
ಕಲಬುರಗಿ,ಮೇ 21: ನಗರದ ವಿಶ್ವಾಂಜನೇಯ ದೇವಸ್ಥಾನದಲ್ಲಿ ಅಧಿಕ ಮಾಸದ ಅಂಗವಾಗಿ ಶ್ರೀ ವಿಶ್ವಾಂಜನೇಯ ಸೇವಾ ಸಮಿತಿ, ಸಂಸ್ಕಾರ ಭಾರತಿ ಹಾಗೂ ಶ್ರೀ ಭವಾನಿ ಶಂಕರ ಭಜನಾ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಭಕ್ತಿಭಾವಪೂರ್ಣ ಭಜನಾ ಕಾರ್ಯಕ್ರಮ ನಡೆಯಿತು.
ಅಧಿಕ ಮಾಸವು ಭಕ್ತಿ, ಪೂಜೆ ಹಾಗೂ ಪುಣ್ಯಕಾರ್ಯಗಳಿಗೆ ಮೀಸಲಾದ ಪವಿತ್ರ ಕಾಲವೆಂದು ಪರಿಗಣಿಸಲಾಗುತ್ತದೆ. ಈ ತಿಂಗಳಲ್ಲಿ ಶ್ರೀಹರಿಯ ನಾಮಸ್ಮರಣೆ ಮತ್ತು ಭಜನೆ ಮಾಡುವುದರಿಂದ ಮನಸ್ಸಿಗೆ ಶಾಂತಿ ಹಾಗೂ ಆತ್ಮಕ್ಕೆ ಶುದ್ಧಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಧರ್ಮ, ದಾನ ಮತ್ತು ಸತ್ಕಾರ್ಯಗಳಲ್ಲಿ ತೊಡಗುವುದರಿಂದ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ ಎಂದು ಹಿರಿಯರು ಹೇಳುತ್ತಾರೆ. ವಿಶೇಷವಾಗಿ ಮಹಿಳೆಯರು ಈ ಮಾಸದಲ್ಲಿ ವ್ರತ, ಪೂಜೆ ಹಾಗೂ ಭಜನೆಗಳಲ್ಲಿ ಭಾಗವಹಿಸಿ ಕುಟುಂಬದ ಸುಖಶಾಂತಿಗಾಗಿ ಪ್ರಾರ್ಥಿಸುತ್ತಾರೆ. ದೇವರ ಕೃಪೆ ಮತ್ತು ಭಕ್ತರ ಏಕತೆ ಹೆಚ್ಚಿಸುವಲ್ಲಿ ಅಧಿಕ ಮಾಸದ ಆಚರಣೆಗಳು ಮಹತ್ವದ ಪಾತ್ರವಹಿಸುತ್ತವೆ.ಈ ಹಿನ್ನೆಲೆಯಲ್ಲಿ ಅಧಿಕಮಾಸದ ಪರ್ಯಂತ ಇಲ್ಲಿ ವಿಶೇಷ ಭಜನಾ ಕಾರ್ಯಕ್ರಮ ನಡೆಯುತ್ತಿದೆ.
ಈ ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತಿ ಪ್ರಧಾನ ಕಾರ್ಯದರ್ಶಿ ಡಾ. ಅಂಬುಜಾ ಮಳಖೇಡಕರ, ಅಧ್ಯಕ್ಷರಾದ ಲೀಲಾವತಿ ಕುಲಕರ್ಣಿ, ಕೋಶಾಧ್ಯಕ್ಷ ಜಯಚಾರ್ಯ ಬಾಟೆ, ದೀಪಾ ಕುಲಕರ್ಣಿ, ಅನಿತಾ ಕುಲಕರ್ಣಿ, ಅಂಜನಾಬಾಯಿ ಕುಲಕರ್ಣಿ, ವಿಠ್ಠಲರಾವ ಕುಲಕರ್ಣಿ, ಶ್ರೀಪತರಾವ ಗುಮಾಸ್ತೆ, ಗೋಪಾಲಕೃಷ್ಣ ಓಂಕಾರ, ವನಮಾಲಾಬಾಯಿ ಮಳಖೇಡ್ಕರ್, ಮಂಜುಳಾ ಜೋಶಿ, ಸುಧಾ ಜೋಶಿ, ಪದ್ಮಜಾ ಭೀಮಳ್ಳಿ, ಶರಣಮ್ಮಾ, ಸುಮಿತ್ರಾಬಾಯಿ, ವಿಜಯಲಕ್ಷ್ಮೀ ಗುಮಾಸ್ತೆ, ಪದ್ಮಜಾ ಕುಲಕರ್ಣಿ, ಭಾರ್ಗವಾ ಕುಲಕರ್ಣಿ, ಸರಿತಾ ಚಾಗಿ, ಜ್ಯೋತಿ ಚಾಗಿ, ಪೂಜಾ ವೀರೇಶ, ಜ್ಯೋತಿ ಪಟವರ್ಧನ, ಪ್ರತಿಭಾ ಅಜಯ ಹಾಗೂ ವಿಶ್ವರಾಧ್ಯ ಕಾಲೋನಿಯ ಮಹಿಳೆಯರು ಉಪಸ್ಥಿತರಿದ್ದರು.






















