
ಸಂಜೆವಾಣಿ ವಾರ್ತೆ
ಕೆಂಭಾವಿ:ಮಾ.೨೬: ಪುರಾಣ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ, ಉಲ್ಲಾಸ ದೊರೆಯುತ್ತದೆ ಎಂದು ಪುರಾಣಿಕ ವೆ.ಮೂ. ಸೂರ್ಯಕಾಂತಯ್ಯ ಶಾಸ್ತಿçಗಳು ದುತ್ತರಗಾಂವ್ ಕಲಬುರಗಿ ಹೇಳಿದರು.
ಪಟ್ಟಣ ಸಮೀಪದ ನಗನೂರ ಗ್ರಾಮದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರರ ೧೭೯ನೇ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವಂತನ ಒಲುಮಿಗೆ ನಿರ್ಮಲ ಭಕ್ತಿ ಬೇಕು ಹಾಗೂ ಸಂತಸದ ಬದುಕಿಗೆ ಗುರುವಿನ ಮಾರ್ಗದರ್ಶನ ಬೇಕು. ಪುರಾಣವೆಂದರೆ ಜನರನ್ನು ಭಕ್ತಿ ಮಾರ್ಗದಲ್ಲಿ ನಡೆಸುವುದರ ಜತೆಗೆ ಆತನಲ್ಲಿಯ ದುರ್ಗಣಗಳನ್ನು ತೊಡೆದು ಹಾಕುವುದೆ ಆಗಿದೆ ಎಂದರು.
ಪುರಾಣದಿಂದ ಮನುಷ್ಯನ ಮಾನಸಿಕ ಸ್ಥಿತಿ ಸಮತೋಲನಕ್ಕೆ ಬರುವುದಲ್ಲದೇ, ಆಧ್ಯಾತ್ಮಕತೆ ಒಲವು ಮೂಡಲಿದೆ. ಭಗವಂತ ಯಾವತ್ತೂ ಅಂತರAಗದ ಭಕ್ತಿಗೆ ಒಲಿಯುತ್ತಾನೆ, ಮನೆಯಿಂದಲೇ ಸಂಸ್ಕಾರ ನೀಡುವ ಕಾರ್ಯ ನಡೆಯಬೇಕು ಎಂದ ಅವರು, ಆಧ್ಯಾತ್ಮಿಕ ಪುರಾಣ ಪ್ರವಚನಗಳು ಪ್ರತಿಯೊಬ್ಬರ ಜೀವನಕ್ಕೆ ಬೆಳಕು ನೀಡಬಲ್ಲವು ಎಂದರು.
ಮನುಷ್ಯನ ಮಾನವೀಯ ಮೌಲ್ಯಗಳು ವೃದ್ಧಿಯಾಗಲು ಶರಣರ, ಸಂತರ ಪುಣ್ಯಕಥೆಗಳು ಆಗಾಧವಾಗಿ ಕಾರ್ಯನಿರ್ವಹಿಸುತ್ತವೆ. ಇಂಥಹ ಕಥೆಗಳ ಸಾರ ಪ್ರತಿಯೊಬ್ಬರೂ ಆಲಿಸಿ ಮಾನವ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಷ.ಬ್ರ. ಶ್ರೀ ಸೂಗೂರೇಶ್ವರ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಶರಣಬಸವೇಶ್ವರ ದಾಸೋಹ ಮಠದ ಪೀಠಾಧಿಪತಿ ಪೂಜ್ಯ ಶರಣಪ್ಪ ಶರಣರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಆನಂದಸ್ವಾಮಿ ಚಾಮನಾಳ, ಜಿಪಂ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ, ಮುಖಂಡರಾದ ಸಿದ್ದಣ್ಣ ಸಾಹು ಗೂಗಲ್, ವೀರಯ್ಯಸ್ವಾಮಿ ಸ್ಥಾವರಮಠ, ಸದಾಶಿವರೆಡ್ಡಿ ದೇಸಾಯಿ, ಭೋಜಪ್ಪಗೌಡ ಪೊಲೀಸ್ ಪಾಟೀಲ, ಶಾಂತನAದ ದೇಸಾಯಿ, ಗೊಲ್ಲಾಳಪ್ಪ ತಿಪ್ಪಶೆಟ್ಟಿ, ಶಿವಶಂಕರ ತಿಪ್ಪಶೆಟ್ಟಿ, ಹಳ್ಳೆಪ್ಪ ಹವಾಲ್ದಾರ, ರಾಮಣ್ಣ ದೇಶಪಾಂಡೆ, ಪ್ರಕಾಶಬಾಬು ಪೊಲೀಸ್ ಪಾಟೀಲ, ರಾಹುಸಾಬ ದೇಸಾಯಿ, ಚನ್ನಾರೆಡ್ಡಿ ದೇಸಾಯಿ, ಗುರಣ್ಣ ಸಾಹು ಚಾಮನಾಳ, ನಗನೂರ, ಖಾನಾಪೂರ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
ಜಗದೀಶ ಶರಣರು ಪುರಾಣ ವಾಚಿಸಿದರು. ಶ್ರೀಮಂತ ತಿಪ್ಪಶೆಟ್ಟಿ ಸ್ವಾಗತಿಸಿ, ವಂದಿಸಿದರು. ವಿರೇಶಕುಮಾರ ಕೆಂಭಾವಿ, ಸೋಮಶೇಖರ ಮುದನೂರ ಅವರಿಂದ ಸಂಗೀತ ಸೇವೆ ಜರುಗಿತು. ಶಾಂತನAದ ಲಕ್ಕುಂಡಿ ಅವರು ಪ್ರಸಾದ ಸೇವೆ ಸಲ್ಲಿಸಿದರು.
ತನು, ಮನದಿಂದ ಸೇವೆ ಸಲ್ಲಿಸಿ
ಮಠ ಮಂದಿರಗಳಿಗೆ ಭೌತಿಕ ಆಸ್ತಿಗಿಂತ ಭಕ್ತರೆ ದೊಡ್ಡ ಆಸ್ತಿ. ಆದ್ದರಿಂದ ಶ್ರೀ ಶರಣಬಸವೇಶ್ವರರ ಪುರಾಣ, ಜಾತ್ರಾ ಮಹೋತ್ಸವದ ಯಶಸ್ವಿಗೆ ಪ್ರತಿಯೊಬ್ಬರೂ ತನು, ಮನದಿಂದ ಸೇವೆ ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ ಹೇಳಿದರು. ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಠ, ಮಂದಿರಗಳು ಭಕ್ತರಿಗೆ ಶ್ರದ್ಧಾಕೇಂದ್ರಗಳಾಗಿ ಅವರನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಣೆ ನೀಡುತ್ತಿವೆ ಎಂದು ಹೇಳಿದರು.




























