Home ಜಿಲ್ಲೆ ಕಲಬುರಗಿ ಸಿಯುಕೆಯಲ್ಲಿ ಅಂತರರಾಷ್ಟ್ರೀಯ ಸಮ್ಮೇಳನದ ಕರಪತ್ರ ಬಿಡುಗಡೆ

ಸಿಯುಕೆಯಲ್ಲಿ ಅಂತರರಾಷ್ಟ್ರೀಯ ಸಮ್ಮೇಳನದ ಕರಪತ್ರ ಬಿಡುಗಡೆ

ಕಲಬುರಗಿ,ಮೇ.6: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ದೇವಾಲಯಗಳ ಆರ್ಥಿಕತೆ, ಪ್ರವಾಸೋದ್ಯಮ ಮತ್ತು ಸಾರ್ವಜನಿಕ ನೀತಿ ವಿಷಯದ ಕುರಿತು ಆಗಸ್ಟ್ 5 ರಿಂದ 7ರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಸಮ್ಮೇಳನದ ಕರಪತ್ರವನ್ನು ಸಿಯುಕೆ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ, ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ ಸೇರಿದಂತೆ ವಿವಿಧ ವಿಭಾಗಗಳ ಅಧ್ಯಾಪಕರಾದ ಪೆÇ್ರ. ಪಾಂಡುರಂಗಾ ವಿ. ಡಾ. ಜಿ. ಮಹೇಂದ್ರ ರೆಡ್ಡಿ, ಪೆÇ್ರ. ಪುಷ್ಪಾ ಸವದತ್ತಿ, ಡಾ. ಎಸ್. ಲಿಂಗಮೂರ್ತಿ, ಪೆÇ್ರ. ದೇವರಾಜ ಸೇರಿದಂತೆ ಇತರೆ ಅಧ್ಯಾಪಕರು ಬಿಡುಗಡೆ ಮಾಡಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ನವ ದೆಹಲಿಯ ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಸಮ್ಮೇಳನವು ಸಿಯುಕೆ ಆವರಣದಲ್ಲಿ ನಡೆಯಲಿದೆ.
ಸಮ್ಮೇಳನದಲ್ಲಿ ದೇವಾಲಯಗಳ ಆರ್ಥಿಕ, ಸಾಮಾಜಿಕ ಹಾಗೂ ಸಾರ್ವಜನಿಕ ನೀತಿ ಸಂಬಂಧಿತ ಆಯಾಮಗಳ ಕುರಿತು ಪ್ರಬಂಧ ಮಂಡನೆ, ಚರ್ಚೆ ಮತ್ತು ಸಂವಾದಗಳು ನಡೆಯಲಿವೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಶಿಕ್ಷಣ ತಜ್ಞರು, ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ವಿವಿಧ ದೇವಾಲಯಗಳ ಆಡಳಿತಾಧಿಕಾರಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ದೇವಾಲಯಗಳು ಮತ್ತು ಪ್ರಾದೇಶಿಕ ಅಭಿವೃದ್ಧಿ, ಜೀವನೋಪಾಯ ಸೃಷ್ಟಿ, ಸಾಂಸ್ಕøತಿಕ ಸಂರಕ್ಷಣೆ ಮತ್ತು ಸ್ಥಿರ ಪ್ರವಾಸೋದ್ಯಮಕ್ಕೆ ನೀಡುವ ಕೊಡುಗೆಯನ್ನು ಅನ್ವೇಷಿಸುವುದು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ. ಆಸಕ್ತರು ದೇವಾಲಯ ಆರ್ಥಿಕತೆ ಮತ್ತು ಅದರ ಆರ್ಥಿಕ ಪರಿಣಾಮ, ಆಡಳಿತ ಮತ್ತು ಕಾನೂನು ಚೌಕಟ್ಟುಗಳು, ಸ್ಥಿರ ಪ್ರವಾಸೋದ್ಯಮ, ಪರಂಪರೆ ಮತ್ತು ಸಾಂಸ್ಕøತಿಕ ಸಂಪತ್ತು, ದೇವಾಲಯ ನಿರ್ವಹಣೆಯಲ್ಲಿ ಡಿಜಿಟಲ್ ನವೀಕರಣ ಮತ್ತು ಕೃತಕ ಬುದ್ಧಿಮತ್ತೆ ಕುರಿತು ಪ್ರಬಂಧ ಮಂಡನೆ ಮಾಡಬಹುದಾಗಿದೆ.
ಸಂಕ್ಷಿಪ್ತ ಪ್ರಬಂಧ ಸಲ್ಲಿಕೆಗೆ ಜೂನ್ 15 ಕೊನೆಯ ದಿನವಾಗಿದ್ದು, ಸಂಪೂರ್ಣ ಪ್ರಬಂಧ ಸಲ್ಲಿಕೆಗೆ ಜುಲೈ 15, 2 ಕೊನೆಯ ದಿನವಾದೆ. ಹೆಚ್ಚಿನ ಮಾಹಿತಿಗಾಗಿ ಡಾ. ಜಿ. ಮಹೇಂದ್ರ ರೆಡ್ಡಿ- 9666851851 ಮತ್ತು ಡಾ. ಎಸ್. ಲಿಂಗಮೂರ್ತಿ-9014030809 ಅವರನ್ನು ಸಂಪರ್ಕಿಸಬಹುದಾಗಿದೆ.