Home ಜಿಲ್ಲೆ ಕಲಬುರಗಿ ಬೋಳವಾರ ಗ್ರಾಪಂ ಭೂ ಒಡೆತನ ಯೋಜನೆಯಲ್ಲಿ ಅಕ್ರಮ: ಜೈಕನ್ನಡಿಗರ ಸೇನೆ ದೂರು

ಬೋಳವಾರ ಗ್ರಾಪಂ ಭೂ ಒಡೆತನ ಯೋಜನೆಯಲ್ಲಿ ಅಕ್ರಮ: ಜೈಕನ್ನಡಿಗರ ಸೇನೆ ದೂರು

ಕಲಬುರಗಿ, ಮೇ.6- ಜಿಲ್ಲೆಯ ಯಡ್ರಾಮಿ ತಾಲೂಕಿನ ಬೀಳವಾರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಜಮಖಂಡಿ ಗ್ರಾಮದಲ್ಲಿ ಭೂ ಒಡೆತನ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಲ್ಲಿ ನಡೆದಿರುವ ಅಕ್ರಮದ ತನಿಖೆ ಕೈಗೊಳ್ಳುವಂತೆ ಜೈ ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ದತ್ತು ಎಚ್.ಭಾಸಗಿ ಅವರು, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಯಡ್ರಾಮಿ ತಾಲೂಕಿನ ಜಮಖಂಡಿ ಗ್ರಾಮದ ಕೆಲವರು, ಸಫಾಯಿ ಕರ್ಮಚಾರಿಗಳು ಎಂದು ಬೋಗಸ ದಾಖಲೆಗಳನ್ನು ಸೃಷ್ಠಿಸಿ ಭೂ ಒಡೆತನ ಯೋಜನೆಯಡಿ ನಿಗಮಕ್ಕೆ ಅರ್ಜಿ ಸಲ್ಲಿಸಿದ 6 ಜನ ಫಲಾನುಭವಿಗಳ ಹೆಸರಿನಲ್ಲಿ ಜಮೀನು ನೋಂದಣಿ ಮಾಡಿಸಲಾಗಿದೆ. ಈ ಅಕ್ರಮದಲ್ಲ ಶಾಮಿಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ದತ್ತು ಭಾಸಗಿ ಅವರು ಒತ್ತಾಯಿಸಿದ್ದಾರೆ. ಈ ಸಂಧರ್ಬದಲ್ಲಿ ಜೈಕನ್ನಡಿಗರ ಸೇನೆಯ ಪ್ರಮುಖರು ಇದ್ದರು.