Home ಜಿಲ್ಲೆ ವಾತ್ಸಲ್ಯ ಕಿಟ್ ವಿತರಣೆ ಕಾರ್ಯಕ್ರಮ

ವಾತ್ಸಲ್ಯ ಕಿಟ್ ವಿತರಣೆ ಕಾರ್ಯಕ್ರಮ

ಬೀದರ:ಫೆ.6:ಮಾತೃಶ್ರೀ ಹೇಮಾವತಿ ವೀ ಹೆಗ್ಗಡೆ ಅಮ್ಮನವರ ಆಶಯದಂತೆ ರಾಜ್ಯ ವಾಪ್ತಿ ವಾತ್ಸಲ್ಯ ಕಾರ್ಯಕ್ರಮ ಅನುಷ್ಠಾನಗೊಂಡಿದ್ದು ಈ ಪಲಾನುಭವಿಗಳಿಗೆ ವಾತ್ಸಲ್ಯ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ದಿನ ಬೀದರ ಜಿಲ್ಲಾ ವ್ಯಾಪ್ತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವತಿಯಿಂದ ದುಡಿಯಲು ಸಾಧ್ಯವಿಲ್ಲದ ವಯೋವೃದ್ಧರಿಗೆ, ನಿರ್ಗತಿಕರಿಗೆ ಸಂಸ್ಥೆವತಿಯಿಂದ ಪ್ರತಿ ತಿಂಗಳು ರೂ 1000/- ಮೊತ್ತ ಮಾಸಾಶನ ನೀಡಲಾಗುತ್ತದೆ. ಪ್ರಸ್ತುತ ಒಟ್ಟು 380 ಪಲಾನುಭವಿಗಳಿದ್ದು ಈ ವರೆಗೂ 150.00(ಲಕ್ಷ ರೂ ) ಮೊತ್ತ ವಿತರಿಸಲಾಗಿರುತ್ತದೆ. ಹಾಗೂ 20 ಜನ ಪಲಾನುಭವಿಗಳಿಗೆ ವಾತ್ಸಲ್ಯ ಮನೆ ರಚನೆ ಮಾಡಿ ನೀಡಲಾಯಿಗಿರುತ್ತದೆ. ಈ ದಿನ ವಾತ್ಸಲ್ಯ ಕಿಟ್ ವಿತರಣೆ ಮಾಡಲಾಗುತ್ತಿದ್ದು, ದೈನಂದಿನ ದಿನ ಬಳಕೆಗೆ ಬೇಕಾಗುವ ಸಾಮಗ್ರಿಗಳಾದ ದಿಂಬು, ಚಾಪೆ, ಬಟ್ಟೆ, ಸೀರೆ, ಸೋಪು, ಬಾಚಣಿಕೆ, ಅಡುಗೆ ಸಾಮಗ್ರಿ, ಕೊಡ, ತಟ್ಟೆ, ಲೋಟ, ಬೊಗಣಿ ಇನ್ನಿತರ ಸಾಮಗ್ರಿಗಳನ್ನು ಈ ದಿನ ಜಿಲ್ಲಾವ್ಯಾಪ್ತಿಯಲ್ಲಿ 22 ಜನರಿಗೆ ಕ್ಷೇತ್ರದಿಂದ ಮಂಜೂರಾತಿಯಾದ “ವಾತ್ಸಲ್ಯ ಕಿಟ್” ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೀದರ ಜಿಲ್ಲಾ ನಿರ್ದೇಶಕರು ಶ್ರೀ ಮುರುಳಿಧರ್ ಹೆಚ್ ಎಲ್. ತಾಲೂಕು ಯೋಜನಾಧಿಕಾರಿಗಳು, ಒಕ್ಕೂಟ ಅಧ್ಯಕ್ಷರು, ವಲಯದ ಮೇಲ್ವಿಚಾರಕರು, ಜ್ಞಾನವಿಕಾಸ ಸಮನ್ವಯ ಅಧಿಕಾರಿ, ಸೇವಾಪ್ರತಿನಿಧಿ ಮತ್ತು ಗ್ರಾಮದ ಸದಸ್ಯರ ಉಪಸ್ಥಿತಿಯಲ್ಲಿ ವಾತ್ಸಲ್ಯ ಕಿಟ್ ವಿತರಣೆ ಮಾಡಲಾಯಿತು.