
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.07: ಟ್ರಡಿಷನಲ್ ಶೊಟೋಕಾನ್ ಕರಾಟೆ ಅಕಾಡೆಮಿ ಕರ್ನಾಟಕದ* ಕರಾಟೆ ವಿದ್ಯಾರ್ಥಿಗಳು *ಅಸ್ಸಾಂ ರಾಜ್ಯದ ಗುಹಾಟಿಯಲ್ಲಿ ಮೇ 16 ಮತ್ತು 17 ರಂದು ನಡೆಯಲಿರುವ 24ನೇ ಅಖಿಲ ಭಾರತ ಕರಾಟೆ ಪಂದ್ಯಾವಳಿಯಲ್ಲಿ* ಬಳ್ಳಾರಿಯ ತೋರಣಗಲ್ಲು ಜಿಂದಾಲ್ ಶಾಲೆಯ ಕರಾಟೆ ಪಟುಗಳು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಕರಾಟೆ ಪಟುಗಳು ಕಟಾ ಮತ್ತು ಕುಮಿತೆ ವಿಭಾಗಗಳಲ್ಲಿ ತೂಕ ಮತ್ತು ವಯೋಮಿತಿಯಲ್ಲಿ *10 ಬಾಲಕರು, 3 ಬಾಲಕಿಯರು, 4 ತರಬೇತುದಾರರು ಭಾಗವಹಿಸಲಿದ್ದಾರೆ* ಎಂದು *ಕರಾಟೆ ಅಕಾಡೆಮಿಯ ಹಿರಿಯ ಕರಾಟೆ ತರಬೇತುದಾರರಾದ ಕಟ್ಟೆ ಸ್ವಾಮಿ ತಿಳಿಸಿದ್ದಾರೆ






















