Home ಜಿಲ್ಲೆ ಬೀದರ ಸಾಂಸ್ಕøತಿಕ ನಗರವಾಗಿ ಮಾರ್ಪಟ್ಟಿರುವುದು ಸಂತಸ

ಬೀದರ ಸಾಂಸ್ಕøತಿಕ ನಗರವಾಗಿ ಮಾರ್ಪಟ್ಟಿರುವುದು ಸಂತಸ

ಬೀದರ:ಮೇ.8:ನಿರಂತರ ಕನ್ನಡ ಚಟುವಟಿಕೆಗಳು, ಸಾಹಿತ್ಯಿಕ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಂದ ಜನರ ನೆಮ್ಮದಿ ಹೆಚ್ವಿಸಿದೆ. ಕನ್ನಡ ಭಾμÉ, ಬಾಂಧವ್ಯ, ಏಳ್ಗೆಗಾಗಿ ಮಿಡಿಯುವ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥೆ ಕನ್ನಡಿಗರ ಮನ ಮಿಡಿಯುವ ಸಂಸ್ಥೆ ಎಂದು ಬೀದರ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ ಶೈಲೇಂದ್ರ ಕೆ ಬೆಲ್ದಾಳೆ ನುಡಿದರು.

ಡಾ ಚೆನ್ನಬಸವ ಪಟ್ಟದ್ದೇವರ ರಂಗ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಕ್ಲಬ್ ಜಂಟಿ ಸಹಯೋಗದೊಂದಿಗೆ ಇತ್ತೀಚಿಗೆ 112ನೇ ಕ.ಸಾ.ಪ. ಸಂಸ್ಥಾನ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಶಾಸಕರಾದ ಡಾ ಶೈಲೇಂದ್ರ ಕೆ ಬೆಲ್ದಾಳೆ ಮುಂದುರೆದು ಮಾತನಾಡುತ್ತ.. ಹತ್ತಾರು ಕನ್ನಡ ಪರ ಸಂಘಟನೆಗಳ ತಾಯಿ ಕ.ಸಾ.ಪ. ಕನ್ನಡ ಬೆಳೆದರೆ ನಾವು ಬೆಳೆದಂತೆ, ಇಂದು ಇಂಗ್ಲಿμï ಮಯ ವಾತಾವರಣದಲ್ಲೂ ಕನ್ನಡಕ್ಕೆ ತೊಂದರೆ ಆಗದಂತೆ ನಿರಂತರವಾಗಿ ಸುರೇಶ ಚೆನ್ನಶೆಟ್ಟಿ ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪ ವೃಕ್ಷ ಎನ್ನುವ ಕವಿ ವಾಣಿಯಂತೆ ದುಡಿಯುತ್ತಿದ್ದಾರೆ. ಅನೇಕ ಜಿಲ್ಲೆಯ ಮಕ್ಕಳು 125 ಕ್ಕೆ 125 ಅಂಕ ಪಡೆದು ಗಡಿ ಭಾಗದ ಬೀದರನಲ್ಲಿ ಕನ್ನಡಕ್ಕೆ ತೊಂದರೆ ಇಲ್ಲ ಎಂಬ ಮಾತು ಸಾಬೀತು ಮಾಡಿದ ಮಕ್ಕಳಿಗೆ ಶುಭ ಕೋರಿದರು.

ಜ್ಞಾನ ಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಡಾ ಪೂರ್ಣಿಮಾ ಜಿ ಅನುಭಾವ ನಿವೇದನೆ ಮಾಡುತ್ತ.. ನಾವೆಲ್ಲ ಎಲ್ಲೆ ಇರಲಿ ದಿನ ನಿತ್ಯ ಕನ್ನಡ ಬಳಸುವುದು ಮರೆಯಬಾರದು. ಭಾμÉ ಯಾವುದೇ ಇರಲಿ ಅದರ ಆಳ ಇತಿಹಾಸ ಅರ್ಥೈಸಿ ಕೊಳ್ಳಬೇಕು. ಅನೇಕ ವರ್ಷಗಳ ಇತಿಹಾಸ ನಮ್ಮ ಕನ್ನಡಕ್ಕಿದ್ದು ಅದರ ಬಳಕೆ ನಮ್ಮಿಂದಲೇ ಆಗಬೇಕು. ಅನೇಕ ಹಿರಿಯರು, ಮೇಧಾವಿಗಳು, ಹೋರಾಟಗಾರರು ಕನ್ನಡ ಬೆಳೆಸಲು ತಮ್ಮ ಜೀವನದಲ್ಲಿ ಅನೇಕ ಹೋರಾಟ ಮಾಡಿದ್ದಾರೆ. ಕನ್ನಡ ಇದು ನಮ್ಮ ತಾಯಿ ಭಾμÉ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸಂಘ ಸಂಸ್ಥೆಗಳಿಗಿಂತ ನಮ್ಮ ಮೇಲೂ ಇದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಸುರೇಶ ಎಚ್ ಜಿ ನಮ್ಮದು ಸುಂದರ ನಾಡು, ಸೌಂದರ್ಯ ಬೀಡು, ಪರಂಪರೆ ಇತಿಹಾಸ ಮೆರೆದ ನಾಡು, ಇದರ ಕಲ್ಪನೆ ಅಂದಿಗಿಂತ ಇಂದಿನ ಮಕ್ಕಳಿಗೆ ತಲುಪಿಸ ಬೇಕಾದ ಕರ್ತವ್ಯ ಪಾಲಕ, ಪೆÇೀಷಕ, ಸಮಾಜದ ಮೇಲಿದೆ. ನಮಗೆ ನಾವೇ ಬೆಲೆ ಕೊಡದಿದ್ದರೆ ಮುಂದೆ ಗತಿಯೇನು ಎಂಬುದು ಒಂದ್ಸಲ್ ಅರ್ಥೈಸಿಕೊಳ್ಳಲೇ ಬೇಕು. ಮಕ್ಕಳ ಕೈಗೆ ಮೊಬೈಲ ಕೊಡಬೇಡಿ, ಇದರ ಹೊರತು ಪಡಿಸಿ ಪುಸ್ತಕ ಕೊಡಿ. ಪುಸ್ತಕವನ್ನು ತಲೆ ಕೆಳಗೆ ಮಾಡಿ ಓದಿದರೆ ಅದು ವ್ಯಕ್ತಿಗಳನ್ನು ತಲೆ ಎತ್ತಿ ಮೆರೆಯುವಂತೆ ಮಾಡುತ್ತದೆ
ಈ ಸಾಲಿನ ಹತ್ತನೇ ತರಗತಿ ಪರೀಕ್ಷೆ ಫಲಿತಾಂಶ ನನಗೆ ನೆಮ್ಮದಿ ತಂದಿದೆ..ಇದರಲ್ಲಿ ಪಾಲಕರ ಶಿಕ್ಷಕರ, ಸಂಘ ಸಂಸ್ಥೆಗಳ ಪಾಲುದಾರಿಕೆ ಮರೆಯುವಂತಿಲ್ಲ. ಮಕ್ಕಳು ಕೇವಲ ಒಂದು ಶಿಕ್ಷಣಕ್ಕೆ ಜೋತು ಬೀಳದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಕ್ರಿಯಾಶೀಲ ರಾಗಲು ಉಪಯುಕ್ತ ಸಲಹೆ ನೀಡಿದರು. ಶಾಹೀನ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಡಾ ಅಬ್ದುಲ್ ಖದೀರ ಮಾತನಾಡಿ.. ಮಕ್ಕಳ ಇಂದಿನ ಸಾಧನೆ ನೋಡಿ ಸಂತಸ ವಾಗುತ್ತಿದೆ. ಈ ವರ್ಷ 112ನೇ ವರ್ಷದ ಕ.ಸಾ.ಪ. ಸಂಭ್ರಮಾಚರಣೆ ಸುಸಂದರ್ಭದಲ್ಲಿ 112 ಮಕ್ಕಳಿಗೆ ಉಚಿತ ಪಿ ಯು ಸಿ ಶಿಕ್ಷಣ ಕೊಡಲು ನಾವು ಬದ್ಧರಾಗಿದ್ದೇವೆ. ಮಕ್ಕಳು ಶೇ.95 ಅಂಕ ಪಡೆದು ಕನ್ನಡ ಮಾಧ್ಯಮ ದಲ್ಲಿ ಓದಿ ಗ್ರಾಮೀಣ ಭಾಗದವರಾಗಿರಬೇಕು. ಅಂಥವರು ನಮ್ಮ ವೆಬ್ ಸೈಟ್ ಗೆ ಅರ್ಜಿಸಲ್ಲಿಸಿ ಲಿಖಿತ ಪರೀಕ್ಷೆಗೆ ಕುಳಿತು ಕೊಂಡು ಹೆಚ್ಚಿನ ಅಂಕ ಪಡೆದವರಿಗೆ ಸೀಟ್ ಕೊಡಲಾಗುವುದು ಎಂದರು.

ವೇದಿಕೆ ಮೇಲೆ ಎನ್ ಎಸ್ ಎಸ್ ಕೆ ಅಧ್ಯಕ್ಷರಾದ ಸೂರ್ಯಕಾಂತ ನಾಗಮಾರಪಳ್ಳಿ, ಡಾ ರಜನೀಶ ವಾಲಿ, ರೇವಣಸಿದ್ದಪ್ಪ ಜಲಾದೆ, ಸೋಮಶೇಖರ ಬಿರಾದಾರ ಚಿದ್ರಿ, ಬಸವರಾಜ ಧನ್ನೂರ, ಡಾ ರಘು ಕೃಷ್ಣಮೂರ್ತಿ,ಡಾ ಶಿವಶಂಕರ ಟೋಕರೆ, ನಿತಿನ ಕರಗಪೂರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳು ಹುಲಸೂರ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ ಕ.ಸಾ.ಪ. ಜಿಲ್ಲಾಧ್ಯಕ್ಷರಾದ ಸುರೆಶ ಚನ್ನಶೆಟ್ಟಿ ನಮ್ಮ ಮಕ್ಕಳಲ್ಲಿ ಪ್ರತಿಭೆ ಇದೆ. ಅದಕ್ಕೆ ಪುರಸ್ಕಾರ ಮಾಡಿದರೆ ಮಕ್ಕಳ ಆತ್ಮ ಸ್ಥೈರ್ಯ ಇಮ್ಮಡಿ ಗೊಳ್ಳುತ್ತದೆ. ಇಂದು 132 ಪ್ರೌಢ ಶಾಲಾ ಮುಖ್ಯ ಗುರುಗಳು 100% ಫಲಿತಾಂಶ ಕ್ಕೆ ಕಾರಣರಾದ ಪ್ರಯುಕ್ತ ಅವರಿಗೆ ಗೌರವ ಜೊತೆಗೆ 125 ಅಂಕಗಳಿಗೆ 125 ಅಂಕ ಪಡೆದ 81 ಮಕ್ಕಳಿಗೆ ಹಾಗೂ ಸಂಭಂಧ ಪಟ್ಟ ಕನ್ನಡ ಭಾμÁ ಶಿಕ್ಷಕರಿಗೆ ಹಾಗೂ 72 ಮಕ್ಕಳು ಶೇ.95 ಅಂಕ ಪಡೆದು ಅಗ್ರ ಶ್ರೇಯಾಂಕ ಪಡೆದವರಿಗೆ ಸನ್ಮಾನಿಸಲಾಗುತ್ತಿದೆ. ಕ.ಸಾ.ಪ ಸಂಸ್ಥಾಪನ ದಿನದಂದು ನಮಗೆ ರೋಟರಿ ಕ್ಲಬ್ ಕೈ ಜೋಡಿಸಿದ್ದು ಅಭಿಮಾನದ ಸಂಗತಿ ಎಂದರು.

ಮೊದಲಿಗೆ ಸಹಾಯಕ ಗವರ್ನರ್ ಹಾವಶೆಟ್ಟಿ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಮಹೇಶ್ವರಿ ಪಾಂಚಾಳ ಗೀತಗಾಯನ ನಡೆಸಿಕೊಟ್ಟರೆ, ಭಾನು ಪ್ರಿಯಾ ಗೌತಮ ಅರಳಿ ತಂಡದವರು ಕನ್ನಡ ಗೀತೆಗಳು ಹಾಗೂ ನಾಡಗೀತೆ ಹಾಡಿದರು. ಇದು ಎಲ್ಲರ ಗಮನ ಸೆಳೆಯಿತು. ರೋಟರಿ ಕ್ಲಬ್ ಬೀದರನ ಅಧ್ಯಕ್ಷರಾದ ಬಸವಕುಮಾರ ಪಾಟೀಲ ಸ್ವಾಗತಿಸಿದರೆ ಕ.ಸಾ.ಪ. ಕಾರ್ಯದರ್ಶಿ ನಿರೂಪಣೆ ಮಾಡಿದರೆ ರೋಟರಿಯನ್ ಅನೀಲಕುಮಾರ ಬಿರಾದಾರ ವಂದಿಸಿದರು.