
ಜೇವರಗಿ,ಮೇ.8: ತಾಲೂಕು ಕಾನೂನು ಸೇವೆಗಳ ಸಮಿತಿ,ವಕೀಲರ ಸಂಘ ಮೊದಲಾದ ಸಂಘಟನೆಗಳ ಸಹಯೋಗದಲ್ಲಿ ಪಟ್ಟಣದ ಹಳೆಅತಿಥಿ ಗೃಹದಲ್ಲಿ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು.
ಹಿರಿಯ ಶ್ರೇಣಿ ಸಿವಿಲ್ ಕೋರ್ಟ ನ್ಯಾಯಾಧೀಶ ತಯ್ಯಬ್ ಸುಲ್ತಾನ್,ತಾಲೂಕ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಶಿಲ್ಪಿ, ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಭಾಷೆ ಪಟೇಲ್ ಮಾಲಿ ಪಾಟೀಲ್ ಯಾಳವಾರ, ರಾಜ್ಯ ಕಟ್ಟಡ ಕಾರ್ಮಿಕ ಸಂಘದ ಉಪಾಧ್ಯಕ್ಷ ಶಂಕರ್ ಕಟ್ಟಿ ಸಂಗಾವಿ, ಡಿಸಿಸಿ ಬ್ಯಾಂಕ ನಿರ್ದೇಶಕ ಬಸವರಾಜ್ ಪಾಟೀಲ್ನರಿಬೋಳ, ವಕೀಲರಾದ ಎಂ ಡಿ ಮನ್ಸೂರ್ ಖಾನ್ ಅಹ್ಮದ್, ವಿಜಯಕುಮಾರ್ ಪಾಟೀಲ್ ನರಬೋಳ, ಅಪ್ಪ ಸಾಹೇಬ್ ಮಡಿವಾಳ್ಕರ್,ತಾಲೂಕು ಕಾರ್ಮಿಕ ಇಲಾಖೆ ಅಧಿಕಾರಿ ಕೆ ಎಸ್ ಪ್ರಸನ್ನ, ಕೋರ್ಟ್ ಸರ್ಕಾರಿ ಅಭಿಯೋಜಕರಾದ ನಾಗವೇಣಿ ,ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ್ ಪೂಜಾರಿ. ಸೇರಿದಂತೆ ಅನೇಕರಿದ್ದರು






















