
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.06: ತಾಲೂಕಿನ ನಿಟ್ಟೂರು ಗ್ರಾಮದ ಬಳಿಯ ಸುಕ್ರದಪ್ಪನ ಬೆಟ್ಟದ ಬಳಿಯ ಹೊಲದಲ್ಲಿ ಬಂಡೆಗಲ್ಲು ಶಾಸನ ಪತ್ತೆಯಾಗಿದೆ.
ನಿಟ್ಟೂರಿನಲ್ಲಿರುವ ಅಶೋಕನ ಶಿಲಾಶಾಸನ ಪತ್ತೆಯಾಗಿರುವ ಸ್ಥಳದಿಂದ ಸುಮಾರು 1ಕಿ.ಮೀ ದೂರದಲ್ಲಿರುವ ಈ ಬಂಡೆಗಲು ಶಾಸನವನ್ನು ಸಂಶೋಧನಾರ್ಥಿಗಳಾದ ಅಶೋಕ್ ಅಬಕಾರಿ, ಮನೋಹರ ಸಿ ಎಂ ಗುರುತಿಸಿ, ಕ್ಷೇತ್ರ ಅಧ್ಯಯನಕ್ಕೆ ಧಾರವಾಡದ ಲಿಪಿತಜ್ಞ ಮಾರುತಿ ಭಜಂತ್ರಿ ಹಾಗೂ ಹಿರೇಬೆಣಕಲ್ ಮಂಜುನಾಥ ದೊಡ್ಡಮನಿ ಅವರ ಗಮನಕ್ಕೆ ತಂದರು.
ಶಾಸನವು ಬೃಹತ್ ಆಕಾರದ ಬಂಡೆಯೊಂದರ ಮೇಲೆ ಪ್ರಾಚೀನ ಲಿಪಿಯಲ್ಲಿ ಬರೆಯಲ್ಪಟ್ಟಿದ್ದು, ಶಾಸನವು ಸುಮಾರು ಏಳು ಸಾಲುಗಳನ್ನು ಒಳಗೊಂಡಿದೆ.
ಮೌರ್ಯರ ಆಳ್ವಿಕೆಯನ್ನು ಒಳಗೊಂಡಿರುವ ಪ್ರದೇಶವೆಂದು ಗುರುತಿಸಲಾಗಿತ್ತು ಸದ್ಯ ಪತ್ತೆಯಾಗಿರುವ ಶಾಸನದ ಲಿಪಿಯ ಆಧಾರದಿಂದ ಸುಮಾರು ಆದರಿಂದ ಏಳನೇ ಶತಮಾನ ಬಾದಾಮಿ ಚಾಲುಕ್ಯರ ಕಾಲದಿಂದ ರಾಷ್ಟ್ರಕೂಟರ ಕಾಲಘಟ್ಟಕ್ಕೆ ಸೇರಿದ್ದೆಂದು ಅಂದಾಜಿಸಲಾಗಿದೆ.
ಇತಿಹಾಸ ಸಂಶೋಧಕ ಗಂಗಾವತಿಯ ಶರಣಬಸಪ್ಪ ಕೋಲ್ಕರ ಮಾರ್ಗದರ್ಶನದಲ್ಲಿ ಶಾಸನದ ಅಧ್ಯಯನ ನಡೆಸುತ್ತಿದ್ದು, ಶಾಸನದ ಕುರಿತು ಶೀಘ್ರದಲ್ಲಿಯೇ ಮಾಹಿತಿಯನ್ನು ಒದಗಿಸಲಾಗುವುದು ಎಂದು ಲಿಪಿತಜ್ಞ ಮಾರುತಿ ಭಜಂತ್ರಿ ತಿಳಿಸಿದ್ದಾರೆ.
ಶಾಸನ ಪತ್ತೆಕಾರ್ಯದಲ್ಲಿ ಸ್ಥಳೀಯ ಇತಿಹಾಸ ಮಂಜುನಾಥ, ಕಾಡಸಿದ್ದ, ಹೊನ್ನೂರ, ಗಂಗಾವತಿಯ ಹರನಾಯಕ, ಚಂದ್ರಶೇಖರ್ ಕುಂಬಾರ, ಮದ್ದಾನೆಪ್ಪ ಹೊಸಳ್ಳಿ ಭಾಗವಹಿಸಿದ್ದರು.






















