Home ಜಿಲ್ಲೆ ಕಲಬುರಗಿ ಸಕಾಲದಲ್ಲಿ ಮಾಹಿತಿ ನೀಡದ ಅಧಿಕಾರಿಗಳಿಗೆ ದಂಡ: ಬಿ.ವೆಂಕಟಸಿಂಗ್

ಸಕಾಲದಲ್ಲಿ ಮಾಹಿತಿ ನೀಡದ ಅಧಿಕಾರಿಗಳಿಗೆ ದಂಡ: ಬಿ.ವೆಂಕಟಸಿಂಗ್

ಕಲಬುರಗಿ,ಮೇ.8-ಸಕಾಲಕ್ಕೆ ಮಾಹಿತಿ ನೀಡಲು ನಿರ್ಲಕ್ಷ್ಯ ವಹಿಸುವುದು ಸೇರಿದಂತೆ ವಿಚಾರಣೆಗೆ ಗೈರು ಹಾಜರಾಗಿ ಆಯೋಗದ ನೋಟಿಸ ಗೆ ಸ್ಪಂದನೆ ನೀಡದ ಕಾರಣ ಕಲ್ಬುರ್ಗಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಹಾಗೂ ಗಂಗಾವತಿ ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ಪಾಲಾನಾ ಅಭಿಯಂತರ ದೇವಣ್ಣ ಕಟ್ಟಿ, ರಾಯಚೂರು ತಾಲೂಕು ಗ್ರೇಡ್ – 2 ತಹಸೀಲ್ದಾರ್ ಪರಶುರಾಮ್ ಸೇರಿ ಹಲವು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯತ ಕಾರ್ಯದರ್ಶಿಗಳಿಗೆ ರಾಜ್ಯ ಮಾಹಿತಿ ಆಯೋಗದ ಕಲ್ಬುರ್ಗಿ ಪೀಠ ದಿಂದ ದಂಡ ವಿಧಿಸಿ ಆದೇಶ ಮಾಡಲಾಗಿದೆ ಎಂದು ರಾಜ್ಯ ಮಾಹಿತಿ ಆಯುಕ್ತರಾದ ಬಿ.ವೆಂಕಟ ಸಿಂಗ್ ತಿಳಿಸಿದ್ದಾರೆ.
ಏಪ್ರಿಲ್ ತಿಂಗಳಿನಲ್ಲಿ ನಡೆದ ವಿಚಾರಣೆ ವೇಳೆ ಗೈರು ಹಾಜರಾಗಿದ್ದಲ್ಲದೆ, ಮಾಹಿತಿ ನೀಡದ ಕಾರಣ ಕಲ್ಬುರ್ಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶ್ರೀ ಲಕ್ಷ್ಮಣ ಶೃಂಗೇರಿಗೆ 10 ಸಾವಿರ, ಗಂಗಾವತಿ ತಾಲೂಕು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶ್ರೀ ದೇವಣ್ಣ ಕಟ್ಟಿಗೆ 15 ಸಾವಿರ,ರಾಯಚೂರು ತಾಲೂಕು ಗ್ರೇಡ್ 2 ತಹಸೀಲ್ದಾರ್ ಪರಶುರಾಮ ಗೆ 5 ಸಾವಿರ,ಜೇವರ್ಗಿ ತಾಲೂಕಿನ ಹುಲ್ಲೂರ ಗ್ರಾ.ಪಂ ಕಾರ್ಯದರ್ಶಿ ಮಲ್ಲಿಕಾರ್ಜುನಗೆ 5 ಸಾವಿರ, ಸುರುಪುರ ತಾಲೂಕಿನ ಆಲ್ದಾಳ ಗ್ರಾ.ಪಂ. ಕಾರ್ಯದರ್ಶಿ ರಾಜಕುಮಾರ ಸುಬೆದಾರಗೆ 10 ಸಾವಿರ, ಮಟ್ಟಿ ತಾಲೂಕಿನ ಆರೋಲಿ ಗ್ರಾಪಂ ಪಿ.ಡಿ.ಓ ರಘುನಾಥಗೆ 5 ಸಾವಿರ, ಆಳಂದ ತಾಲೂಕಿನ ಯಲಸಂಗಿ ಗ್ರಾ.ಪಂ ಪಿ.ಡಿ.ಓ ಜಗದೀಶಗೆ 15 ಸಾವಿರ, ಸುರಪುರ ತಾಲೂಕಿನ ನಗನೂರು ಗ್ರಾಪಂ ಕಾರ್ಯದರ್ಶಿಯಾದ ಮಡಿವಾಳಪ್ಪಗೆ 10 ಸಾವಿರ, ಶಹಪುರ ತಾಲೂಕಿನ ಗೋಗಿ.ಕೆ. ಗ್ರಾ.ಪಂ. ಪಿ.ಡಿ.ಓ. ಸಿದ್ರಾಮಗೆ 10 ಸಾವಿರ, ಸಂಡೂರು ತಾಲೂಕಿನ ಹೊಸದರೋಜ ಗ್ರಾಪಂ ಕಾರ್ಯದರ್ಶಿ ಕಲ್ಲಪ್ಪಗೆ 10 ಸಾವಿರ, ಯಾದಗಿರ ತಾಲೂಕಿನ ಸೈದಾಪುರ ಗ್ರಾ.ಪಂ ಪಿ.ಡಿ.ಓ ಮುದುಕಪ್ಪಗೆ 10 ಸಾವಿರ, ವಡಗೇರಾ ತಾಲೂಕಿನ ತಡಿಬಿಡಿ ಗ್ರಾ.ಪಂ. ಕಾರ್ಯದರ್ಶಿ ಯಂಕನಗೌಡಗೆ 5 ಸಾವಿರ, ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಪಂ ಕಾರ್ಯದರ್ಶಿ ಶ್ರೀಮತಿ ಜೋತಿ ರೆಡ್ಡರ್‍ಗೆ 10 ಸಆವಿರ ಕಲ್ಬುರ್ಗಿ ತಾಲೂಕಿನ ಹಾಗಾರಗ ಗ್ರಾ.ಪಂ. ಕಾರ್ಯದರ್ಶಿ ವೇದಾಂಗಗೆ 5 ಸಾವಿರ, ಲಿಂಗಸೂಗೂರು ತಾಲೂಕಿನ ಪೈದೊಡ್ಡಿ ಗ್ರಾ.ಪಂ.ನ ಕಾರ್ಯದರ್ಶಿ ಭೀಮಣ್ಣಗೆ 10 ಸಾವಿರ, ಯಾದಗಿರ ತಾಲೂಕಿನ ರಾಮ ಸಮುದ್ರ ಗ್ರಾ.ಪಂ. ಕಾರ್ಯದರ್ಶಿ ಗಾಲಿಬಸಾಬ ಗೆ 5 ಸಾವಿರ ಹಾಗೂ ರಾಯಚೂರು ತಾಲೂಕಿನ ಗ್ರೇಡ್-2 ತಹಶೀಲದಾರ ಪರುಶುರಾಮಗೆ 5 ಸಾವಿರ ಸೇರಿ ಒಟ್ಟು 18 ಅಧಿಕಾರಿಗಳಿಗೆ ಏಪ್ರೀಲ್ ತಿಂಗಳಿನಲ್ಲಿ 1 ಲಕ್ಷ 50 ಸಾವಿರ ದಂಡ ವಿಧಿಸಲಾಗಿದೆ ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಪ್ರೀಲ್ ತಿಂಗಳಲ್ಲಿ 564 ಪ್ರಕರಣಗಳು ವಿಚಾರಣೆಗೆ ಕೈಗೆತ್ತಿಕೊಂಡು 229 ಪ್ರಕರಣಗಳು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತಾವು ಅಧಿಕಾರ ಸ್ವೀಕರಿಸಿದ ಬಳಿಕ ಒಟ್ಟು 3,084 ಪ್ರಕರಣಗಳು ಕೈಗೆತ್ತಿಕೊಂಡು 88 ದಿನ ವಿಚಾರಣೆ ನಡೆಸಿ 1,308 ಪ್ರಕರಣಗಳು ವಿಲೇವಾರಿ ಮಾಡಿರುವುದಾಗಿ ಆಯುಕ್ತರಾದ ಬಿ.ವೆಂಕಟಸಿಂಗ್ ತಿಳಿಸಿದ್ದಾರೆ.
ಪ್ರಕರಣಗಳ ತ್ವರಿತ ವಿಲೇವಾರಿಗೆ ಅನೂಕೂಲವಾಗಲು ಅಧಿಕಾರಿಗಳಿಗೆ ಮಾಹಿತಿ ಹಕ್ಕು ಅಧಿನಿಯಮ ಕುರಿತು ಅರಿವು ಮುಡಿಸಲು ಈಗಾಗಲೇ ಬಳ್ಳಾರಿ, ಬೀದರ್, ಕಲ್ಬುರ್ಗಿ ಹಾಗೂ ಕೊಪ್ಪಳದಲ್ಲಿ ಕಾರ್ಯಗಾರ ನಡೆಸಿದ್ದು ಈ ತಿಂಗಳ 30 ರಂದು ವಿಜಯನಗರ ಜಿಲ್ಲೆಯಲ್ಲಿ ಕಾರ್ಯಗಾರ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ.