ ಖುರೇಷಿ, ರಾಘವೇಂದ್ರ ಭಾರತಿ ಎಂಬುವವರನ್ನು ಬಂಧಿಸಿ 19,070 ನಗದು eಪ್ತಿ ಮಾಡಿದ್ದಾರೆ.
ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟನೂರ (ಡಿ) ಸೀಮಾಂತರದ ಕೇರಿ ಬಸಮ್ಮ ದೇವಸ್ಥಾನದ ಹತ್ತಿರ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಪಿಐ ಚಂದ್ರಶೇಖರ್, ಸಿಬ್ಬಂದಿಗಳಾದ ಈರಣ್ಣ, ಫಿರೋಜ್ ಖಾನ್, ವಿಠೋಬಾ ಮತ್ತು ಬೋಗೇಶ್ ಅವರು ದಾಳಿ ನಡೆಸಿ ಬಾಬುರಾವ ತಳವಾರ, ನಾಗರೆಡ್ಡಿ, ಹಣಮಂತರಾಯ ಕುಂಬಾರ, ಸತೀಶ್ ಯಾದವ್, ಸಿದ್ದಣ್ಣ ಹೊನ್ನಕೆರೆ ಎಂಬುವವರನ್ನು ಬಂಧಿಸಿ 7,100 ರೂ.ನಗದು ಜಪ್ತಿ ಮಾಡಿದ್ದಾರೆ.
ಆರ್.ಜಿ.ನಗರ ಮತ್ತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಗಳಲ್ಲಿ ಪ್ರತ್ಯಕ ಪ್ರಕರಣ ದಾಖಲಾಗಿದೆ.