ಚಿಕ್ಕನಾಯಕನಹಳ್ಳಿ, ಮೇ ೨೨- ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ತೆರಳಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್, ಬಿಜೆಪಿ ಮುಖಂಡ ಕೆಂಕೆರೆ ಸಂತೋಷ್ ಹಾಗೂ ಲೋಕೇಶ್ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪಟ್ಟಣದ ನೆಹರು ಸರ್ಕಲ್ನಲ್ಲಿ ನಡೆದ ಶ್ರದ್ಧಾಂಜಲಿ ಸಂದರ್ಭದಲ್ಲಿ ಅಭಾವೀ.ಲಿಂ.ಮ.ಸಭಾ ತಾಲ್ಲೂಕು ಅಧ್ಯಕ್ಷ ಸಾಸಲು ದಿನೇಶ್ ಮಾತನಾಡಿ, ಮೃತ ದುರ್ದೈವಿಗಳು ಸಮಾಜಕ್ಕೆ ಅನೇಕ ಸೇವೆ ಸಲ್ಲಿಸಿದ್ದರು. ಕೆಂಕೆರೆ ನವೀನ್ ರಾಜಕೀಯ ಕ್ಷೇತ್ರದಲ್ಲಿ ಸರಳತೆಯ ನಾಯಕತ್ವವನ್ನ ಹೊಂದಿದ್ದರು. ಸಂತೋಷ್ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಲೋಕೇಶ್ ಕೂಡ ಸಮಾಜದ ಸೇವೇಯಲ್ಲಿ ಸಾಧನೆಯ ಕನಸುಗಳನ್ನು ಕಂಡಿದ್ದರು. ಅವರ ಅಕಾಲಿಕ ಮರಣದಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಂಬನಿ ಮಿಡಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿರಂಜನ್ ಮಾತನಾಡಿ, ಭಾರತೀಯ ಜನತಾ ಪಾರ್ಟಿಯಲ್ಲಿ ಮೃತರು ಪ್ರಾಮಾಣಿಕ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದರು. ಪಕ್ಷ ಸಂಘಟನೆಯಲ್ಲಿ ನವೀನ್ ಚತುರ ರಾಗಿದ್ದರು. ಸಂತೋಷ್ ಪಕ್ಷದ ಯುವಮೋರ್ಚರಾಗಿ ಕೆಲಸ ನಿರ್ವಹಿಸಿದ್ದರು. ಲೋಕೇಶ್ ಪಕ್ಷದ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಸಾವಿನಿಂದ ಪಕ್ಷಕ್ಕೆ ಹೊಡೆತ ಬಿದ್ದಂತಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಇಟ್ಟಿಗೆ ರಂಗಸ್ವಾಮಯ್ಯ ಎಪಿಎಂಸಿ ಮಾಜಿ ಅಧ್ಯಕ್ಷ ಅಗಸರಹಳ್ಳಿ ಶಿವರಾಜು ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಸವರಾಜು ಹೊನ್ನೇಬಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಿಲಿಟರಿ ಶಿವಣ್ಣ ಮಾತನಾಡಿದರು. ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಟಿ. ಶಂಕರಲಿಂಗಪ್ಪ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ನಿರ್ದೇಶಕ ರವಿ ಶ್ಯಾಮಿಯಾನ, ಪುರಸಭಾ ಸದಸ್ಯ ರೇಣುಕಪ್ರಸಾದ್? ಶ್ರೀ ಉಚ್ಛಸಂಗಪ್ಪನವರ ಮಠದ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ಮಲ್ಲಿಕಾರ್ಜುನಸ್ವಾಮಿ? ವೀ.ಲಿಂ.ಮ. ಸಭಾ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗಂಗಾಧರ್ ಬಿಜೆಪಿ ಮುಖಂಡರುಗಳಾದ ಹರಳೀಕೆರೆ ಉಮೇಶ್?ಅಣೇಕಟ್ಟೆ ರಾಕೇಶ್ ಬಾಚಿಹಳ್ಳಿ ರಾಜಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.