Home ಜಿಲ್ಲೆ ಕಲಬುರಗಿ ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಳ್ಳಿ: ನರಿಬೋಳ

ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಳ್ಳಿ: ನರಿಬೋಳ

ಜೇವರಗಿ,ಮೇ 8: ವಿದ್ಯಾರ್ಥಿಗಳು ದೂರದೃಷ್ಟಿ ಮತ್ತು ದೀರ್ಘಕಾಲೀನ ಗುರಿ ಹೊಂದಿರಬೇಕು. ಶೈಕ್ಷಣಿಕ ಸಾಧನೆಯ ಜತೆಯಲ್ಲಿ ಶಿಸ್ತು, ಮೌಲ್ಯಗಳನ್ನು ರೂಢಿ-ಸಿಕೊಳ್ಳಬೇಕು’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ ನರಿಬೋಳ ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧ ಕಚೇರಿ ಎದುರಿಗಿರುವ ಮಹಾಲಕ್ಷ್ಮಿ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಸಾಧಕರ ಸನ್ಮಾನ ಹಾಗೂ ವಾರ್ಷಿಕೋತ್ಸವ ಸಮಾರಂಭಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪುಸ್ತಕ ಮತ್ತು ಇಂಟರ್‍ನೆಟ್‍ಗಳಿಂದ ಮಾತ್ರವಲ್ಲದೇ ಸಮಾಜ ಹಾಗೂ ಅನು ಭವಸ್ಥರಿಂದಲೂ ಜ್ಞಾನ ಸಂಪಾದನೆ ಮಾಡುವುದು ಅಗತ್ಯ ಎಂದರು.ವೇದಿಕೆಯಲ್ಲಿ ಶಖಾಪುರ ತಪೆÇೀವನಮಠದ ಡಾ.ಸಿದ್ದರಾಮ ಶಿವಾಚಾರ್ಯರು, ಪಪಂ ಮಾಜಿ ಅಧ್ಯಕ್ಷಷಣ್ಮುಖಪ್ಪ ಸಾಹು ಗೋಗಿ, ಸಾರಿಗೆ ಇಲಾಖೆಯ ಈಶ್ವರಪ್ಪ ಹೊಸಮನಿ, ಗ್ರಂಥಪಾಲಕ ವಿನೋದಕುಮಾರ, ಹಣಮಂತ ಪೂಜಾರಿ, ಬಸವರಾಜ ಭೋರಗಿ, ಕಾಲೇಜಿನ ಅಶೋಕಕುಮಾರ ಕಾಬಾ, ಮರೆಪ್ಪ ಬೇಗಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷೆ ಮಂಜುಳಾ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಈಶ್ವರ ಹಿಪ್ಪರಗಿ, ಸಿದ್ದಲಿಂಗಪ್ಪ ಬಡಿಗೇರ, ಶಿವಶರಣಪ್ಪ ಹಳಿಮನಿ, ಶಂಕರಲಿಂಗ ಪೂಜಾರಿ, ಚಂದ್ರಶೇಖರ ಪಾಟೀಲ, ಸಂಗಮೇಶ ಸಂಕಾಲಿ, ಶ್ರೀಶೈಲ ಖಣದಾಳ, ಶೃತಿ ವಣಿಕ್ಯಾಳ, ಗೌರಮ್ಮ ಕಟ್ಟಿಸಂಗಾವಿ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು. ಉಪನ್ಯಾಸಕ ಮಲ್ಲಿಕಾರ್ಜುನ ನೇದಲಗಿ ಸ್ವಾಗತಿಸಿದರು, ಸಾವಿತ್ರಿ ಮನಗೂಳಿನಿರೂಪಿಸಿದರು, ಸುರೇಶ ಹಿರೇಮಠವಂದಿಸಿದರು.